ರೈತರ ಅನುಕೂಲತೆಗಾಗಿ ಸಬ್ಸಿಡಿ ಹಣದಲ್ಲಿ ಟ್ರ್ಯಾಕ್ಟರ ವಿತರಣೆ
Distribution of tractors with subsidized funds for the benefit of farmers
ಜಮಖಂಡಿ 19: ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕಬ್ಬು ಬೆಳೆಗಾರರು ಹೆಚ್ಚು ಇರುವರು ಹಾಗೂ ಇನ್ನಿತರ ಬೆಳೆಯುವ ರೈತರು ಇದ್ದಾರೆ. ಅವರಿಗೆ ಗ್ರಾಹಕರ ಸೇವಾ ಅಧಿಕಾರ ಒಆರ್‌ಜಿ, ವತಿಯಿಂದ ರೈತರಿಗೆ ಅನುಕೂಲತೆಗಾಗಿ ಸಬ್ಸಿಡಿ ಹಣದಲ್ಲಿ ಟ್ರ್ಯಾಕ್ಟರಗಳನ್ನು ನೀಡಲಾಗುತ್ತದೆಂದು ಗ್ರಾಹಕರ ಸೇವಾ ಅಧಿಕಾರ ಒಆರ್‌ಜಿ. ರಾಜ್ಯಾಧ್ಯಕ್ಷ ರಾಜು ಗಸ್ತಿ ಹೇಳಿದರು.
ನಗರದ ಜಂಬಗಿ ರಸ್ತೆಯ ಹತ್ತಿರ ಇರುವ ಗ್ರಾಹಕರ ಸೇವಾ ಅಧಿಕಾರ ಒಆರ್‌ಜಿ. ಕರ್ನಾಟಕ ರಾಜ್ಯ ಪ್ರಧಾನ ಕಚೇರಿ ಆವರಣದಲ್ಲಿ ರೈತರಿಗೆ ನಾಲ್ಕು ಟ್ರ್ಯಾಕ್ಟರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ರೈತರು ಟ್ರ್ಯಾಕ್ಟರಗಳನ್ನು ಪಡೆಯಲು ಮೂಲ ದಾಖಲಾತಿಗಳನ್ನು ಸಲಿಸಿದರೆ. ಅವುಗಳನ್ನು ಕೇಂದ್ರ ಪ್ರಧಾನ ಕಚೇರಿಗೆ ರವಾನಿಸಲಾಗುತ್ತದೆ. ಸರಕಾರದಿಂದ ಮಂಜೂರಾತಿ ಪಡೆದ ರೈತರಿಗೆ ಟ್ರ್ಯಾಕ್ಟರಗಳನ್ನು ಹಸ್ತಾಂತರ ಮಾಡುವುದು. ಇದರಿಂದ ಈ ಭಾಗದ ರೈತರಿಗೆ ಅನುಕೂಲತೆ ಆಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು. ಇವಾಗ ಮಂಜೂರಾತಿಯಾದ ನಾಲ್ಕು ಟ್ರ್ಯಾಕ್ಟರಗಳನ್ನು ವಿತರಣೆಯನ್ನು ಮಾಡಲಾಗಿದೆ ಎಂದರು.
ಚಿಮ್ಮಡ ಗ್ರಾಮದ ನಾಲ್ಕು ರೈತರಿಗೆ ಮಂಜೂರಾತಿಯಾದ ಪಲಾನುಭವಿಗಳಾದ ಧರೇಪ್ಪ ಬ್ಯಾಕೋಡ, ಶ್ರೀಕಾಂತ ಕೌಟಿ, ಮಾನಿಂಗ ಯಲ್ಲಪ್ಪ ಹಳ್ಳಿಮನಿ, ಕಲ್ಲನಗೌಡ ಪಾಟೀಲ ಅವರಿಗೆ ಸರಕಾರದಿಂದ ಮಂಜೂರಾತಿಯಾದ ನಾಲ್ಕು ಟ್ರ್ಯಾಕ್ಟರಗಳನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಕೃಷ್ಣಾ ಜಾಧವ, ಅನೀಲ ಜಾಧವ, ಸದಾಶಿವ ನ್ಯಾಮಗೌಡ, ಮುತ್ತಣ್ಣ ಮೇತ್ರಿ, ಪರುಶರಾಮ ವಾಳ್ಳೆನ್ನವರ, ಮೀರಾ ಒಂಟಮೋರೆ, ಅಕ್ಬರ್ ಜಮಾದಾರ, ಯಲ್ಲಪ್ಪ ತಳಗೇರಿ, ಪ್ರೇಮ ಬಳೋಲಗಿಡದ ಸೇರಿದಂತೆ ಅನೇಕರು ಟ್ರ್ಯಾಕ್ಟರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 