ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ
Distribution of uniforms to government school children
ಲೋಕದರ್ಶನ ವರದಿ
ಕಂಪ್ಲಿ 05: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರ ಜನ್ಮದಿನದ ಅಂಗವಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ನೇತೃತ್ವದಲ್ಲಿ ಶಾಸಕ ಜೆ.ಎನ್.ಗಣೇಶ ಅಭಿಮಾನಿಗಳ ಬಳಗದಿಂದ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶುಕ್ರವಾರ ವಿತರಸಲಾಯಿತು.
ನಂತರ ಹೊಸಕೋಟೆ ಜಗದೀಶ ಮಾತನಾಡಿ, ಕೊಡಗೈ ದಾನಿ ನಾರಾ ಸೂರ್ಯನಾರಾಯಣರೆಡ್ಡಿ ಇವರು ಹಲವು ಸಮಾಜ ಸೇವಾ ಕಾರ್ಯಗಳೊಂದಿಗೆ ಜನರ ಹಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಅವರು ನೀಡಿದು ಕೊಡುಗೆಗಳು ಅಪಾರವಾಗಿದೆ. ಇಂತಹ ಧೀಮಂತ ನಾಯಕ ನಾರಾಯಣರೆಡ್ಡಿ ಅವರ ಜನ್ಮದಿನದ ಅಂಗವಾಗಿ ಕಂಪ್ಲಿ ನಗರದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿ, ಅವರಿಗೆ ಆಯಸ್ಸು, ಆರೋಗ್ಯ ವೃದ್ಧಿಸುವ ಜೊತೆಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಆ ದೇವರು ಶಕ್ತಿ ನೀಡಲು ಎಂದು ಹಾರೈಯಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ಚಾಮಿ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ವಿಬಿ ನಾಗರಾಜ, ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ, ಮುಖಂಡರಾದ ಬಿ.ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ಕಾಳಿಂಗವರ್ಧನ, ಭಟಾರಿ ಪ್ರಮೋದ್, ಬಳೆ ಮಲ್ಲಿಕಾರ್ಜುನ, ಹೆಚ್.ಲಿಂಗಪ್ಪ, ಹೆಚ್.ಗಂಗಾಧರ, ಕೆ.ರಾಜ, ಹಂಪಾರೆಡ್ಡಿ, ಬಿ.ರಾಕೇಶ್, ಟೈಲ್ಸ್ ಮಹೇಶ, ಹೆಚ್.ಬಸಪ್ಪ, ಶ್ರೀಕಾಂತ, ಮಂಜುನಾಥ, ತಿಪ್ಪೇಸ್ವಾಮಿ ಸಣಾಪುರ, ಹೆಚ್.ಬಾಬು ಇದ್ದರು. ನಂತರ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 