ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ ವಿತರಣೆ
Distribution of health insurance cards to journalists
ಬೆಳಗಾವಿ 19: ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ವಿಮೆಯನ್ನು ಮಾಡಲಾಗಿದೆ ಎಂದು ಮಹಾಪೌರ ಮಂಗೇಶ್ ಪವಾರ್ ಹೇಳಿದರು.
ಶನಿವಾರ ಬೆಳಗಾವಿ ಮೇಯರ್ ಕಚೇರಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಬೆಳಗಾವಿ ಸುಂದರ ನಗರವನ್ನಾಗಿ ಮಾಡಲು ಪತ್ರಕರ್ತರು ಸಹಕರಿಸಬೇಕು ಎಂದರು.ಉಪಮೇಯರ್ ವಾಣಿ ಜೋಶಿ ಮಾತನಾಡಿ, ಪತ್ರಕರ್ತರ ಕುಟುಂಬದ ಹಿತ ದೃಷ್ಟಿಯಿಂದ ಮೂರು ಲಕ್ಷ ರೂ. ಇದ್ದ ಪತ್ರಕರ್ತರ ಆರೋಗ್ಯ ವಿಮೆ ಐದು ಲಕ್ಷಕ್ಕೆ ಮಾಡಲಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ಹಲವಾರು ವರ್ಷಗಳಿಂದ ಪತ್ರಕರ್ತರಿಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯದ ಕಾರ್ಡ್ ವಿತರಿಸಲಾಗುತ್ತಿದೆ. ಮೊದಲು ಇದ್ದ ಮೂರು ಲಕ್ಷ ರೂ. ಆರೋಗ್ಯ ವಿಮೆಯನ್ನು ಪತ್ರಕರ್ತರ ಬೇಡಿಕೆ ಅನುಸಾರವಾಗಿ ಐದು ಲಕ್ಷ ರೂ.ಮಾಡಲಾಗಿದೆ. ಇದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು. ಮನುಷ್ಯನಿಗೆ ಏನಾದರೂ ಏರುಪೇರು ಆಗುವುದು ಸಹಜ. ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಾದರೆ ಆರೋಗ್ಯ ವಿಮೆಯ ಲಾಭಪಡೆಯಿರಿ ಎಂದರು.ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೊದಲ ಬಾರಿಗೆ ಪತ್ರಕರ್ತರಿಗೆ ಆರೋಗ್ಯ ವಿಮೆ ಜಾರಿ ಮಾಡಲಾಗಿದೆ. ಒಂದು ಪತ್ರಕರ್ತರ ಕುಟುಂಬಕ್ಕೆ ಐದು ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗಿದೆ. ಮೇಯರ್ ಹಾಗೂ ಉಪಮೇಯರ್ ಮಾರ್ಗದರ್ಶನದಲ್ಲಿ ಈ ಆರೋಗ್ಯ ವಿಮೆ ಜಾರಿ ಮಾಡಿದ್ದೇವೆ. ಇದರ ಲಾಭವನ್ನು ಎಲ್ಲ ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಮೊದಲು ಪಾಲಿಕೆಯಿಂದ ಪತ್ರಕರ್ತರಿಗೆ ಮೂರು ಲಕ್ಷ ರೂ. ಆರೋಗ್ಯವ ವಿಮೆ ಇತ್ತು. ಇದನ್ನು ಐದು ಲಕ್ಷ ರೂ.ಮಾಡಬೇಕು ಎಂದು ಮನವಿ ಮಾಡಿದಾಗ ಅದನ್ನು ಹೆಚ್ಚು ಮಾಡಿಕೊಟ್ಟ ಮೇಯರ್, ಉಪಮೇಯರ್, ಸ್ಥಳೀಯ ಶಾಸಕರು ಸಹಕಾರ ನೀಡಿದ್ದಾರೆ. ಎಲ್ಲ ಪತ್ರಕರ್ತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ್ ಮಾತನಾಡಿ, ಬೆಳಗಾವಿ ಪತ್ರಕರ್ತರಿಗೆ ಪಾಲಿಕೆಯಿಂದ ಆರೋಗ್ಯ ವಿಮೆ ಕಾರ್ಡ್ ವಿತರಿಸಿದ್ದು ಹರ್ಷ ತಂದಿದೆ. ಕೆಲವೊಂದು ಪತ್ರಕರ್ತರ ಹೆಸರು ಬಿಟ್ಟು ಹೋಗಿವೆ. ಅವುಗಳನ್ನು ಸೇರಿಸಿ ಎಂದರು.
ಪತ್ರಕರ್ತರಾದ ರಾಜು ಗವಳಿ, ಶ್ರೀಶೈಲ ಮಠದ, ರವಿ ಉಪ್ಪಾರ, ಮಲ್ಲಿಕಾರ್ಜುನ ಮುಗಳಿ, ಸಂಜಯ ಸುರ್ಯವಂಶಿ, ಸಹದೇವ ಮಾನೆ, ಮುನ್ನಾ ಭಾಗವಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 