ಸವಿತಾ ಸಮಾಜದ ಕುಲಕಸುಬಿಗೆ ಕನ್ನ ಹಾಕುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿಗಳಿಂದ ಬ್ರೇಕ್: ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತರಾಟೆ
District Magistrate orders a halt to Savita Samaj's attempt to exploit the village profession: Labou
ಗದಗ 06: ಸವಿತಾ ಸಮಾಜದ ಸಾಂಪ್ರದಾಯಿಕ ’ಕ್ಷೌರಿಕ’ ವೃತ್ತಿಯ ಅಸ್ಮಿತೆಯನ್ನು ಕಾಪಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಗದಗ ಜಿಲ್ಲಾ ಘಟಕದ ವತಿಯಿಂದ ಇಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಬಲಿಷ್ಠ ಮನವಿ ಸಲ್ಲಿಸಲಾಯಿತು. ಸಮಾಜದ ನೋವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಪ್ಪಿತಸ್ಥ ಅಧಿಕಾರಿಗಳಿಗೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ, "ಅಸಂಘಟಿತ ಕಾರ್ಮಿಕ ಮಂಡಳಿಯು ಸವಿತಾ ಸಮಾಜದವರ ಕುಲಕಸುಬಾದ ’ಕ್ಷೌರಿಕ’ (ಬಾರ್ಬರ್) ವೃತ್ತಿಯ ಹೆಸರನ್ನು ಅನ್ಯ ಸಮಾಜದವರು ನಡೆಸುವ ಬ್ಯೂಟಿ ಪಾರ್ಲರ್ಗಳಿಗೂ ನೀಡುತ್ತಿರುವುದು ಖಂಡನೀಯ. ಇದರಿಂದ ನಮ್ಮ ಸಮಾಜದ ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು, ವಿಮೆ ಮತ್ತು ಆರ್ಥಿಕ ಪ್ಯಾಕೇಜ್ಗಳು ಅನ್ಯರ ಪಾಲಾಗುತ್ತಿವೆ.
ಇದು ಸವಿತಾ ಸಮಾಜಕ್ಕೆ ಮಾಡುತ್ತಿರುವ ದ್ರೋಹ," ಎಂದು ಆಕ್ರೋಶ ವ್ಯಕ್ತಪಡಿಸಿದರು. *ಜಿಲ್ಲಾಧಿಕಾರಿಗಳ ಕಡಕ್ ಎಚ್ಚರಿಕೆ* ಮನವಿಯನ್ನು ಕೂಲಂಕಷವಾಗಿ ಪರೀಶೀಲಿಸಿದ ಮಾನ್ಯ ಜಿಲ್ಲಾಧಿಕಾರಿಗಳು, ಬ್ಯೂಟಿ ಪಾರ್ಲರ್ ಮಾಡುವವರಿಗೆ ’ಬ್ಯೂಟಿಷಿಯನ್’ ಎಂದೇ ಕಾರ್ಡ್ ನೀಡಬೇಕು ಮತ್ತು ಸವಿತಾ ಸಮಾಜದವರಿಗೆ ಮಾತ್ರ ’ಕ್ಷೌರಿಕ’ (ಬಾರ್ಬರ್) ಎಂದು ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ನಿಯಮ ಉಲ್ಲಂಘಿಸಿ ಇತರರಿಗೆ ’ಬಾರ್ಬರ್’ ಕಾರ್ಡ್ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಕ್ಷಣವೇ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂತಹ ಎಲ್ಲಾ ಕಾರ್ಡ್ಗಳೊಂದಿಗೆ ಕಚೇರಿಗೆ ಬಂದು ವಿವರಣೆ ನೀಡುವಂತೆ ಖಡಕ್ ಎಚ್ಚರಿಕೆ ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. *ಸಮಾಜದ ಎಚ್ಚರಿಕೆ* "ನಮ್ಮ ಸಮಾಜದ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನ ನಡೆದರೆ ನಾವು ಸುಮ್ಮನಿರುವುದಿಲ್ಲ.
ಜಿಲ್ಲಾಧಿಕಾರಿಗಳ ಈ ತಕ್ಷಣದ ಸ್ಪಂದನೆ ನಮಗೆ ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಬದಲಾವಣೆ ತಂದು ನೈಜ ಸವಿತಾ ಸಮಾಜದವರಿಗೆ ಮಾತ್ರ ’ಕ್ಷೌರಿಕ’ ಕಾರ್ಡ್ ದೊರೆಯುವಂತಾಗಬೇಕು," ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಒತ್ತಾಯಿಸಿದರು.
ಈ ಪ್ರತಿಭಟನಾತ್ಮಕ ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಶ್ರೀ ಸಂತ ಸೇನಾ ಮಹಾರಾಜ್ ನಾಬಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ್. ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ ಸಮಾಜದ ಯುವ ನಾಯಕರಾದ ಆನಂದ ಮಾನೆ ಜಿಲ್ಲಾ ಸಮಿತಿಯ ಪ್ರಮುಖ ಪದಾಧಿಕಾರಿಗಳು ಹಾಗೂ ಸಮಾಜ ಅನೇಕ ಬಾಂಧವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 