ಜಿಲ್ಲಾಡಳಿತದಿಂದ ಆದಿ ಶಂಕರಾಚಾರ್ಯರ ಜಯಂತಿ ಅರ್ಥಪೂರ್ಣವಗಿ ಆಚರಣೆ

ಜಿಲ್ಲಾಡಳಿತದಿಂದ ಆದಿ ಶಂಕರಾಚಾರ್ಯರ ಜಯಂತಿ ಅರ್ಥಪೂರ್ಣವಗಿ ಆಚರಣೆ District administration celebrates Adi Shankaracharya's Jayanti in a meaningful way

ಲೋಕದರ್ಶನ ವರದಿ 

         ವಿಜಯಪುರ 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಪರ ಜಿಲ್ಲಾಧಿಕಾರಿ ಡಾ.ಓದ್ರಾಮ ಅವರು ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಹಾಗೂ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.  

ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆದಿತ್ಯಾ ವೈದ್ಯ ಅವರು, ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಹೊಂದಿರುವ ಆದಿ ಶಂಕರಾಚಾರ್ಯರು ವೇದಗಳಿಗೆ ಭಾಷ್ಯ ಬರೆದು ಜಗತ್ತಿಗೆ ಅದ್ವೈತ ತತ್ವವನ್ನು ಪರಿಚಯಿಸಿದ ಮಹಾನ್ ತತ್ವಜ್ಞರು ಹಾಗೂ ಇಡೀ ದೇಶ ಸಂಚರಿಸಿ ಅದೈತ ಸಿದ್ದಾಂತವನ್ನು ಪ್ರತಿಪಾದಿಸಿದ ಆದಿ ಶಂಕರಚಾರ್ಯಾರ ಜೀವನ ಇಂದಿನವರಿಗೆ ಆದರ್ಶಪ್ರಾಯವಾಗಿದೆ ಶಂಕರಾಚಾರ್ಯಾರು ಮಾಹಾ ವಿದ್ವಾಂಸ, ಕವಿ ಯಾಗಿದ್ದರು ಅವರ ಜೀವನದ ಮೌಲ್ಯಗಳು ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. 

ವಿವಿದ ಸಿದ್ದಾಂತಗಳ ಅರ್ಥವನ್ನು  ಸರಳವಾಗಿ ಜನರಿಗೆ ತಲುಪಿಸುವಲ್ಲಿ ಶಂಕರಾಚಾರ್ಯರ ಪಾತ್ರ ಅಪಾರವಾಗಿದೆ ಎಂದರು. ಅವರು ಬರೆದ ಭಾಷ್ಯಗಳು ಇಂದಿಗೂ ತತ್ವಜ್ಞಾನಿಗಳ ಮಾರ್ಗದರ್ಶಕವಾಗಿವೆ ಎಂದು ವಿವರಿಸಿದರು. ಶಂಕರಾಚಾರ್ಯರು ಪ್ರತಿಪಾದಿಸಿದ ತತ್ವದ ಮೂಲಕ ಮಾನವ ಜೀವನದ ಉನ್ನತ ಅರ್ಥವನ್ನು ತಿಳಿಸುತ್ತದೆ. ಈ ತತ್ವವು ವ್ಯಕ್ತಿಯನ್ನು ಆತ್ಮಸಾಕ್ಷಾತ್ಕಾರದ ದಾರಿಗೆ ಒಯ್ಯುತ್ತದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಧಿಕಾರಿಗಳಾದ ನಾರಾಯಣಪ್ಪ ಕುರುಬರ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ್ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಮೋಹನ್ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಶ್ರೀರಾಮ ಭಟ್ಟ  ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.