ಗಣತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸೂಚನೆ
District Collector instructs public to make census program a success
ಹಾವೇರಿ 06: ಭಾರತ ಸರ್ಕಾರ ಕೈಗೊಂಡಿರುವ 2026 ಜನಗಣತಿ ಕಾರ್ಯಕ್ರಮ ನಿಮಿತ್ತ ನಗರದ ಹುಕ್ಕೇರಿ ಮಠದ ಪ್ರೌಢಶಾಲೆಯಲ್ಲಿ ಶುಕ್ರವಾರ ತರಬೇತಿ ಕಾರ್ಯಾಗಾರ ಉದ್ದೇಸಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಜನಗಣತಿ 2021 ರಲ್ಲಿ ನಡೆಯಬೇಕಾಗಿತ್ತು, ಆ ಸಂದರ್ಭದಲ್ಲಿ ಕೋವಿಡ್ ಸಂಭವಿಸಿದ್ದರಿಂದ ಜನಗಣತಿ ಮಾಡಲು ಸಾಧ್ಯವಾಗಲಿಲ್ಲ.2026-27 ನೇ ಸಾಲಿನಲ್ಲಿ ಜನಗಣತಿ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು,ಅದರಂತೆ ಈಗಾಗಲೇ ತರಬೇತಿಗೆ ಕಾರ್ಯಕ್ರಮ ಆಯೋಜಿಸಿದ್ದು ಈ ತರಬೇತಿ ಪಡೆದು ಆದಷ್ಟು ಬೇಗ ಜನಗಣತಿ ಕಾರ್ಯಕ್ರಮವನ್ನು ಮಾಡಿ.
ಮನೆಗಳ ಗಣತಿ, ಹಾಗೂ ಸ್ವಯಂ ಗಣತಿ ಮಾಡಲು ಸಾರ್ವಜನಿಕರಿಗೆ ಸೂಚಿಸಿದ್ದು, ಅದರಂತೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ನೀವು ಸಹ ಏಪ್ರಿಲ್ 15 ನಂತರ ಆದಷ್ಟು ಬೇಗ ಗಣತಿ ಕಾರ್ಯಕ್ರಮವನ್ನು ಮಾಡಿ ಯಶಸ್ವಿಗೊಳಿಸಲು ಸೂಚಿಸಿದರು. ಈ ಹಿಂದೆ ಸಾಮಾಜಿಕ ಆರ್ಥಿಕ ಗಣತಿ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು,ಅದೇ ರೀತಿ ಈಗಲೂ ಸಹ ಪ್ರಥಮ ಸ್ಥಾನ ಪಡೆಯಲು ತಾವು ಸಹಕರಿಸಿ ಈ ಗಣತಿಯನ್ನು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದರು. ಈ ಸಂದರ್ಭದಲ್ಲಿ ತಾಲೂಕ್ ದಂಡಾಧಿಕಾರಿಗಳಾದ ಶರಣಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಹೆಚ್ ಪಾಟೀಲ್, ಪೌರಾಯುಕ್ತರಾದ ಎಚ್ ಕಾಂತರಾಜ್, ಗುತ್ತಲ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ದೇವಾನಂದ ನಾಯಕ, ಇತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 