ಕೊಡಗಿನಲ್ಲಿ ಮೀನು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ

ಮಡಿಕೇರಿ, ಏಪ್ರಿಲ್ 12,ಕೊಡಗಿನಲ್ಲಿ ಏಪ್ರಿಲ್‍ 13ರಿಂದ ವಾರದಲ್ಲಿ ಮೂರು ದಿನ ಮೀನು ಮತ್ತು ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿ ಆದೇಶ ಹೊರಡಿಸಿದೆ. ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೀನು ಮತ್ತು ಮಾಂಸ ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿತ್ತು.ಪರಿಷ್ಕೃತ ಆದೇಶದಂತೆ,  ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6 ರಿಂದ ಮ‍ಧ್ಯಾಹ್ನ 12ರವರೆಗೆ ಮೀನು ಮತ್ತು ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ.ಅಂಗಡಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಅನುಸರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.ಪುರಸಭೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳು ಈ ಆದೇಶ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ಬೇಕರಿ ವಸ್ತುಗಳ ಮಾರಾಟದ ಮೇಲಿನ ನಿರ್ಬಂಧವನ್ನು ಸಹ ಜಿಲ್ಲೆಯಲ್ಲಿ ಸಡಿಲಿಸಲಾಗಿದೆಬೇಕರಿಗಳು ಮತ್ತು ಕಾಂಡಿಮೆಂಟ್ಸ್ ಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಗ್ರಾಹಕರು ಅಂಗಡಿಗಳಲ್ಲಿ ತಿನಸು ತಿನ್ನುವುದಕ್ಕೆ ಅವಕಾಶವಿಲ್ಲ. ಆದರೆ, ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಪಾರ್ಸೆಲ್‌ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿದೆ.ವಾಣಿಜ್ಯ ಒಕ್ಕೂಟದೊಂದಿಗೆ ಚರ್ಚಿಸಿದ ನಂತರ ಜಿಲ್ಲಾಡಳಿತ ಮೀನು ಮತ್ತು ಮಾಂಸದ ದರವನ್ನು ನಿಗದಿಪಡಿಸಿದೆ.  ಅವಧಿ ಮೀರಿದ ವಸ್ತುಗಳನ್ನು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಬೇಕರಿಗಳಿಗೆ ಜಿಲ್ಲಾಡಳಿತ ಎಚ್ಚರಿಸಿದೆ.