1.36 ಲಕ್ಷ ಬೆಲೆಬಾಳುವ ಪೀಠೋಪಕರಣಗಳ ವಿತರಣೆ : ಶಾಸಕ ಶ್ರೀನಿವಾಸ ಮಾನೆ
Distribution of furniture worth Rs. 1.36 lakh: MLA Srinivas Mane
ಹಾನಗಲ್ 27 : ತಾಲೂಕಿನ ಗುಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ? 1.36 ಲಕ್ಷ ಬೆಲೆಬಾಳುವ ಪಾಠೋಪಕರಣ ಹಾಗೂ ಪೀಠೋಪಕರಣಗಳನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು.
ಆಫೀಸ್ ಟೇಬಲ್, ಸ್ಟೀಲ್ ಡೆಸ್ಕ್, ಲೈಬ್ರರಿ ಅಲ್ಮೆರಾ, ಬಾಕ್ಸ್ ಲಾಕರ್, ಸ್ಟೀಲ್ ರ್ಯಾಕ್, ಬೇಬಿ ಚೇರ್, ರೌಂಡ್ ಟೇಬಲ್ ಸೇರಿದಂತೆ ಇನ್ನೂ ಹಲವು ಸಾಮಗ್ರಿಗಳನ್ನು ವಿತರಿಸಲಾಯಿತು. ತಗುಲಿದ ಒಟ್ಟು ವೆಚ್ಚದಲ್ಲಿ ಅರ್ಧ ಹಣವನ್ನು ಗ್ರಾಮಸ್ಥರು ಭರಿಸಿದರೆ, ಉಳಿದರ್ಧ ಹಣವನ್ನು ಶಾಸಕ ಶ್ರೀನಿವಾಸ ಮಾನೆ ವೈಯಕ್ತಿಕವಾಗಿ ಭರಿಸಿದ್ದಾರೆ.
ಕಲಿತ ಶಾಲೆಗಳನ್ನೊಮ್ಮೆ ಪ್ರತಿಯೊಬ್ಬರೂ ಸಹ ತಿರುಗಿ ನೋಡಿ ಸ್ಪಂದಿಸಿದರೆ ಸರ್ಕಾರಿ ಶಾಲೆಗಳು ಅಗತ್ಯ ಸೌಲಭ್ಯ ಕಾಣಲಿವೆ. ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ ಆರಂಭಿಸಲಾಗಿರುವ 50:50 ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿದೆ. ಇದುವರೆಗೆ ತಾಲೂಕಿನ 110 ಕ್ಕೂ ಹೆಚ್ಚು ಶಾಲೆಗಳಿಗೆ ? 3 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕರ ಹೆಚ್ಚುವರಿ ವೇತನವನ್ನೂ ಸಹ ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಕುಮಾರ ಲಮಾಣಿ, ಹೇಮಂತ ಲಮಾಣಿ, ನಾಗರಾಜ ಲಮಾಣಿ, ಎನ್.ಆರ್.ಪಾಟೀಲ, ಶಿಕ್ಷಕ ಮಾಲತೇಶ ಬೆಳಗಾಲ ಸೇರಿದಂತೆ ಅನೇಕರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 