ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮ

  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮ  District Child Protection Unit Program

ಲೋಕದರ್ಶನ ವರದಿ 

ಕೊಪ್ಪಳ  07:    ಕೊಪ್ಪಳ ತಾಲೂಕ ಬಂಡಿಹರ್ಲಾಪುರ ಗ್ರಾಮ ಪಂಚಾಯತ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಸಭೆಯಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಶೋಕ ರಾಂಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಮಗು ಮತ್ತು ಮಹಿಳೆಯರಿಗೆ ನಿರ್ಲಕ್ಷ ಮತ್ತು ಶೋಷಣೆ, ದೈಹಿಕ ಹಿಂಸೆ ಆಗದಂತೆ ತಡೆಯುವುದು ಕಾವಲು ಸಮಿತಿಯ ಉದ್ದೇಶವಾಗಿದೆ. ಪಂಚಾಯತ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮಕ್ಕಳ ಮತ್ತು ಮಹಿಳೆಯರ ಅಂಕಿ ಸಂಖ್ಯೆಗಳನ್ನು ಕೃಢೀಕರಿಸಿ, ಪಂಚಾಯತಿಗೆ ಸಲ್ಲಿಸಬೇಕು.

ಎಷ್ಟು ಜನ ಮಕ್ಕಳು ಮತ್ತು ಮಹಿಳೆಯರಲ್ಲಿ ಏನಾದರು ತೊಂದರೆಯಾಗುತ್ತಿದೆಯೇ ಎಂಬವುದು ಗಮನಿಸಬೇಕು ಯಾವುದೇ ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ, ದೈಹಿಕ ಹಿಂಸೆ, ಮಾನಸಿಕ ಕಿರಕುಳಗಳು, ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದರೆ ತುರ್ತಾಗಿ ಸಮಿತಿಯ ಗಮನಕ್ಕೆ ತರಬೇಕೆಂದು ತಿಳಿಸಿದರು. ಮನೆ ಸಂಪರ್ಕ,ಆಪ್ತಸಮಾಲೋಚನೆ ಮಾಡುವುದರಿಂದ ಗ್ರಾಮದಲ್ಲಿರುವಂತ ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳು ಅರಿವಿಗೆ ಬರುತ್ತವೆ. ಸಕಾಲದಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು. 

     ಸಭೆಯಲ್ಲಿ ಭಾವಹಿಸಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮ ಸಂಯೋಜಕರು ಮಕ್ಕಳ ಸಹಾಯವಾಣಿ ಮಾತನಾಡಿ ಮಗು ಘನತೆ ಮತ್ತು ಗೌರವಿತವಾಗಿ ಬದುಕಬೇಂದರೆ ಕುಟುಂಬದೊಂದಿಗೆ ಬೆಳೆಯಬೇಕು ಪಾಲಕರು ಮಕ್ಕಳಿಂದ ಅಂತರವನ್ನು ಕಾಯಿದುಕೊಂಡರೆ, ಉತ್ತಮವಾದ ವಾತವರಣದಲ್ಲಿ ಮಕ್ಕಳು ಬೆಳೆಯಲು ಸಾಧ್ಯವಿಲ್ಲ, ಅಪ್ಪ ಅವ್ವನ ಆಸರೆ ಮತ್ತು ಪ್ರೀತಿ ಮಗುವಿಗೆ ಬೇಕಾಗುತ್ತದೆ ಎಂದರು. ಕುಟುಂಬದಿಂದ ನಿರ್ಲಕ್ಷಕ್ಕೆ ಒಳಗಾದ ಮಗುವಿಗೆ ಅತಿ ಹೆಚ್ಚು ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಮತ್ತು ಬಾಲ ಕಾರ್ಮಿಕತೆ, ಶಾಲೆಯಿಂದ ಹೊರಗಳಿಯಲು ಸಾಧ್ಯವಾಗುತ್ತದೆ. ಇಂತಹ ಮಕ್ಕಳನ್ನು ಕಾವಲು ಸಮಿತಿ ಗಮನಿಸಿ ಸಮಾಜ ಮತ್ತು ಶಾಲಾ ಮುಖ್ಯವಾಹಿನಿಗೆ ತರಬೇಕು.

ಪೋಕ್ಸೋ -2012ರ ಅಡಿಯಲ್ಲಿ ಸೆಕ್ಷನ್‌-19 (1) ರ ಪ್ರಕಾರ ಮಗುವಿನ ಮೇಲೆ ದೌರ್ಜನ್ಯವಾಗಿದೆ ಎಂದು ತಿಳಿದಾಕ್ಷಣ ಅದೇ ವ್ಯಕ್ತಿಗಳು ಯಾರೇ ಇರಬಹುದು ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಇದನ್ನು ನಿರ್ಲಕ್ಷ್ಯ ವಹಿಸಿದರ ವಿರುದ್ಧವು ಸಹ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡಲು ಪ್ರತಿಯೊಬ್ಬರು ಆತ್ಮ ಸಾಕ್ಷಿಯಿಂದ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕು ದಿನದ 24 ಗಂಟೆಯಲ್ಲಿ ಚಾಲನೆ ಇರುವ ಮಕ್ಕಳ ಸಹಾಯವಾಣಿ-1098 ಉಚಿತ ಸಹಾಯವಾಣಿ ಸಂಖ್ಯೆಗೂ ಕರೆ ಮಾಡಿ ಮಾಹಿತಿ ನೀಡಬಹುದು ಪಂಚಾಯತ ಮಟ್ಟದಲ್ಲಿ ಸಾಧಕ ಮಕ್ಕಳು ಮತ್ತು ಮಹಿಳೆಯರಿದ್ದರೆ. ಅವರನ್ನು ಗುರುತಿಸಿ, ಗೌರವ ಸಲ್ಲಿಸಬೇಕೆಂದು ತಿಳಿಸಿದರು. 

    ರೀಡ್ಸ ಸಂಸ್ಥೆಯ ತಾಲೂಕ ಸಂಯೋಕರು ತಿಪ್ಪೆಸ್ವಾಮಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಸಖಿ ಘಟಕವಿದೆ. ಮಹಿಳೆಯರ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆ 181 ಇದೆ. ಪಂಚಾಯತ ವ್ಯಾಪ್ತಿಯಲ್ಲಿ ತಡೆದ ಬಾಲ್ಯ ವಿವಾಹಗಳ ಅನುಪಾಲನೆ  ಮಾಡಿ ಪಂಚಾಯಿತಿಗೆ ವರದಿ ಮಾಡಬೇಕು, ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಮತ್ತು ಕಾನೂನಿನ ನೆರವು ಬೇಕೆಂದಲ್ಲಿ ಗ್ರಾಮ ಪಂಚಾಯತ ಕಾವಲು ಸಮಿತಿಯ ಗಮನಕ್ಕೆ ತರಬೇಕು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರಿಗೆ ಮಾಹಿತಿ ನೀಡಿದರೆ ಉಚಿತ ಕಾನೂನು ಅರಿವು ನೆರವು ದೊರೆಯುತ್ತದೆ. ಎಂದರು.

ಸಂದರ್ಭದಲ್ಲಿ ಪಂಚಾಯತ ಕಾರ್ಯದರ್ಶಿ ನಾಗಪ್ಪ ಕುರಬಡಿಗಿ, ಗ್ರಾಮ ಆಡಳಿತ ಅಧಿಕಾರಿ ಲಲಿತಾ, ರೀಡ್ಸ್‌ ಸಂಸ್ಥೆ ತಾಲೂಕ ಸಂಯೋಕರು ಲಲಿತ, ಸಿ.ಎಚ್‌.ಒ. ಸೋನಿಯಾ, ಪಿ.ಎಚ್‌.ಸಿ.ಒ ಶ್ರೀದೇವಿ ಹಾಗೂ ಗೌರಮ್ಮ, ವಿ.ಆರ್‌.ಡಬ್ಲ್ಯೂ ಶ್ರೀಮತಿ ಗಂಗಮ್ಮ ಎಲ್‌.ಸಿ.ಆರ್‌.ಪಿ. ಶ್ರೀಮತಿ ಜೈಬುನಾ ಬೇಗಂ, ಕೃಷಿ ಸಖಿ ಬಸಮ್ಮ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅಪ್ಸನಾ ಬೇಗಂ, ಉಷಾ, ಪವನ್ ಕುಮಾರ, ಧನುಷ, ಆಶಾ ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯ ಸಿಬ್ಬಂದಿ ಉಪಸ್ಥಿತರಿದ್ದರು.