ಹಾವೇರಿಯಲ್ಲಿ ಅಗಸ್ಟ್ 3ಕ್ಕೆ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
District level yoga competition to be held in Haveri on August 3
ಹಾವೇರಿಯಲ್ಲಿ ಅಗಸ್ಟ್ 3ಕ್ಕೆ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
ರಾಣೇಬೆನ್ನೂರು 06: ಹಾವೇರಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ . ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬರುವ ಅಗಸ್ಟ್ 3ರಂದು ರವಿವಾರ ಹಾವೇರಿ ಜಿಲ್ಲಾ ಕೇಂದ್ರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿರುವದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ.ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಯೋಗ ಸ್ಪರ್ಧೆಯು ಏರಿ್ಡಸಲಾಗಿದ್ದು, ಒಟ್ಟು 10 ವಿಧದಲ್ಲಿ ಸ್ಪರ್ಧೆಯು ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
ತಮ್ಮ ಹೆಸರುಗಳನ್ನು 300 ರೂಗಳು ನಿಗದಿತ ಶುಲ್ಕವನ್ನು ಭರಿಸಿ ನೋಂದಾಯಿಸಲು ಜಿಲ್ಲಾ ಯೋಗ ಕ್ರೀಡಾ ಸಂಸ್ಥೆಯು ಪ್ರಕಟಣೆಯಲ್ಲಿ ಕೋರಿದೆ. ಅರ್ಜಿಯೊಂದಿಗೆ . ಆಧಾರ್ ಕಾರ್ಡ, ಜನ್ಮ ದಿನಾಂಕ ದೃಡೀಕರಣ ಪತ್ರ ಲಗತ್ತಿಸಿ ನೋಂದಣಿ ಮಾಡಬೇಕಾಗಿದ್ದು, ಅಗಸ್ಟ್ 2, 2025 ರಂದು ಅಂತಿಮ ದಿನವಾಗಿದೆ.
ಸ್ಪರ್ಧೆ ಮತ್ತು ನಿಯಮಗಳು :10 ರಿಂದ 14 - 14 ರಿಂದ 18.18 ರಿಂದ 28.28- ರಿಂದ 35.35- ರಿಂದ 45. ಹಾಗೂ 45- ರಿಂದ 55 ವರ್ಷಗಳು ) - ಸಾಂಪ್ರದಾಯಿಕ ಯೋಗಾಸನ, ಮುಂದೆ ಬಾಗಿ ಮಾಡುವ, ಹಿಂದೆ ಬಾಗಿ, ತಿರುಗಿ, ಕಾಲಿನ ಮೇಲೆ, ಕೈ ಮೇಲೆ, ಬೆನ್ನಿನ ಮೇಲೆ, ಕಲಾತ್ಮಕ ವೈಯಕ್ತಿಕ, ಕಲಾತ್ಮಕ ಜೋಡಿ ಲಯಬದ್ಧ ಜೋಡಿ-( ರಿದಮಿಕ್ ) ಹೆಚ್ಚಿನ ಮಾಹಿತಿ ಹಾಗೂ ನೊಂದಾವಣಿಗಾಗಿ, ಶಂಕ್ರಯ್ಯ ಹಿರೇಮಠ ಜಿಲ್ಲಾ ಅಧ್ಯಕ್ಷರು (9731707352) ಮತ್ತು ( 7259998812)ಡಾ. ಜ್ಯೋತಿ ಜ ಜಂಬಗಿ, ಜಿಲ್ಲಾ ಕಾರ್ಯದರ್ಶಿಗಳು. ಪುಷ್ಪ ಎಂ ಸೊಲಬಗೌಡ್ರು, ಖಜಾಂಚಿ. ಅವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸ್ಪರ್ದಾಳುಗಳಿಗೆ ಷರತ್ತುಗಳು ಅನ್ವಯವಾಗಲಿದ್ದು, ತೀಪುಗಾರರ ತೀರ್ಮಾನವೇ ಅಂತಿಮವಾಗಿದೆ. ಸದರಿ ಸ್ಪರ್ಧೆಯಲ್ಲಿ ಆಯ್ಕೆಯಾದವರು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 