ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ
Distribution of nutritious food to students under the Akshara Dasoha scheme
ರಾಯಬಾಗ 11 : ಮಕ್ಕಳಲ್ಲಿ ಪೌಷ್ಟಿಕ ಮತ್ತು ಉತ್ತರ ಆಹಾರ ಪದ್ಧತಿಯನ್ನು ಬೆಳೆಸುವುದು ಹಾಗೂ ಆರೋಗ್ಯದಾಯಕ ಬೆಳವಣಿಗೆಗೆ ಪೂರಕವಾಗುವುದು ಅಕ್ಷರ ದಾಸೋಹ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು. ಶನಿವಾರ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಹೊಸ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಬಾಜೀರಾವ ಮಗದುಮ್ಮ ಪ್ರೌಢ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇಡ್ಲಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆಯಲ್ಲಿ ಇಡ್ಲಿ ವಿತರಿಸಲಾಗುತ್ತಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಧುಳಗೌಡ ಪಾಟೀಲ, ಅಜೀತ ಕಾಮಗೌಡ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ, ಸಿ.ಆರಿ್ಪ ಮುಬಾರಕ ತಾಶೀವಾಲೆ, ಮುಖ್ಯೋಪಾಧ್ಯಾಯ ಅರುಣ ಸಲಗರೆ, ಎಸ್.ಬಿ.ಬೆನ್ನಾಡೆ, ಕುಂತಿನಾಥ ಮಗದುಮ್ಮ, ರಮೇಶ ಬೆಳಗಲಿ, ಪ್ರಕಾಶ ಬೊಳಗೊಂಡ, ಅಜೀತ ಅರಗೆ, ಅಣ್ಣಾಸಾಹೇಬ ಪಾಟೀಲ ಹಾಗೂ ಆದರ್ಶ ಗ್ರೂಪನ ಸದಸ್ಯರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 