ಪದವೀಧರ ಶಿಕ್ಷಕರ ಬೇಡಿಕೆ ಕುರಿತು ಸಿ.ಎಸ್‌. ಷಡಾಕ್ಷರಿ ಅವರಿಗೆ ಜಿಲ್ಲಾಧ್ಯಕ್ಷ ಮ್ಯಾಗಳಮನಿ ಮನವಿ

ಪದವೀಧರ ಶಿಕ್ಷಕರ ಬೇಡಿಕೆ ಕುರಿತು ಸಿ.ಎಸ್‌. ಷಡಾಕ್ಷರಿ ಅವರಿಗೆ ಜಿಲ್ಲಾಧ್ಯಕ್ಷ ಮ್ಯಾಗಳಮನಿ ಮನವಿ District President Magalamani appeals to C.S. Shadakshari regarding the demand for graduate teachers

                   ಕೊಪ್ಪಳ 30: ಘನ ಸರಕಾರವು 2016 ರಿಂದ ಪದವೀಧರ ಪ್ರಾಥಮಿಕ(ಉಕಖಿ)ಶಿಕ್ಷಕರನ್ನು ನಾಲ್ಕು ಬಾರಿ ನೇಮಕ ಮಾಡಿಕೊಂಡು ರಾಜ್ಯದಲ್ಲಿ ಸುಮಾರು 24 ಸಾವಿರ ಶಿಕ್ಷಕರು ಇಲ್ಲಿವರೆಗೂ ನೇಮಕಗೊಂಡಿರುವುದು ಸಂತೋಷದ ವಿಚಾರ, ರಾಜ್ಯ ಸರಕಾರಿ ನೌಕರರ ಸಂಘದ ಬೈಲಾದಲ್ಲಿ ಜಿ.ಪಿ.ಟಿ ಶಿಕ್ಷಕರಿಗೆ ಪ್ರತ್ಯೇಕವಾದ ನಿರ್ದೇಶಕ ಸ್ಥಾನವನ್ನು ನೀಡಬೇಕು ಜೊತೆಗೆ ನ್ಯಾಯಾಲಯ ನಿರ್ದೇಶನದಂತೆ ಪದವೀಧರ ಪ್ರಾಥಮಿಕ(ಉಕಖಿ)ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ನೀಡಬೇಕೆಂದು ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಆಗ್ರಹಿಸಿದರು ಹಾಗೂ ನೂತನ ಪಿಂಚಣಿ ಯೋಜನೆಯನ್ನು ಕೈ ಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು, ಃಐಓ ಕರ್ತವ್ಯದಿಂದ ಶಿಕ್ಷಕರಿಗೆ ವಿನಾಯಿತಿ ನೀಡುವುದರ ಮೂಲಕ ಋಣಾತ್ಮಕ ಶಿಕ್ಷಣದ ಕಡೆಗೆ ಗಮನಹರಿಸುವುದು,

                  ಶಿಕ್ಷಕರ ವರ್ಗಾವಣೆಯಲ್ಲಿ ಉಕಖಿ ಆಂಗ್ಲ ಭಾಷಾ ಐದನೇ ಹುದ್ದೆ ಆಗಿರುವುದರಿಂದ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದು, 2023 ರಲ್ಲಿ ನೇಮಕವಾದ ಶಿಕ್ಷಕರ ಹಿಂದಿನ ಸೇವೆಯನ್ನು ಪರಿಗಣಿಸಿ ವೇತನ ಸಂರಕ್ಷಣೆ ಮಾಡುವುದು,ಅಖಕ ಆಗಲು 10 ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂಬ ನಿಯಮವನ್ನು ಬದಲಿಸಿ ಕನಿಷ್ಠ 5 ವರ್ಷ ಸೇವೆ ಯನ್ನು ಪರಿಗಣಿಸುವುದು,2016 ರಲ್ಲಿ ನೇಮಕವಾದ ಶಿಕ್ಷಕರಿಗೆ ಪದವಿಯಲ್ಲಿ/ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ಐಚ್ಚಿಕ ವಿಷಯಕ್ಕೆ ಅನುಗುಣವಾಗಿ ಬದಲಾವಣೆ ಮಾಡುವುದು.ಎಲ್ಲಾ ಬೇಡಿಕೆಗಳ ಕುರಿತಾಗಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್‌.ಷಡಾಕ್ಷರಿ ರವರಿಗೆ ಏರಿ​‍್ಡಸಿದಂತಹ ಅಭಿನಂದನ ಸಮಾರಂಭದಲ್ಲಿ ಪದವೀಧರ ಪ್ರಾಥಮಿಕ(ಉಕಖಿ)ಶಿಕ್ಷಕರ ಸಂಘ ಜಿಲ್ಲಾ ಘಟಕ ಕೊಪ್ಪಳದ ಮೂಲಕ ಮನವಿ ಸಲ್ಲಿಸಲಾಯಿತು.

                 ಇದೇ ಸಂದರ್ಭದಲ್ಲಿ ಜಿಲ್ಲಾ ಕೋಶಾಧ್ಯಕ್ಷರಾದ ರಾಘವೇಂದ್ರ ಗೋನಾಳ,ಕೊಪ್ಪಳ ತಾಲೂಕ ಅಧ್ಯಕ್ಷರು ಮಂಜುನಾಥ ಕೇಸಲಾಪುರ,ಕನಕಗಿರಿ ತಾಲೂಕ ಅಧ್ಯಕ್ಷರು ಕನಕಪ್ಪ, ಕುಕನೂರು ತಾಲೂಕ ಅಧ್ಯಕ್ಷರು ಪ್ರಭು,ನೌಕರ ಸಂಘದ ನಿರ್ದೇಶಕರಾದ ಮಲ್ಲೇಶ್ ನಾಯಕ್, ಶರಣಪ್ಪ ಪತ್ತಾರ,ಸುಭಾನ್ ನದಾಫ್,ಪರಮೇಶ್ ಚಿಂತಾಮಣಿ, ಪದಾಧಿಕಾರಿಗಳಾದ ಮೈಲಾರ​‍್ಪ,ಪರಶುರಾಮ, ನಾಗರಾಜ್,ಭಾಸ್ಕರ್, ಶಶಿಧರ್ ಕುಂಬಾರ್ ಮುಂತಾದವರು ಉಪಸ್ಥಿತರಿದ್ದರು.