ಜನ್ಮದಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Distribution of fruits and sweets to patients on their birthdays
ಲೋಕದರ್ಶನ ವರದಿ
ತಾಳಿಕೋಟೆ 16: ನಲವಡೆ ಕುಟುಂಭದ ವತಿಯಿಂದ ಮಂಗಳವಾರರಂದು ಪುತ್ರ ಸಾಯಿಸಮರ್ಥನ 9ನೇ ವರ್ಷದ ಜನ್ಮದಿನದ ಅಂಗವಾಗಿ ಆಸ್ಪತ್ರೆಗಳಲ್ಲಿನ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವದರೊಂದಿಗೆ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮದ ಜಾಗೃತಿ ಕಾರ್ಯವನ್ನು ಮಾಡಿದ್ದಾರೆ.ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿನ ಬಡ ರೋಗಿಗಳಿಗೆ ಬ್ರೇಡ್, ಬೀಸ್ಕಿತ್, ಹಣ್ಣು ಹಂಪಲುಗಳನ್ನು ವಿತರಿಸಿದ ಹಣಮಂತ ನಲವಡೆ ಕುಟುಂಭದವರು ರೋಗಿಗಳೊಂದಿಗೆ ಕುಷಲೋಪಚಾರವನ್ನು ಗೈದರು.ಈ ಸಮಯದಲ್ಲಿ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಿ ಬರ್ತಡೆ ಪಾರ್ಟಿ ಎಂಬ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿರುವ ಇಂದಿನ ದಿನಮಾನದಲ್ಲಿ ಹಣಮಂತ ನಲವಡೆ ಕುಟುಂಭದ ಬಾಂದವರು ತಾಳಿಕೋಟೆಯ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಹಂಪುಗಳನ್ನು ನೀಡಿ ರೋಗಿಗಳಿಗೆ ಚೇತರಿಕೆ ಮತ್ತು ಸಾಂತ್ವನ ನೀಡುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ.
ರೋಗಿಗಳಿಗೆ ಪೌಷ್ಟಿಕಾಂಶದ ಹಣ್ಣು ಹಂಪಲು ಆಹಾರ ಒದಗಿಸುವದರೊಂದಿಗೆ ರೋಗಿಗಳಲ್ಲಿ ಹೊಸ ಚೈತನ್ಯ ಮೂಡಲಿದೆ ಇಂತಹ ಕಾರ್ಯಕ್ರಮಗಳು ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಸಮಾಜದೊಂದಿಗೆ ಬೆರೆಯಲು ಸಹಾಯ ಮಾಡುತ್ತವೆ. ಇದರ ಜೊತೆಗೆ ಪರಿಸರ ಪೂರಕವಾದ ಪ್ರೇಮತ್ವವನ್ನು ಮಕ್ಕಳಲ್ಲಿ ಬೆಳೆಸಲು ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಂಡಿರುವದು ಗುಣಗಾನಮಯವಾಗಿದೆ ಎಂದರು.ಈ ಸಮಯದಲ್ಲಿ ಡಾ.ವಿಜಯಲಕ್ಷ್ಮೀ ಹಜೇರಿ, ಡಾ.ಮಧು ಅಗರವಾಲಾ, ಹಣಮಂತ ನಲವಡೆ, ಶ್ರೀಮತಿ ಭಾರತಿ(ಸ್ನೇಹಾ) ನಲವಡೆ, ಜಿ.ಟಿ.ಘೋರೆ್ಡ, ರಾಘವೇಂದ್ರ ನಲವಡೆ, ರಾಜಶೇಖರ ಮ್ಯಾಗೇರಿ, ಅಂಬಾಜಿ ಘೋರೆ್ಡ, ಪ್ರಾರ್ಥನಾ ನಲವಡೆ, ಭೂಮಿಕಾ ಘೋರೆ್ಡ, ಪ್ರವೀಣ್ ಘೋರೆ್ಡ, ಮಾರುತಿ ಕಾಸೇದ, ರಣಜಿತ್‌ಸಿಂಹ್ ಘೋರೆ್ಡ, ಗಂಗಾ ಘೋರೆ್ಡ, ವಿಜಯಸಿಂಹ್ ಘೋರೆ್ಡ, ಅದ್ವಿತಾ ಘೋರೆ್ಡ, ಅವಂತಿಕಾ ಘೋರೆ್ಡ, ಮೊದಲಾದವರು ಉಪಸ್ಥಿತರಿದ್ದರು.15ಟಿಎಲ್‌ಕೆ 2ಫೋಟೋ: ತಾಳಿಕೋಟೆ : ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನಲವಡೆ ಕುಟುಂಭದ ವತಿಯಿಂದ ಸಾಯಿಸರ್ಮರ್ಥ ನಲವಡೆ ಜನ್ಮದಿನದ ಅಂಗವಾಗಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 