ಕ್ಷೇತ್ರದ ಅಲೆಮಾರಿ ಕುಟುಂಬಗಳಿಗೆ ತಾಡ್‌ಪಾಲ್ ವಿತರಣೆ
Distribution of tadpal to the nomadic families of the area
ಕಂಪ್ಲಿ 19: ಕುರುಗೋಡು ಪಟ್ಟಣದಲ್ಲಿ ಕಂಪ್ಲಿ ಕ್ಷೇತ್ರದ ಅಲೆಮಾರಿಯ ಎಸ್ಸಿ, ಎಸ್ಟಿ ಜನಾಂಗದ ಕುಟುಂಬಗಳಿಗೆ ತಾಡ್‌ಪಲ್‌ಗಳನ್ನು ಶಾಸಕ ಜೆ.ಎನ್.ಗಣೇಶ್ ಬುಧವಾರ ವಿತರಿಸಿದರು. ನಂತರ ಶಾಸಕ ಗಣೇಶ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಲೆಮಾರಿ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಟೆಂಟ್‌ಗಳಲ್ಲಿ ಮಳೆ, ಚಳಿಗಾಲದಲ್ಲಿ ಸುರಕ್ಷತೆ ಇಲ್ಲದ ಪರಿಣಾಮ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಆದ್ದರಿಂದ ಇವರ ಸಂಕಷ್ಟವನ್ನು ಗಮನಿಸಿ, ಮಳೆ, ಚಳಿ ಸಂದರ್ಭದಲ್ಲಿ ಟೆಂಟ್‌ಗಳಲ್ಲಿ ತಾಡ್‌ಪಾಲ್ ಹಾಕಿಕೊಂಡು, ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎನ್ನುವ ಹಿತದೃಷ್ಟಿಯಿಂದ ಇಲ್ಲಿನ ಕುಟುಂಬಗಳಿಗೆ ಸರ್ಕಾರದಿಂದ ಬಂದಂತಹ ಉಚಿತ ತಾಡ್‌ಪಾಲ್‌ಗಳನ್ನು ವಿತರಿಸಿದ್ದು, ಇದರ ಬದುಪಯೋಗದೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು.
ಕಂಪ್ಲಿ ಕ್ಷೇತ್ರದ ಹಕ್ಕಿಪಿಕ್ಕಿ ಸಿಂಧೋಳ್, ಡೊಂಗ್ರಿಗರಾಶಿಯ ಶಿಳೆಕ್ಯಾತ ಸುಡುಗಾಡು ಸಿದ್ಧ, ಬುಡಗ ಜಂಗಮ, ಹಂಡಿ ಜೋಗಿ ಮತ್ತು ಇತರ ಅಲೆಮಾರಿ ಜಾತಿಗಳಿಗೆ ವಿತರಣ ಮಾಡಿ ಮುಂದಿನ ದಿನಗಳಲ್ಲಿ ಸರ್ಕಾರವತಿಯಿಂದ ನಿವೇಶನ ಜೊತೆಗೆ ಮನೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಲೆಮಾರಿ ಮುಖಂಡರುಗಳಾದ ಅಲೆಮಾರಿ ಅರೆಅಲೆಮಾರಿ ಮಹಾಸಭಾ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಎಚ್.ಪಿ ಶಿಕಾರಿ ರಾಮು, ಹನುಮಂತಪ್ಪ, ಜೋಗಿ ಸುಂಕಪ್ಪ, ಹಂಡಿಜೋಗಿ, ಹುಲುಗಪ್ಪ, ಸುಡುಗಾಡು ಸಿದ್ದ ಸೇರಿದಂತೆ ಅಲೆಮಾರಿ ಮುಖಂಡರು, ಮಹಿಳೆಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 