ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ: ತ್ರೈಮಾಸಿಕ ಪ್ರಗತಿ ಪರೀಶೀಲನೆ
District Level Advisory Committee Meeting: Quarterly Progress Review
ಬೆಳಗಾವಿ 23: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ, ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯನ್ನು ಇಂದಿನ ದಿನ ದಿ. 22ರಂದು ಸಂಸ್ಥೆಯ ಆವರಣದಲ್ಲಿ ಮಾಡಲಾಯಿತು.
ಈ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂದೆ ಅವರ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿತು. ಇವರು ಸಂಸ್ಥೆಯ 25 - 26 ನೇ ಸಾಲಿನ ಮೊದಲ ತ್ರೈಮಾಸಿಕ ಪ್ರಗತಿಯನ್ನು ಪರೀಶೀಲಿಸಿದರು. ಅದರಲ್ಲಿಯೂ ನಡೆದ ತರಬೇತಿಗಳಾವುವು, ಯಾವ ಯಾವ ಹೊಸ ತರಬೇತಿಗಳನ್ನು ಹಮ್ಮಿಕೊಳ್ಳಲಾಯಿತು, ಅದರಲ್ಲಿ ಎಷ್ಟು ಜನ ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ, ಅದರ ಜೊತೆಗೆ ಬ್ಯಾಂಕಿನಿಂದ ಸಾಲ ಪಡೆದವರ ಸಂಖ್ಯೆ ಎಷ್ಟು. ಸದ್ಯ ಯಾವ ಯಾವ ತರಬೇತಿಗಳು ಸಂಸ್ಥೆಯಲ್ಲಿ ನಡೆಯುತ್ತಿವೆ. ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಯಾವ ರೀತಿ ನೀಡುತ್ತಿದ್ದಾರೆ. ತರಬೇತಿಯು ಉತ್ತಮ ರೀತಿಯಲ್ಲಿ ನಡೆಯುತ್ತಿವೆ ಎಂಬುದರ ಕುರಿತು ಸವಿಸ್ತಾರವಾದಂತ ಚರ್ಚೆಯನ್ನು ಮಾಡಲಾಯಿತು. ಜೊತೆಗೆ ಶಿಬಿರಾರ್ಥಿಗಳನ್ನು ಮಾತನಾಡಿಸಿ ಖುದ್ದಾಗಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಂಸ್ಥೆಯ ಕುಂದು ಕೊರತೆಗಳನ್ನು ಪರೀಶೀಲಿಸಿದರು. ಸಭೆಯ ಇನ್ನಿತರೆ ಸದಸ್ಯರು ಸಹ ಉಪಸ್ಥಿತರಿದ್ದರು.
ಬೆಳಗಾವಿಯ ಜಿಲ್ಲಾ ಪಂಚಾಯತನ ಯೋಜನಾ ನೀರ್ದೇಶಕ ಆರ್. ಎನ್. ಬಂಗಾರ್ಪನವರ, ವಿದ್ಯಾ ರೀಜನಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ಬೆಳಗಾವಿ, ಕೆನರಾ ಬ್ಯಾಂಕ್ ನ ಲೀಡ ಡಿಸ್ಟ್ರಿಕ್ಟ್ ಚೀಫ್ ಮ್ಯಾನೇಜರ್ ಆದಂತಹ ಪ್ರಶಾಂತ್ ಗೋಡ್ಕೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಬೆಳಗಾವಿಯ ಆರ್. ಎಂ. ಆದ ಶ್ರೀ ಎಸ್ ಬಿ. ಹುಲಮನಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ಕಾರ್ಯಲಯ ಗೋಕಾಕನ ಸೀನಿಯರ್ ಮ್ಯಾನೇಜರ್ ಆದಂತಹ ರಾಕೇಶ್ ಬಿ.ಪಿ., ಸಂಸ್ಥೆ ನೀರ್ದೇಶಕ ಪ್ರವೀಣ್ ಕೆ.ಎಸ್. ಇವರುಗಳ ಉಪಸ್ಥಿತಿಯಲ್ಲಿ ಇವತ್ತಿನ ಸಭೆಯು ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಕಾರ್ಯ ವೈಖರಿಯನ್ನ ಗಮನಿಸಿದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದಂತಹ ರಾಹುಲ್ ಶಿಂದೆ ಅವರು ಸಂಸ್ಥೆಯ ಕಾರ್ಯವೈಖರಿಯ ಕುರಿತು ಮಾತನಾಡಿ, ಉತ್ತಮ ರೀತಿಯಲ್ಲಿ ತರಬೇತಿಗಳನ್ನ ನಡೆಸುತ್ತಿದ್ದು ಇದೇ ರೀತಿ ಉತ್ತಮ ಹಾಗೂ ನವೀನ ಕೌಶಲ್ಯಗಳನ್ನ ಜನರಿಗೆ ನಿರುದ್ಯೋಗಿಗಳಿಗೆ ನೀಡಿ ಎಂದು ತಿಳಿಸಿ ಶುಭ ಹಾರೈಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 