ಸೋಲಾರ್ ಉಪಕರಣಗಳ ವಿತರಣೆ


ಲೋಕದರ್ಶನ ವರದಿ

ಶಿಗ್ಗಾವಿ14 : ಮಹಿಳೆಗೆ ಕಾನೂನಿನಲ್ಲಿ ಇಂದು ಬಹಳ ಪ್ರಾಧಾನ್ಯತೆ ನೀಡಲಾಗಿದ್ದು ಆ ಕಾನೂನನ್ನು ಸಮಾನತೆಗೆ ಬಳಸಬೇಕೆ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಶಿಗ್ಗಾವಿ ಪಿಎಸ್ಐ ಅನ್ನಪೂಣರ್ಾ ಹುಲಗೂರ ಕಿವಿ ಮಾತು ಹೇಳಿದರು.

ಪಟ್ಟಣದ ಶರೀಫ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶಿಗ್ಗಾವಿ-ಸವಣೂರ ಹಾಗೂ ಸೆಲ್ಕೋ ಸೋಲಾರ್ ಸಹಯೋಗದಲ್ಲಿ ಸೋಲಾರ್ ಉಪಕರಣಗಳ ವಿತರಣೆ ಹಾಗೂ ನೂತನ ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನೊಂದ ಮಹಿಳೆಯ ಅವಲಂಭನಾ ಮನೋಭಾವ ದೂರವಾಗಿದೆ ಇದಕ್ಕೆ ಕಾರಣ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ನೀಡಿದ ಸ್ವಾವಲಂಬಿ ಜೀವನದ ಸದುಪಯೋಗ, ಸೀಮಿತ ಅವಧಿಗೆ ಬದುಕನ್ನು ರೂಪಿಸದೇ ಆಥರ್ಿಕ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳೆ ಇಟ್ಟಿರುವ ದಾಪುಗಾಲು ಇದಕ್ಕೆ ಕಾರಣವಾಗಿದೆ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬದುಕನ್ನು ವಿಶಾಲ ರೀತಿಯಲ್ಲಿ ಯೋಚಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿದರ್ೇಶಕ ಮಹಾಬಲ ಕುಲಾಲ ಮಾತನಾಡಿ, ಕೇವಲ ಅಕ್ಷರ ಜ್ಞಾನ ಇದ್ದವರು ಬದುಕಿನಲ್ಲಿ ಯಸಸ್ಸು ಸಾಧಿಸುತ್ತಾರೆ ಎಂಬ ಕಾಲವಿತ್ತು ಅದು ಈಗಿಲ್ಲ ಕೃಷಿ ತರಬೇತಿ, ಉದ್ಯೋಗ ತರಬೇತಿ ಸೇರಿದಂತೆ ನೂರಾರು ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಸಂಘ ತನ್ನ ನಾಲ್ಕೂ ಬಾಗಿಲುಗಳನ್ನು ತೆರೆದಿರುತ್ತದೆ, ಸಂಘದ ಮೇಲ್ವಿಚಾರಕೀಯರ ಸಹಾಯದಿಂದ ಮಾಹಿತಿಯನ್ನೂ ಸಹಿತ ಪಡೆದು ಹಣಕಾಸಿನ ವ್ಯವಸ್ಥೆಯನ್ನು ಮಹಿಳೆ ಅಚ್ಚುಕಟ್ಟಗಿ ನಿರ್ವಹಿಸುವುದರಿಂದ ಆಡಳಿತ ವ್ಯವಸ್ಥೆ ಅತೀ ವೇಗವಾಗಿ ಬೆಳೆಯುತ್ತಿದೆ ಎಂದ ಅವರು ಹತ್ತು ಮಹಿಳೆಯರು ಸೇರಿ ಮಾಡುವ ಸಂಘ ಒಂದೇ ತಾಯಿಯ ಮಕ್ಕಳಂತೆ ವ್ಯವಹಾರ ಮಾಡಬೇಕು ಎಂದಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ರಂಭಾಪುರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ ಎಸ್ ವಿ ಕುಲಕಣರ್ಿ ಮಾತನಾಡಿ, ಧರ್ಮಸ್ಥಳ ಸಂಘ ಮಹಿಳೆಯ ಆಥರ್ಿಕ, ಸಾಮಾಜಿಕ ಅಭಿವೃದ್ದಿ ಕಂಕಣ ಬದ್ದವಾಗಿದ್ದು ಯಾವ ಬ್ಯಾಂಕಿಗೂ ಕಡಿಮೆ ಇಲ್ಲದೇ ತನ್ನ ವ್ಯವಹಾರವನ್ನು ಅಚ್ಚುಕಟ್ಟಾಗಿ ಮಾಡುತ್ತದೆ ಇದಕ್ಕೆ ವೀರೇಂದ್ರ ಹೆಗಡೆಯವರ ಆಶೀವರ್ಾದವೇ ಕಾಣವಾಗಿದ್ದು ಎಲ್ಲ ವರ್ಗದ ಜನರನ್ನು ಮೇಲೆತ್ತುವ ಕಾರ್ಯವನ್ನು ಸಂಸ್ಥೆ ಮಾಡುತ್ತದೆ ಶ್ರೀಗಳು ಕಟ್ಟಿರುವ ಕನಸ್ಸನ್ನು ನೀವೆಲ್ಲರೂ ಸಕಾರಗೊಳಿಸಲು ಮುಂದಾಗಿ, ಮತಕ್ಕಾಗಿ ಹೊಡೆದಾಡದೇ ಮತಿಯಿಂದ ದುಡಿದು ಕುಟುಂಬ ಆಧಾರಸ್ತಂಬಗಳು ನೀವಾಗಿ ಎಂದು ಹಾರೈಸಿದರು.

ತಾಲೂಕಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮುಖೇಶ, ಸೆಲ್ಕೋ ಸೋಲಾರ್ನ ರಘು ಜವಳಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನೂತನ ಸಂಘದ ಸದಸ್ಯರಿಗೆ ದಾಖಲಾತಿ ಪುಸ್ತಕಗಳನ್ನು ಹಾಗೂ ವಿವಿಧ ಫಲಾನುಭವಿಗಳಿಗೆ ಸೋಲಾರ್ ಹಾಗೂ ವಲೆಗಳನ್ನು ವಿತರಿಸಲಾಯಿತು.

ಮೇಲ್ವಿಚಾರಕೀಯರಾದ ಗೀತಾ ಅಂಭಿಗೇರ, ಶಶಿಕಲಾ ಕುನ್ನೂರ, ಸುನಿತಾ ಕಬ್ಬೆರ ಸೇರಿದಂತೆ ಸಂಘದ ಸದಸ್ಯರು ಹಾಗೂ ಧರ್ಮಸ್ಥಳ ಸಂಘದ ಸಿಬ್ಬಂದಿ ಹಾಜರಿದ್ದರು. ವಿಜಯಲಕ್ಷ್ಮಿ ಸಾರಂಗಮಠ ಪ್ರಾಥರ್ಿಸಿದರು, ಮೇಲ್ವಿಚಾರಕ ಚನ್ನಬಸಪ್ಪ ನಿರೂಪಿಸಿ ವಂದಿಸಿದರು.