ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ
Distribution of seeds and fertilizers
ಲೋಕದರ್ಶನ ವರದಿ
ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ
ಯರಗಟ್ಟಿ 06: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ತಾಲೂಕಿನಲ್ಲಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಗೆ ಅವಶ್ಯವಿರುವ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ, ತಿಳಿಸಿದ್ದಾರೆ.ಪ್ರಸಕ್ತ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಬೇಕಾಗುವ ಕಡಲೆ, ಜೋಳ, ಗೋಧಿ, ಸೂರ್ಯಕಾಂತಿ ಹಾಗೂ ಕುಸುಬೆ ಬಿತ್ತನೆ ಬೀಜ ಈಗಾಗಲೇ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ತಾಲೂಕಿನಲ್ಲಿ 2025-26 ನೇ ಸಾಲಿನ ಹಿಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯವನ್ನು ಸದರಿ ಹಂಗಾಮಿನಲ್ಲಿ ಲಭೈವಿರುವ ದಾಸ್ತಾನು ಬಗ್ಗೆ ಮಾಹಿತಿ ನೀಡುತ್ತಾ ಹೋಬಳಿಯ ಉಪ ಮಾರಾಟ ಕೇಂದ್ರದಲ್ಲಿ ಈಗಾಗಲೇ ಕಡಲೆ 697 ಕ್ವಿ ಬೇಡಿಕೆ ಪೈಕಿ 370 ಕ್ವಿ ಹಾಗೂ ಜೋಳ 54 ಕ್ವಿ ಪೈಕಿ 30 ಕ್ವಿ ದಾಸ್ತಾನು ಇದ್ದು ಮುಂದಿನ ದಿನಗಳಲ್ಲಿ ಸೂರ್ಯ್ರಕಾಂತಿ, ಗೋಧಿ ಹಾಗೂ ಮುಸುಕಿನ ಜೋಳ ಬೀಜ ದಾಸ್ತಾನು ಹಾಗೂ ವಿತರಣೆ ಮಾಡಲಾಗುವುದು. ಕಡಲೆ ಪ್ರತಿ 20 ಕೆ.ಜಿ ಪಾಕೆಟ್ ದರವು ರೂ.1160/- ಜೋಳ ಪ್ರತಿ 3 ಕೆ.ಜಿ ಪಾಕೆಟ್ ದರವು ರೂ.120/- ಹಾಗೂ ಗೋಧಿ ಪ್ರತಿ 30 ಕೆ.ಜಿ ಪಾಕೆಟ್ ದರವು ರೂ.1830/- ಇದ್ದು ಯಾವುದೇ ದಾಸ್ತಾನು ಕೊರತೆ ಇರುವುದಿಲ್ಲ. ರೈತರು ಸಂಬಂದಿಸಿದ ಉಪ ಕೇಂದ್ರಕ್ಕೆ ಭೇಟಿ ನೀಡಿ ಬೀತ್ತನೆ ಬೀಜ ಪಡೆಯಲು ಸಾಹಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ತಿಳಿಸಿದರು.ಈ ವೇಳೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಯರಗಟ್ಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿಗಳಾದ ಶ್ರವಣ ಶಿವಪೂಜಿ ,ಮಂಜು ಮುಂಡೆಶಿ ,ಬಸಪ್ಪ ದಳವಾಯಿ, ತುಕಾರಾಂ ಕಮತಗಿ, ಹಣಮಂತ ತಳವಾರ ರೈತರಾದ ಶಿವಾನಂದ ನಾಯಕಪ್ಪ, ಶಿ ಗೋಳ, ಸೋಮು ರೈನಾಪುರ, ಶಿವಾನಂದ ಕರಿಗೊನ್ನವರ, ಬಸವರಾಜ್ ಚಿಕಾಕಿ ಮತ್ತು ಧರ್ಮೇಶ್ ಚಿಕಾಕಿ ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 