ಜಿಲ್ಲಾಧಿಕಾರಗಳಿಂದ ಜಿಲ್ಲಾ ವಿಪತ್ತು ನಿರ್ವಹಣಾ ವಿಡಿಯೋ ಕಾನ್ಫರೆನ್ಸ್ ಸಭೆ
ಹಾವೇರಿ 16: ಕಳೆದ 15 ದಿನಗಳಿಂದ ಮಳೆ ಯಾಗುತ್ತಿದ್ದು ಕುಡಿಯುವ ನೀರು ಹಾಗೂ ಬೆಳೆಹನಿಗಳ ಕುರಿತು ಜಂಟಿ ಸಮೀಕ್ಷೆಮಾಡಿ ತುರ್ತಾಗಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಮಳೆಯಾದ ದಿನ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡಿ ಕೂಡಲೇ ವರದಿ ಸಲ್ಲಿಸಬೇಕು ಯಾವುದೇ ಕಾರಣಕ್ಕೂ ಅಧಿಕಾರಿಗಳ ನಿರ್ಲಕ್ಷಿತನ ಹಾಗೂ ಕೆಲಸದಲ್ಲಿ ವಿಳಂಬತನ ಸಹಿಸಲಾಗುವುದಿಲ್ಲ ಹಾಗೇನಾದರೂ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೆಳೆ ವಿಮೆ ಹಾಗೂ ಕುಡಿಯುವ ನೀರು ಪೂರೈಕೆಗೆ ಕ್ರಮ : ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಮೀಕ್ಷೆ ಮಾಡಿ ಬೆಳೆ ಹಾನಿಗೆ ಒಳಗಾಗಿದ್ದರೆ ಜಂಟಿ ಸಮೀಕ್ಷೆ ಮಾಡಿ ಕೂಡಲೇ ವರದಿ ಸಲ್ಲಿಸಬೇಕು ಇದರಿಂದ ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಕೆಲಸಗಳು ತುರ್ತಾಗಬೇಕು ಜನರೊಂದಿಗೆ ಬೆರಿಯಬೇಕು, ಉತ್ತಮ ಸ್ಪಂದಿಸಬೇಕು ಆಗ ಜನರಿಗೆ ಜಿಲ್ಲಾಡಳಿತ ತಮ್ಮೊಂದಿಗೆ ಇದೆ ಅನ್ನುವ ಭಾವನೆ ಬರುತ್ತದೆ. ಹಾನಿಗೋಳಗಾದ ಸ್ಥಳಗಳ ವೀಕ್ಷಣೆ ಮಾಡಿ ವರದಿ ಒಪ್ಪಿಸಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು. ಹಾಗೆಯೇ ಕುಡಿಯುವ ನೀರು ಅಭಾವ ವಿರುವ ತಾಲೂಕವಾರ ಗ್ರಾಮಗಳಲ್ಲಿನ ಪಂಚಾಯತಗಳಿಂದ ಖಾಸಗಿ ಬೋರವೆಲಗಳನ್ನು ಪಡೆದು ನೀರು ಪೂರೈಕೆ ಮಾಡಬೇಕು ಮತ್ತು ತೆಗೆದುಕೊಂಡಿರುವ ಖಾಸಗಿ ಬೋರೆವೆಲ್ ಗಳ ಮಾಹಿತಿಯನ್ನು ಜಂಟಿ ಸಮೀಕ್ಷೆ ಮಾಡಿ ಸರಿಯಾದ ವರದಿಯನ್ನು ಸಲ್ಲಿಸಬೇಕು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು : ಜಿಲ್ಲೆಯಲ್ಲಿ ಬೇಸಿಗೆ ಮಳೆಯಿಂದ ಹಾನಿಗೋಳಗಾದ ಮನೆಗಳು ಹಾಗೂ ಬೆಳಗಳ ಕುರಿತು ಪ್ರಶ್ನೆ ಮಾಡಿದಾಗ ಸಂಬಂಧಿಸಿದ ಅಧಿಕಾರಿಗಳು ಸಮರ್ಕ ಮಾಹಿತಿ ನೀಡಲು ತಡಕಾಡಿದರು ಇದರಿಂದ ಅಸಮಾಧಾಗೊಂಡ ಜಿಲ್ಲಾಧಿಕಾರಿಗಳು ಹಾರಿಕೆ ಉತ್ತರಗಳು ಕೇಳಲು ಸಭೆ ಮಾಡಿಲ್ಲ, ಎಲ್ಲವನ್ನು ಸಿದ್ದಪಡಿಸಿಕೊಂಡು ಸಭಗೆ ಹಾಜರಾಗಬೇಕು ಇದು ನಿಮ್ಮ ಬೇಜವಾಬ್ದಾರಿ ಎತ್ತಿ ತೋರಿಸುತ್ತಿದೆ ಕರ್ತವ್ಯ ಪ್ರಜ್ಞೆ ತುಂಬಾ ಮುಖ್ಯವಾಗುತ್ತದೆ ಕರ್ತವ್ಯದಲ್ಲಿ ನಿರ್ಲಕ್ಷ ತನ ತೋರಿದಲ್ಲಿ ನಿಮ್ಮನೆ ನೆರೆವಾಗಿ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡದರು. ಹಿಂಗಾರು ಜೋಳ ಖರೀದಿ ಕೇಂದ್ರ ಆರಂಭ :ಜಿಲ್ಲೆಗೆ 90 ಸಾವಿರ ಕ್ವಿಂಟಲ್ ಜೋಳ ಖರೀದಿ ಗುರಿ ನಿಗದಿಪಡಿಸಲಾಗಿದೆ ಕಳೆದ ಬಾರಿ ಅಂದರೆ ಜನವರಿ ವರೆಗೂ ಬಳ್ಳಾರಿಯಿಂದ ಜೋಳ ಪೂರೈಕೆ ಯಾಗುತ್ತಿತ್ತು ಅದು ಕಳಪೆ ಮಟ್ಟದಿದೆ ಎಂದು ಸಾಕಷ್ಟು ದುರುಗಳು ವ್ಯಕ್ತವಾಗಿದ್ದವು ಈ ವರ್ಷ ನಮ್ಮಲ್ಲಿಯೇ ಜೋಳ ಸಂಗ್ರಹಣೆ ಮಾಡುತ್ತಿದ್ದೇವೆ ಅದೇ ತೇರಾನಾದ ದುರುಗಳು ವ್ಯಕ್ತವಾಗಬಾರದು ಈ ನಿಟ್ಟಿನಲ್ಲಿ ಆಹಾರ ಇಲಾಖೆಯಿಂದ ಚೆಕ್ ಲಿಸ್ಟ್ ಮಾಡಿ ನೀಡಲಾಗುವುದು ಇಲ್ಲಿ ಆಯಾ ತಾಲೂಕಿನ ತಹಸೀಲ್ದಾರ್ ಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಹೀಗಾಗಿ ವಾರದಲ್ಲಿ ಎರಡು ಇಲ್ಲವೇ ಮೂರು ದಿನಕ್ಕೊಮ್ಮೆ ಜೋಳ ಸಂಗ್ರಹಣೆ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಬೇಕು ಎಂದರು. ಪ್ರಾರಂಭಿಕ ಹಂತದಿಂದಲೇ ತಯಾರಿ ಮಾಡಿಕೊಳ್ಳಬೇಕು ಜೋಳ ಸಂಗ್ರಹಣಾ ಘಟಕ ಗೊಡೌನ್ ಸರಿಯಾಗಿ ಸುಸ್ಥಿತಿಯಲ್ಲಿ ಇರಬೇಕು, ನೀರು ಸೋರಿಕೆ ಕಂಡು ಬರಬಾರದು, ಸರಿಯಾಗಿ ನಿರ್ವಹಣೆ ಯಾಗಿರಬೇಕು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರಬೇಕು, ಕಾನೂನು ಹಿತ ದೃಷ್ಟಿಯಿಂದ ಹಾಗೂ ರೈತರ ಹಿತ ದೃಷ್ಟಿಯಿಂದ ಜೋಳ ಸಂಗ್ರಹಣೆ ನೆರವಾಗಿ ಎ ಪಿ ಎಂ ಸಿ ಗಳ ಮೂಲಕ ಆಗಬೇಕು. ಮಾರ್ಚ್ 25 ಕ್ಕೆ ಆದೇಶ ಮಾಡಲಾಗಿದೆ ಈಗ 15 ದಿನ ಕಳೆದಿದೆ ಹಿರೇಕೆರೂರ, ಸವಣೂರ ಹಾಗೂ ಬ್ಯಾಡಗಿ ತಾಲೂಕಗಳಲ್ಲಿ ಇನ್ನೂ ನೊಂದಣಿ ಪ್ರಕ್ರಿಯೆ ಆಗಿಲ್ಲ ಅಧಿಕಾರಿಗಳು ಕೂಡಲೇ ಜೋಳ ಸಂಗ್ರಹಣೆ ನೋಂದಣಿ ಕಾರ್ಯ ನಡೆಯ ಬೇಕು ಎಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.