ಒಂದೇ ಸೂರಿನಡಿ ಉತ್ಪದನಾ ಚಟುವಟಿಕೆ ಕೈಗೊಳ್ಳಲು ವಿವಿಧ ಇಲಾಖೆಗಳ ಸಹಕಾರದಲ್ಲಿ ಸಾಲ ಮಂಜೂರಾತಿ ಪತ್ರ ವಿತರಣೆ
Distribution of loan sanction letters in cooperation with various departments to undertake productio
ಧಾರವಾಡ 20: ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಾಣಿಜ್ಯ ಬ್ಯಾಂಕ್‌ದಿಂದ ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ (ಕಂ.ಲಿ.) ಸಂಘಕ್ಕೆ ಒಂದೇ ಸೂರಿನಡಿ ದಾಲ್ ಮಿಲ್ (ಬೇಳೆ ಸಂಸ್ಕರಣಾ ಘಟಕ), ಚಿಲ್ಲಿ ಪ್ರೋಸೆಸಿಂಗ್ (ಮೆಣಸಿನಕಾಯಿ ಸಂಸ್ಕರಣೆ), ಆಯಿಲ್ ಪ್ರೋಸೆಸಿಂಗ್ (ಎಣ್ಣೆ ಸಂಸ್ಕರಣೆ) ಮತ್ತು ಸೊಲಾರ್ ಡ್ರೈಯರ್ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅನುದಾನದೊಂದಿಗೆ ಅಮ್ಮಿನಭಾವಿ ಯುಕೋ ಬ್ಯಾಂಕ್ ಶಾಖೆಯು ಮಂಜೂರಾತಿ ನೀಡಿರುವ ಸಾಲದ ಪ್ರಮಾಣ ಪತ್ರವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಇಂದು (ಡಿ.20) ಜಿಲ್ಲಾಮಟ್ಟದ ಬ್ಯಾಂಕ್ರ್ಸ ಸಮಿತಿ ಸಭೆಯಲ್ಲಿ ವಿತರಿಸಿದರು.
ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ (ಕಂ.ಲಿ.) ಸಂಘವು ನಬಾರ್ಡ್‌ನ ಪ್ರಾಯೋಜಕತ್ವದೊಂದಿಗೆ ಮತ್ತು ಧಾರವಾಡ ಸ್ಕೋಪ್ ಸಂಸ್ಥೆ ಅವರ ತಾಂತ್ರಿಕ ಸಲಹೆಯೊಂದಿಗೆ ಜುಲೈ 20, 2020 ರಂದು ನೋಂದಣಿಯಾಗಿ, ಅನೇಕ ರೈತಪರ ಚಟುವಟಿಕೆಗಳನ್ನು ಮಾಡುತ್ತಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ಕೀಟನಾಶಕ, ಬೀಜ, ತಾಡಪತ್ರೆ ಅಲ್ಲದೆ ಸರಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರುಕಾಳು, ಕಡಲೆ ಖರೀದಿ ಕೇಂದ್ರಗಳನ್ನು ಯಶಸ್ವಿಯಾಗಿ ಸೇವೆ ನೀಡುತ್ತಿದೆ.
ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸದಸ್ಯರಿಗೆ ಮತ್ತು ರೈತರಿಗೆ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಮಾಡಿದೆ. ರೈತರ ಬೆಳೆಗಳನ್ನು ಮೌಲ್ಯ ವರ್ಧನೆ ಮಾಡುವ ಸಲುವಾಗಿ ಕಳೆದ ಒಂದು ವರ್ಷದದಿಂದ ಸರಕಾರದ ಸಹಾಯ ಧನ ಸಾಲ ಸೌಲಭ್ಯಕ್ಕಾಗಿ ವಿವಿಧ ಬ್ಯಾಂಕಗಳನ್ನು ಸಂಪರ್ಕಿಸಿದಾಗ ಅಂತಿಮವಾಗಿ ಯುಸಿಓ ಬ್ಯಾಂಕ್ ಅಮ್ಮಿನಭಾವಿ ಶಾಖೆಯವರು ಮುಂದೆ ಬಂದು ಭಾರತ ಸರಕಾರದ ವಿವಿಧ ಯೋಜನೆಗಳು ಮತ್ತು ಕರ್ನಾಟಕ ಸರಕಾರ ವಿವಿಧ ಮತ್ತು ಸೆಲ್ಕೋ (ಖಇಐಅಓ) ಫೌಂಡೇಶನ್ ಸಹಾಯ ಧನ ಯೋಜನೆಯಡಿಯಲ್ಲಿ ಸುಮಾರು 44,70,000 ಯೋಜನಾ ವೆಚ್ಚದ ವರದಿಯಲ್ಲಿ ಸಾಲವನ್ನು ಮಂಜೂರು ಮಾಡಿದ್ದಾರೆ, ಈ ಯೋಜನೆಯಡಿ ಭಾರತ ಸರಕಾರದ ಯೋಜನೆಗಳಾದ ಪಿಎಮ್‌ಎಫ್‌ಎಮ್‌ಎ (ಕಒಈಒಇ), ಎನ್‌ಎಮ್‌ಇಓ (ಓಒಇಓ), ಕರ್ನಾಟಕ ಸರ್ಕಾರದ ಕೆಆರ್‌ಎಸ್‌ವಾಯ್ (ಏಖಖಙ) ಮತ್ತು ಸೆಲ್ಕೋ (ಖಇಐಅಓ) ಫೌಂಡೇಶನ್ ಸಹಾಯ ಧನ ಒಳಗೊಂಡಿದೆ.
ಇಂದು (ಡಿ. 20) ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಾಗೂ ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಮಯೂರ್ ಕಾಂಬಳೆ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮತ್ತು ಯುಸಿಓ ಬ್ಯಾಂಕ್ ಅಮ್ಮಿನಭಾವಿ ಶಾಖೆಯ ವ್ಯವಸ್ಥಾಪಕ ಶಂಕರ ಕಡ್ಲಿಮಟ್ಟಿ ಹಾಗೂ ಜಿಲ್ಲಾ ಅಗ್ರಣಿಯ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಗಡದವರ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಹಾಗೂ ಕಂಪನಿ ನಿರ್ದೇಶಕ ಬಸವರಾಜ ಕುಂದಗೋಳಮಠ ಮತ್ತು ಡಿಎಲ್‌ಆರ್‌ಸಿ ಸಭೆಯ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಮೊರಬ ಇವರ ಆಡಳಿತ ಮಂಡಳಿ ನಿರ್ದೇಶಕರಿಗೆ ಸಾಲ ಮಂಜೂರಾತಿ ಪತ್ರವನ್ನು ಡಿಎಲ್‌ಆರ್‌ಸಿ ಸಭೆಯಲ್ಲಿ ವಿತರಣೆ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 