ಬೇಲೂರು- ಹರನಗೇರಿ ಗ್ರಾಮಾಂತರದಲ್ಲಿ ಭೂ ಗ್ಯಾರಂಟಿ ಫಲಾನುಭವಗಳಿಗೆ ಹಕ್ಕು ಪತ್ರ ವಿತರಣೆ
Distribution of title deeds to land guarantee beneficiaries in Belur-Haranageri rural areas
ರಾಣೆಬೆನ್ನೂರು :21 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಬೇಲೂರು ಗ್ರಾಮದಲ್ಲಿ, ಕರ್ನಾಟಕ ಸರ್ಕಾರದ ಮಹತ್ವಾಕಾಕ್ಷಿ ಯೋಜನೆಯಾದ ಭೂ ಗ್ಯಾರಂಟಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವು ಶುಕ್ರವಾರ ಗ್ರಾಮೀಣ ಪ್ರದೇಶಗಳ ಸಾವಿರಾರು ನಾಗರಿಕರ ಮಧ್ಯ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಶಾಸಕ ಪ್ರಕಾಶ ಕೋಳಿವಾಡ ಅವರು, ರೈತರು ಮತ್ತು ಭೂ ಮಾಲೀಕರು ಈ ದೇಶಕ್ಕೆ ಅನ್ನ ನೀಡುವ ಮಹಾದಾನಿಗಳು. ರೈತರು ಸುಖ ಸಮೃದ್ಧಿಯಿಂದ ಇದ್ದರೆ ಗ್ರಾಮ,ನಾಡು, ದೇಶದ ಪ್ರಜೆಗಳು ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಾಗುವುದು ಎಂದರು.
ವಿಧಾನಸಭಾ ಕ್ಷೇತ್ರ ಈಗಾಗಲೇ ಶೈಕ್ಷಣಿಕ ಪ್ರಗತಿ ಕಂಡಿದೆ. ಕೃಷಿ ಪರಿಪೂರ್ಣ ಬೆಳವಣಿಗೆಗೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಶಿಕ್ಷಣ ಪ್ರಗತಿಗೆ ರೋಬೋ ಟೀಚರ್, ಡಿಜಿಟಲ್ ಲೈಬ್ರರಿ, ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ, ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದೇವೆ ಎಂದು ವಿವರಿಸಿದ ಕೋಳಿವಾಡರು, ಆಗಿದ್ದು ಸ್ವಲ್ಪ, ಆಗಬೇಕಾದ್ದು ಸಾಕಷ್ಟು ಇದೆ. ಅದಕ್ಕಾಗಿ ನಾಗರಿಕರು ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿ ಮತ್ತು ಅಗತ್ಯ ಸೌಲಭ್ಯಗಳ ಕುರಿತು ತಮ್ಮೊಂದಿಗೆ ಮುಕ್ತವಾಗಿ ಸಂಪರ್ಕಿಸಬಹುದು ಎಂದು ಕರೆ ನೀಡಿದರು. ಗ್ರಾಮದಲ್ಲಿ 250ಕ್ಕೂ ಹೆಚ್ಚು ಭೂ ಗ್ಯಾರೆಂಟಿ ಫಲಾನುಭವಿಗಳನ್ನು ಹಕ್ಕುಪತ್ರ ವಿತರಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ತಾಲೂಕಿನ ವಿವಿಧ ಭಾಗಗಳಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧಾ ವಿಜೇತರಿಗೆ ನಗದು ಮೊತ್ತ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಕೆಕೆ ಆಡಳಿತಾಧಿಕಾರಿ ಶ್ರೀಮತಿ ಪೂರ್ಣಿಮಾ ಕೋಳಿವಾಡ, ಪಕ್ಷದ ಮುಖಂಡರಾದ ಇಕ್ಬಾಲ್ ಸಾಬ್ ರಾಣೆಬೆನ್ನೂರು, ಶ್ರೀನಿವಾಸ ಬೇಲೂರು, ಗೋಪಿ ಗೊಲ್ಲರ, ವೆಂಕಟೇಶ್ ಬಣಕಾರ, ಮಂಜು ನಾಯಕ, ಮಾಲಿಗೌಡರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒಗಳು, ಪದಾಧಿಕಾರಿಗಳು ವಿವಿಧ ಇಲಾಖೆಗಳ ಸಿಬ್ಬಂದಿ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದು ನಡೆದ ಕಾರ್ಯಕ್ರಮದಲ್ಲಿ ಹರನಗೇರಿ, ನೂಕಾಪುರ, ವೈ. ಟಿ. ಹೊನ್ನತ್ತಿ, ಹಿಲದ ಹಳ್ಳಿ, ಅಂಕಸಾಪುರ ಮೊದಲಾದ ಕಡೆಗಳಲ್ಲಿ ಭೂ ಗ್ಯಾರಂಟಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 