ಕಲಾ ಜಾಥಾ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
District Collector flags off Kala Jatha mobile vehicle
ಹಾವೇರಿ 21: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾದ “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರು ಚಾಲನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತಿ ಎಚ್., ಜನನಿ ಜಾನಪದ ಕಲಾ ವೇದಿಕೆ ತಂಡದ ಪರಶುರಾಮ ಬಣಕಾರ ಹಾಗೂ ಕಲಾವಿದರರು ಇತರರು ಉಪಸ್ಥಿತರಿದ್ದರು.
20 ಗ್ರಾಮಗಳಲ್ಲಿ ಪ್ರದರ್ಶನ: “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನ ಜಿಲ್ಲೆಯ ಆಯ್ದ 20 ಗ್ರಾಮಗಳಲ್ಲಿ ಸಂಚಾರ ಮಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಕುರಿತು ವ್ಯಾಪರ ಪ್ರಚಾರ ನೀಡಲಿದೆ. ನ.21 ರಂದು ಹಾನಗಲ್ ತಾಲೂಕಿನ ಆಡೂರ, ಬಾಳಂಬೀಡ, ಅಕ್ಕಿಆಲೂರು, ಗೆಜ್ಜಿಹಳ್ಳಿ, ಶಿಗ್ಗಾಂವ ತಾಲೂಕು ಕುನ್ನೂರ, ಮಮದಾಪೂರ ಹಾಗೂ ಅಡವಿಸೋಮಾಪುರ ಗ್ರಾಮಗಳಲ್ಲಿ ಸಂಚಾರ ಮಾಡಲಿದೆ.
ನ.22 ರಂದು ಸವಣೂರ ತಾಲೂಕು ಹುರಳಿಕೊಪ್ಪಿ, ತೊಂಡೂರ, ಹೊಸಳ್ಳಿ, ಹಾವೇರಿ ತಾಲೂಕು ಆಲದಕಟ್ಟಿ, ಹೊಸಳ್ಳಿ, ಗೌರಾಪೂರ, ಕೂಳೇನೂರ, ಹಾವೇರಿ ತಾಲೂಕಿನ ಸಂಗೂರ, ದಿಡಗೂರ ಹಾಗೂ ನ.23 ರಂದು ಬ್ಯಾಡಗಿ ತಾಲೂಕಿನ ಕಾಗಿನೆಲೆ, ಇಂಗಳಗೊಂದಿ, ಘಾಳಪೂಜಿ ಹಾಗೂ ದುಮ್ಮಿಹಾಳ ಗ್ರಾಮಗಳಲ್ಲಿ “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನ ಸಂಚರಿಸಲಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 