ರೋಟರಿ ಕ್ಲಬ್ ಬೆಳವಣಿಗೆಗೆ ಡಿಸ್ಟ್ರಿಕ್ಟ್‌ ಆಫೀಸಿನಿಂದ ಸಹಕಾರ ಒದಗಿಸಲಾಗುವುದು: ಶರದ್ ಪೈ

District office will provide support for Rotary Club growth: Sharad Pai

ಬ್ಯಾಡಗಿ 29 . ಪ್ರಸಕ್ತ ವರ್ಷದಲ್ಲಿ ನಡೆಸಿದ ಸಾರ್ವಜನಿಕ ಸೇವಾ ಕಾರ್ಯಗಳ ಮತ್ತು ಕ್ಲಬ್ ನ ಚಟುವಟಿಕೆ ವರದಿಗಳನ್ನು ಪರೀಶೀಲಿಸಲು ಪಟ್ಟಣದ ಬ್ಯಾಡಗಿ ರೋಟರಿ ಕ್ಲಬ್‌ಗೆ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್‌ 3170 ದ ಡಿಸ್ಟ್ರಿಕ್ಟ್‌ ಗವರ್ನರ್ ಶರದ್ ಪೈ ಬೆಳಗಾವಿಯಿಂದ ಇಂದು ಆಗಮಿಸಿದ ಅವರು ಬ್ಯಾಡಗಿ ರೋಟರಿ ಕ್ಲಬ್ಬಿಗೆ ಭೇಟಿ ನೀಡಿ ಕ್ಲಬ್ಬಿನ ಎಲ್ಲ ದಾಖಲೆಗಳನ್ನು  ಪರೀಶೀಲಿಸಿ ನಂತರ ಪಟ್ಟಣದ ಎಸ್ ಜೆ ಜೆ ಎಂ ಕಾಲೇಜು ವಿದ್ಯಾರ್ಥಿ ಭವನದಲ್ಲಿ ಏರಿ​‍್ಡಸಿದ್ದ ಸಮಾರಂಭದಲ್ಲಿ ಮಾತನಾಡಿ ಬ್ಯಾಡಗಿಯಲ್ಲಿ ಸಣ್ಣ ಕ್ಲಬ್ ಆಗಿ ಇದ್ದರು ರೋಟರಿ ಕ್ಲಬ್ ಬಹಳ ಆಕ್ಟಿವ್ ಆಗಿ ಕೆಲಸ ನಿರ್ವಹಿಸುತ್ತಿದೆ ಇದಕ್ಕೆ ಸಾಕ್ಷಿಯಾಗಿ ನಮಗೆ ಸಲ್ಲಿಸಿದ ಎಲ್ಲ ವರದಿಗಳನ್ನು ಗಮನಿಸಿದ್ದೇನೆ ಪ್ರಸಕ್ತ ವರ್ಷದಲ್ಲಿ ಸುಮಾರು 38 ಸಾರ್ವಜನಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ.   

ಜೊತೆಗೆ ಹಿರಿಯ ಸದಸ್ಯರು ಕ್ಲಬ್ಬಿನ ಬೆಳವಣಿಗೆಯಲ್ಲಿ ಹೆಚ್ಚು ಗಮನ ಕೊಡಬೇಕಾಗಿದೆ ಕ್ಲಬ್ಬಿನ ಸದಸ್ಯತ್ವವನ್ನು ಹೆಚ್ಚಿಸಿದ್ದಲ್ಲಿ ದೊಡ್ಡ ದೊಡ್ಡ ಸೇವ ಕಾರ್ಯಗಳನ್ನು ಕೈಗೊಳ್ಳಬಹುದು ಇದರಿಂದ ಬ್ಯಾಡಗಿ ತಾಲೂಕಿನ ಸಾರ್ವಜನಿಕರಿಗೆ ರೋಟರಿ ಸೇವೆ ಹೆಚ್ಚು ತಲುಪುವಂತೆ ಮಾಡಬಹುದು ಬ್ಯಾಡಗಿಯಲ್ಲಿ ವರ್ಷದಲ್ಲಿ ಸುಮಾರು 3000 ದಿಂದ 4000 ಕೋಟಿ ರೂಪಾಯಿಗಳ ವ್ಯವಹಾರ ವಹಿವಾಟು ನಡೆಯುತ್ತಿದ್ದು ದೊಡ್ಡ ದೊಡ್ಡ ಇಂಡಸ್ಟ್ರಿಯಲಿಸ್ಟ್‌ ಸಹ ಇದ್ದಾರೆ ಅವರ ಸಿಎಸ್‌ಆರ್ ರಿಸರ್ವ್‌ ಫಂಡನ್ನು ಕೇಳಿ ಬಳಸಿಕೊಂಡು ಅದಕ್ಕೆ ನಮ್ಮ ರೋಟರಿ ಇಂಟರ್ನ್ಯಾಷನಲ್ ನಿಂದ 50.50 ಅನುಪಾತ ದಡಿಯಲ್ಲಿ ಗ್ರಾಂಟ್ ಪಡೆದುಕೊಂಡು ದೊಡ್ಡ ಪ್ರಾಜೆಕ್ಟ್‌ ಗಳನ್ನು ಸಹ ಮಾಡಬಹುದು ಕ್ಲಬ್ಬಿನ ಎಲ್ಲ ಸದಸ್ಯರು ಈ ಬಗ್ಗೆ ಚರ್ಚಿಸಿ ಪದಾಧಿಕಾರಿಗಳಿಗೆ ಸಹಾಯ ನೀಡಿದಲ್ಲಿ ಇದು ನೆರವೆರಬಹುದು. ಇದಕ್ಕೆ ನಮ್ಮ ಡಿಸ್ಟ್ರಿಕ್ಟ್‌ ಆಫೀಸಿನಿಂದ ಸೂಕ್ತ ಮಾರ್ಗದರ್ಶನ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.  

ಅಧ್ಯಕ್ಷ ಸಿದ್ದಲಿಂಗಯ್ಯ ಬೂದಿಹಾಳಮಠ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಸದಸ್ಯರ ಸಹಾಯದಿಂದ ಸಾಧ್ಯವಾದಷ್ಟು ಮಟ್ಟಿಗೆ ಪಟ್ಟಣದಲ್ಲಿ ಶೈಕ್ಷಣಿಕ ಆರೋಗ್ಯ ಪರಿಸರ ಸಂರಕ್ಷಣೆ ಹಲವು ಕ್ಷೇತ್ರಗಳಲ್ಲಿ ಮಂಜುನಾಥ ಉಪ್ಪಾರ ಅವರ ನೇತೃತ್ವದಲ್ಲಿ ಸೇವಾ ಕಾರ್ಯಗಳನ್ನು ನಡೆಸಿದ್ದೇವೆ ಇವೆಲ್ಲವುದಕ್ಕೆ ಸಹಕರಿಸಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು.ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ ನಮ್ಮದು ಸಣ್ಣ ಕ್ಲಬ್ ಆಗಿದ್ದರು ಸಹ ಅನೇಕ ಸೇವ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದೇವೆ ಸರಾಸರಿಯಾಗಿ ವಾರಕ್ಕೆ ಒಂದರಂತೆ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು ಸದಸ್ಯರ ಸಣ್ಣ ಪುಟ್ಟ ಸಹಾಯ ದೊರಕಿದೆ ಸಧ್ಯಕ್ಕೆ ಕೇವಲ 30 ರಿಂದ 40ಅ ಸದಸ್ಯರಿಂದ ಮಾತ್ರ ಸಹಾಯ ದೊರಕಿದೆ ಚರ್ಚಾ ಸಭೆಗಳಲ್ಲಿ ಸದಸ್ಯರ ಹಾಜರಾತಿ ಕೊರತೆ ಇದೆ ಕ್ಲಬ್ಬಿನ ಎಲ್ಲ ಸದಸ್ಯರು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನು ಮನ ಧನದಿಂದ ಸಹಾಯ ನೀಡಿದಲ್ಲಿ ಡಿಸ್ಟ್ರಿಕ್ಟ್‌ ಗವರ್ನರ್ ಹೇಳಿದಂತೆ ದೊಡ್ಡ ದೊಡ್ಡ  ಸೇವಾ ಕಾರ್ಯಗಳನ್ನು ನಡೆಸಬಹುದು ಒಂದು ದೊಡ್ಡ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್‌ ಮಾಡಬೇಕೆನ್ನುವುದು ಸಹ ನನ್ನ ಗುರಿ ಇದೆ ಅದನ್ನು ಈಡೇರಿಸುವಲ್ಲಿ ಎಲ್ಲಾ ಸದಸ್ಯರ ಸಹಾಯ ಅತಿ ಅವಶ್ಯಕ ಎಂದು ವಿನಂತಿಸಿಕೊಂಡರು.  

ನಂತರ ಪ್ರಸಕ್ತ ವರ್ಷದಲ್ಲಿ ಸೇವಾ ಕಾರ್ಯಗಳಿಗೆ ಹಾಗೂ ರೋಟರಿ ಫೌಂಡೇಶನ್ ಗೆ ಡೊನೇಷನ್ ನೀಡಿದ ಎಲ್ಲಾ ಸದಸ್ಯರಿಗೆ ಡಿಸ್ಟ್ರಿಕ್ಟ್‌ ಗವರ್ನರ್ ಅವರು ಪುಷ್ಪ ಗುಚ್ಛ ಕೊಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು. ಹಾಗೂ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಅಧ್ಯಕ್ಷ ಸಿದ್ಧಲಿಂಗಯ್ಯ ಬುದಿಹಾಳಮಠ ಮತ್ತು ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ ಇವರ ಕಾರ್ಯ ಮೆಚ್ಚಿ ಸನ್ಮಾನಿಸಿದರು.ನಂತರ ಕ್ಲಬ್ಬಿನ ಎಲ್ಲ ಸದಸ್ಯರೂ ಡಿಸ್ಟ್ರಿಕ್ಟ್‌ ಗವರ್ನರ್ ಶರದ್ ಪೈ ಮತ್ತು ಅವರ ಪತ್ನಿ ಪದ್ಮಜಾ ಅವರಿಗೆ ವಿಶೇಷವಾಗಿ ಸನ್ಮಾನ ಕಾರ್ಯಕ್ರಮ ನಡೆಸಿದರು. ಸಂಧ್ಯಾರಾಣಿ ದೇಶಪಾಂಡೆ ನಿರೂಪಿಸಿದರು, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ ಕ್ಲಬ್ಬಿನ ವಾರ್ಷಿಕ ವರದಿ ಓದಿದರು, ಡಾ. ಏ ಎಮ್ ಸೌದಾಗರ ಸ್ವಾಗತಿಸಿದರು, ಮಾಲತೇಶ ಅರಳಿಮಟ್ಟಿ ಪ್ರಾಸ್ತಾವಿಕ ನುಡಿದರು, ಬಸವರಾಜ ಸುಂಕಾಪುರ ವಂದಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸದಸ್ಯರು, ಬ್ಯಾಡಗಿ ಇನ್ನರ್ವಿಲ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು