ಜವಾಹರ ಸಕ್ಕರೆ ಕಾರ್ಖಾನೆಯಿಂದ ರೈತ ಸದಸ್ಯರಿಗೆ ವೈದ್ಯಕೀಯ ನೆರವಿನ ಚೆಕ್ ವಿತರಣೆ..!

ಜವಾಹರ ಸಕ್ಕರೆ ಕಾರ್ಖಾನೆಯಿಂದ ರೈತ ಸದಸ್ಯರಿಗೆ ವೈದ್ಯಕೀಯ ನೆರವಿನ ಚೆಕ್ ವಿತರಣೆ..! Distribution of medical assistance cheques to farmer-members by the Jawahar Sugar Factory!

ಕಾಗವಾಡ 01 :  ತಾಲೂಕಿನ ಜುಗೂಳ ಗ್ರಾಮದ ರೈತ ಕುಮಾರ ಭಿಷ್ಟನ್ನವರ ಜವಹಾರ ಸಕ್ಕರೆ ಕಾರ್ಖಾನೆಯ ಸದಸ್ಯರಾಗಿದ್ದು, ಕಾರ್ಖಾನೆಗೆ ನಿರಂತರ ಕಬ್ಬು ಪೂರೈಕೆ ಮಾಡಿದ್ದಾರೆ. ಈಗ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಕಾರ್ಖಾನೆ ವತಿಯಿಂದ ಅವರ ಚಿಕಿತ್ಸೆಗಾಗಿ ರೂ. 50 ಸಾವಿರ ಧನಸಹಾಯದ ಚೆಕ್ಕನ್ನು ನೀಡಲಾಗಿದೆ ಎಂದು ಹುಪರಿಯ ಕಲ್ಲಪ್ಪಣ್ಣಾ ಅವಾಡೆ ಜವಾಹರ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಕಿವಾಟ ಸರ್ಕಲ್ ಅಗ್ರಿ ಹೊಸ್ಟರ್ ಅಸ್ಲಮ್ ತಾಠೊಳೆ ತಿಳಿಸಿದ್ದಾರೆ.

ಅವರು ಶನಿವಾರ ದಿ. 01 ರಂದು ಜುಗೂಳ ಗ್ರಾಮದಲ್ಲಿ ಕುಮಾರ ಭಿಷ್ಟನ್ನವರ ಅವರಿಗೆ ಧನ ಸಹಾಯದ ಚೆಕ್ಕನ್ನು ವಿತರಿಸಿ ಮಾತನಾಡುತ್ತಿದ್ದರು.ಕಾಗವಾಡ ತಾಲೂಕಾ ಬಿಜೆಪಿ ಅಧ್ಯಕ್ಷ ಅರುಣ ಗಣೇಶವಾಡಿ ಮಾತನಾಡಿ, ಅನಾರೋಗ್ಯದಿಂದ ಆರ್ಥಿಕ ಸಂಕಷ್ಟ ಎದುರಿಸುವ ರೈತ ಸದಸ್ಯರಿಗೆ ಜವಾಹರ ಸಕ್ಕರೆ ಕಾರ್ಖಾನೆಯ ಯೋಜನೆಗಳಿಂದ ದೊರೆಯುವ ಧನ ಸಹಾಯ ಅವರ ಚಿಕಿತ್ಸೆಗೆ ಬಹಳ ಅನುಕೂಲ ಮಾಡಿಕೊಡಲಿದೆ. ಕಾರ್ಖಾನಯ ಇಂಥ ಕಾರ್ಯಗಳು ನಿಜಕ್ಕೆ ಶ್ಲಾಘನೀಯವಾಗಿದೆ ಎಂದರು. ಧನಸಹಾಯ ಪಡೆದ ಕುಮಾರ ಭಿಷ್ಟನ್ನವರ ಮಾತನಾಡಿ, ತಮ್ಮ ನೆರವಿಗೆ ಕಾರ್ಖಾನೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಸುಧಾಕರ ಗಣೇಶವಾಡಿ, ಅರುಣ ಗಣೇಶವಾಡಿ, ಭರತ ಲಾಂಡಗೆ, ಅಜೀತ ಹರೋಲಗೆ, ರಾವಸಾಬ ಅಕ್ಕೋಳೆ, ಪಾರಸ ಅಕ್ಕೋಳೆ, ಭರತ ಭಿಸ್ಟನ್ನವರ, ಚಂದ್ರಕಾಂತ ಮೋಳೆ, ರಾಜು ಲೆಂಡೆ, ಅನಿಲ ಮೋಳೆ, ಅನಿಲ ಸುಂಕೆ, ಅಪ್ಪಸಾಬ ಭಿಸ್ಟನ್ನವರ, ಸಂಜು ಭಿಸ್ಟನ್ನವರ, ರಾಜು ಭಿಸ್ಟನ್ನವರ, ವಸಂತ ಭಿಸ್ಟನ್ನವರ, ಪಾರೀಶ ಮಗದುಮ್ಮ, ಕಾರ್ಖಾನೆಯ ಅಕಿವಾಟ ಸರ್ಕಲ್ ಅಗ್ರಿ ಹೊಸ್ಟರ್ ಅಸ್ಲಮ ತಾಂಬೋಳೆ, ಅಗ್ರಿ ಅಸಿಸ್ಟೆಂಟ್ ಸುರಜ ನರವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.