ಬೆಂಗಳೂರು, ಏ 18, ಕೆಪಿಸಿಸಿ ವೈದ್ಯ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ಮನವಿಯಂತೆ ಜಿಲ್ಲಾ ಕರೋನ ಕಾರ್ಯಪಡೆ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಮಾಡಿದ್ದಾರೆ. ಈ ಮೊದಲು ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನೇತೃತ್ವದಲ್ಲಿ ರಾಜ್ಯಮಟ್ಟದ ಕೆಪಿಸಿಸಿ ಕೋವಿಡ್-19 ಕಾರ್ಯಪಡೆಯನ್ನುನೇಮಕ ಮಾಡಲಾಗಿತ್ತು .ಇದೀಗ ಜಿಲ್ಲಾ ಮಟ್ಟದಲ್ಲಿಯೂ ಸರ್ಕಾರದ ಕೆಲಸಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಕಾರ್ಯಪಡೆಯನ್ನು ಕೆಪಿಸಿಸಿ ನೇಮಕ ಮಾಡಿದೆ.ಸರ್ಕಾರದ ಕೆಲಸಗಳು ಜನರಿಗೆ ತಲುಪುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು, ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನೇತೃತ್ವದ ರಾಜ್ಯಮಟ್ಟದ ಕರೋನ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೋವಿಡ್ 19 ಸೋಂಕು ಹರಡದಂತೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಈ ಸಮಿತಿ ನಿಗಾ ವಹಿಸಲಿದೆ. ಹಾಗೆ ಅಗತ್ಯ ಬಿದ್ದರೆ ವೈದ್ಯಕೀಯ ಸಲಹೆಗಳನ್ನು ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಒದಗಿಸಲಿದೆ.6 ಜನ ಸದಸ್ಯರ ಜಿಲ್ಲಾ ಕಾರ್ಯಪಡೆ ಸಮಿತಿ ಸದಸ್ಯರನ್ನಾಗಿ ಹಾಸನದ ಡಾ. ಮದುಸೂದನ್, ಮೈಸೂರಿನ ಡಾ. ಭರತ್ಕುಮಾರ್ ಡಿ., ಶಿವಮೊಗ್ಗದ ಡಾ. ಕ್ಸೇವಿಯರ್ ಪ್ರದೀಪ್ ಡಿ ಮೆಲ್ಲೋ, ಧಾರವಾಡ ಡಾ. ದೀಪಕ್ ಕಲಾದಗಿ, ಬೆಂಗಳೂರಿನ ಡಾ. ರಾಜೇಶ್ ಹಾಗೂ ಡಾ. ಜಾವೇದ್ ಜೋಹರ್ ಶಹೀನ್ ಅವರನ್ನು ನೇಮಕ ಮಾಡಲಾಗಿದೆ.