ಜಿಲ್ಲಾ ಪೊಲೀಸ್ ಇಲಾಖೆ: ಯರಿಕೊಪ್ಪ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆ
District Police Department: Accused in Yarikoppa theft case identified
ಧಾರವಾಡ ಸೆ.25: ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನಾ ನಂ:209/2025 ಕಲಂ:303 (1) ಬಿಎನ್‌ಎಸ್‌ಎಸ್ ನೇದ್ದರ ಪ್ರಕರಣದಲ್ಲಿ ಸೆಪ್ಟೆಂಬರ 23, 2025 ರಂದು ನಸುಕಿನ ಜಾವ 3:5 ಗಂಟೆಗೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಹದ್ದಿಯ ಬಸಪ್ಪ.ಯಲ್ಲಪ್ಪ ಸೂರ್ಯವಂಶಿ ಇವರ ಜಮೀನ ಬ್ಲಾಕ ನಂ.4 ನೇದ್ದರಲ್ಲಿ ಅಳವಡಿಸಿದ ರಿಲೈನ್ಸ ಕಂಪನಿಯ ಮೊಬೈಲ್ ಟವರಿನ ಎರಡು ಸ್ಯಾಮಸಂಗ ಕಂಪನಿಯ ಆರ್‌ಆರ್‌ಎಚ್ ರೆಡಿಯೋ ಹೆಡ್, 2300, 1800 ಎಮ್‌ಎಚ್‌ಝಡ್ ಬ್ಯಾಂಡ್‌ಗಳು ಒಟ್ಟು 1,31,206 ರೂ ಕಿಮ್ಮತಿನ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸದರ ಪ್ರಕರಣದ ದಾಖಲಾದ ತಕ್ಷಣ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಯವರು ಕಾರ್ಯ ಪ್ರವೃತ್ತರಾಗಿ ತಂಡ ರಚಿಸಿ ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಹಾಗೂ ಸ್ಥಳೀಯ ಬಾತ್ಮಿದಾರರಿಂದ ಮಾಹಿತಿಯನ್ನು ಸಂಗ್ರಹಿಸಿ ಸಂಶಯಾಸ್ಪದವಾದ ದ್ವೀಚಕ್ರವಾಹನದ ರಜಿಸ್ಟರ್ ನಂಬರನ್ನು ಪತ್ತೆ ಮಾಡಿ ಅದರ ಆಧಾರದ ಮೇಲೆ 03 ಜನ ಆರೋಪಿತರನ್ನು ಸೆಪ್ಟೆಂಬರ 24, 2025 ರಂದು ವಶಕ್ಕೆ ಪಡೆದು ವಿಚಾರಣೆ ಕೈಕೊಂಡಿದ್ದು ಇರುತ್ತದೆ. ನಂತರ ಆರೋಪಿತರನ್ನು ದಸ್ತಗೀರ ಮಾಡಿ ಕಾನೂನು ಕ್ರಮವನ್ನು ಜರುಗಿಸಿ ಆರೋಪಿತರಿಂದ ಕಳ್ಳತನ ಮಾಡಲಾದ 1) 04 ಸ್ಯಾಮಸಂಗ ಕಂಪನಿಯ ಆರ್.ಆರ್.ಹೆಚ್ ರೆಡಿಯೋ ಹೆಡ್ 2300 ಮತ್ತು 1800 ಎಮ್.ಹೆಚ್.ಜೆಡ್ ಬಾಂಡ ಹಾಗೂ 2) ಒಂದು ಮೋಟರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಇರುತ್ತದೆ.
ಸದರಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕ್ಷಿಪ್ರಗತಿಯಲ್ಲಿ ಆರೋಪಿತರನ್ನು ಬಂಧಿಸುವಲ್ಲಿ ಧಾರವಾಡ ಗ್ರಾಮೀಣ ಪಿಐ ಎಸ್.ಎಸ್. ಕಮತಗಿ ಹಾಗೂ ಎಲ್ಘ್‌ಓ ಪಿ.ಎಸ್.ಐ ಪ್ರವೀಣ ಕೋಟಿ, ಪಿ.ಎಸ್.ಐ(ಅ) ಬಿ.ಆರ್. ಬಂಕಾಪೂರ, ಸಿ.ಹೆಚ್.ಸಿ 530ಕುಮಾರ ಕಾಂಬಳೆ, ಸಿಪಿಸಿ 634 ಎ.ಬಿ. ಸೊರಟೂರ, ಸಿ.ಹೆಚ್.ಸಿ 659ಎಮ್.ಎಸ್.ಜೊಡಗೇರಿ, ಸಿಪಿಸಿ 471 ಮಾರುತಿ ಕುಂಬಾರ, ಸಿಪಿಸಿ 546 ಮಹಾಂತೇಶ ನೆಟಗಲ್, ಸಿಪಿಸಿ 558 ಶ್ರೀಧರ ಗುಗ್ಗರಿ, ಸಿಪಿಸಿ 995 ಶಿದ್ದೇಶ್ವರ ಹಿರೇಮಠ, ಸಿಪಿಸಿ 424 ಮಲ್ಲಪ್ಪ ಡಾಬೋಳಿ ಹಾಗೂ ಸಿಪಿಸಿ 958 ವಿನಾಯಕ ಪಡಸಲಗಿ ಇವರನ್ನು ಒಳಗೊಂಡ ತಂಡ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇರುತ್ತದೆ. ಸದರಿ ಪತ್ತೆ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 