ಕರವೇ ಸಂಘಟನೆ ಬಲಿಷ್ಠಗೂಳಿಸಲು ಜಿಲ್ಲಾ ಪದಾಧಿಕಾರಿಗಳ ಸಭೆ
District office bearers meet to strengthen Karave organization
ಕೊಪ್ಪಳ 18: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಸೂಚನೆ ಮೇರೆಗೆ ಜಿಲ್ಲಾದ್ಯಂತ ಸಂಘಟನೆಯನ್ನು ಬಲಪಡಿಸಬೇಕುಎಂದುಕರವೇಜಿಲ್ಲಾಧ್ಯಕ್ಷ ಬಿ.ಗೀರೀಶಾನಂದಜ್ಞಾನಸುಂದರ ತಿಳಿಸಿದರು.
ಅವರು ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿಕರವೇಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಂಘಟನೆಯ ಬಲವರ್ಧನೆ, ಮುಂದಿನ ಕಾರ್ಯಕ್ರಮಗಳು, ಹೋರಾಟದ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕ ತಂತ್ರಗಳ ಕುರಿತು ಸುದೀರ್ಘಚರ್ಚೆ ನಡೆಸಿದರು. ಸಭೆಯಲ್ಲಿರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ ಹಾಗೂ ಜಿಲ್ಲೆಯ ಪ್ರಮುಖರು ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು. ಸಂಘಟನೆಯ ಶಕ್ತಿ ಹೆಚ್ಚಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಎಲ್ಲಾಗ್ರಾಮ ಘಟಕಗಳ ಸಂಘಟನಾ ಬಲ ಹೆಚ್ಚಿಸಲುಕಾರ್ಯತಂತ್ರರೂಪಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಶರಣಪ್ಪಚಂದನಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಿಂಗಪ್ಪ ಮೂಗಿನ್, ಉಪಾಧ್ಯಕ್ಷರುಗಳಾಗಿ ಶಿವನಗೌಡ ಪಾಟೀಲ ಹಲಗೇರಿ, ಕಳಕಪ್ಪ ಹೂಗಾರ, ಸುರೇಶಗೌಡ ಪಾಟೀಲ, ಅನಿಲ ಬಿಜ್ಜಳ, ಸಹ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಶೆಟ್ಟಿ, ಸಂಗಮೇಶ ಕಂದಕೂರ, ಸಂಘಟನಾ ಕಾರ್ಯದರ್ಶಿಗಳಾಗಿ ನೂರಪಾಶಾಕವಲೂರು, ಸಂಚಾಲಕರನ್ನಾಗಿ ಸಂಗಮೇಶ ಗುರಿಕಾರ, ಶರಣಯ್ಯ ಹಳೆಮನಿ, ಕಾನೂನು ಸಲಹೆಗಾರರನ್ನಾಗಿಖ್ಯಾತ ವಕೀಲರಾದ ವೈ ಜಯರಾಜ, ಕಾರ್ಯಕಾರಣಿ ಸದಸ್ಯರುಗಳಾಗಿ ಸಂಜಯಖಟವಟೆ, ಮಂಜುನಾಥಗೌಡ ಆನೆಗುಂದಿ, ಶರಣು ಮದಲಗಟ್ಟಿ, ಬಸವರಾಜ ದಳವಾಯಿ, ಪರಸಪ್ಪ ಅಳ್ಳಳ್ಳಿ, ಡಾ.ನಾಗರಾಜ ಚಳಗೇರಿ,ಎಮ್.ಡಿರಪಿ, ಬಸವರಾಜ ಮಾಂತಗೊಂಡ ಇವರುಗಳು ನೇಮಕವಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 