ಏ.18 ರಿಂದ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ

ಏ.18 ರಿಂದ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ District level summer camp from April 18

ಲೋಕದರ್ಶನ ವರದಿ 

         ಹಾವೇರಿ 09 :  ಬಾಲಭವನ ಸೊಸೈಟಿ, ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ  ಜಿಲ್ಲಾ ಮಟ್ಟದ ಬೇಸಿಗೆ ಶಿಬಿರ  ಏಪ್ರಿಲ್ 18 ರಿಂದ 15 ದಿನಗಳ ಕಾಲ  ಹಾವೇರಿ  ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಜರುಗಲಿದೆ. 

ಐದರಿಂದ 16 ವರ್ಷದೊಳಗಿನ ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ ಪ್ರದೇಶದ ಹಾಗೂ ಸೌಲಭ್ಯ ವಂಚಿತ ಮಕ್ಕಳು, ವಿಶೇಷ ಚೇತನ ಮಕ್ಕಳು, ಬಾಲಕರ/ಬಾಲಕೀಯರ ಬಾಲ ಮಂದಿರದ ಮಕ್ಕಳು ಹಾಗೂ ಸರ್ಕಾರಿ ಸುಧಾರಣಾ ಸಂಸ್ಥೆಯ ಮಕ್ಕಳಿಗೆ ಮೊದಲ ಆದ್ಯತೆ  ನೀಡಲಾಗುತ್ತದೆ. ಮೊದಲು ಬಂದ 60 ಮಕ್ಕಳಿಗೆ ಮಾತ್ರ ಪ್ರವೇಶವಿರುತ್ತದೆ. 

ಶಿಬಿರದಲ್ಲಿ ಯೋಗ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಕರಾಟೆ, ಧ್ಯಾನ, ನಾಟಕ, ಸಮೂಹ ಸಂಗೀತ , ಸಮೂಹ ನೃತ್ಯ, ಇತ್ಯಾದಿ ಚಟುವಟಿಕೆಗಳ ತರಬೇತಿ ನೀಸಲಾಗುವುದು. ದಿನಾಂಕ 17-04-2026ರ ಸಂಜೆ 5 ಗಂಟೆಯೊಳಗಾಗಿ ಮಕ್ಕಳ ಹೆಸರನ್ನು ನೊಂದಾಯಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಸೋಮನಗೌಡ ಗಾಳಿಗೌಡ್ರ ಮೊ.8970727355 ಹಾಗೂ ಕಚೇರಿ ಸಹಾಯಕ ರಾಮು ಪಾಟೀಲ ಅವರನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

          ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನೂತನ ಅಧ್ಯಕ್ಷ ಮತ್ತು ಸದಸ್ಯರು  ಹಾವೇರಿ 09 :  ಹಾವೇರಿ ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳ   ಕಚೇರಿ ಸಭಾಂಗಣದಲ್ಲಿ ಮಂಗಳವಾರ  ಡಾ.ವಿ.ಕೃ. ಗೋಕಾಕ  ರಾಷ್ಟ್ರೀಯ ಸ್ಮಾರಕ ಟ್ರಸ್ಟ  ನೂತನ  ಅಧ್ಯಕ್ಷರು ಹಾಗೂ ಸದಸ್ಯರ  ಸ್ವಾಗತ ಹಾಗೂ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜರುಗಿತು. 

ಟ್ರಸ್ಟ್‌ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ,  ಕನ್ನಡ  ಮತ್ತು ಸಂಸ್ಕೃತಿ ಇಲಾಖೆ  ಬೆಳಗಾವಿ ವಲಯ ವಿಭಾಗದ ಜಂಟಿ ನಿರ್ದೇಶಕ ಕೆ.ಹೆಚ್‌. ಚನ್ನೂರು, ಧಾರವಾಡ ದ.ರಾ.ಬೇಂದ್ರ ಟ್ರಸ್ಟ್‌ ಅಧ್ಯಕ್ಷ ಸರಜೂ ಕಾಟಕರ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಸುರೇಶ ಜಂಗಮಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ , ಸಂಜೀವಕುಮಾರ ನೀರಲಗಿ , ಟ್ರಸ್ಟ್‌ ಸದಸ್ಯರಾದ ಪ್ರೊ.ಮಾರುತಿ ಶಿಡ್ಲಾಪೂರ, ಗುರುರಾಜ ಲ. ನಾಡಿಗೇರ,  ಲಿಂಗರಾಜ ಸೊಟ್ಟಪ್ಪನವರ, ಡಾ:ಜಗನ್ನಾಥ ಗೇನಣ್ಣನವರ, ಶ್ರೀಮತಿ ಪುಷ್ಪಾ ಶಲವಡಿಮಠ  ಹಾಗೂ ಇತರರು ಉಪಸ್ಥಿತರಿದ್ದರು. ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ವೀರಯ್ಯಸ್ವಾಮಿ ಬಿ.  ಹಿರೇಮಠ ಸ್ವಾಗತಿಸಿ, ವಂದಿಸಿದರು.