ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
Distribution of free note books to government high school children
ಕಂಪ್ಲಿ 05: ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶಕರು ಜೊತೆಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜನಾರ್ದನರೆಡ್ಡಿ ಹೇಳಿದರು. ತಾಲೂಕಿನ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಗುರುವಾರ ನೋಟ್ ಪುಸ್ತಕ ವಿತರಿಸಿ ನಂತರ ಮಾತನಾಡಿ ಮಕ್ಕಳು ತಪ್ಪದೇ ಶಾಲೆಗೆ ಬರಬೆಕು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಆದಿಶಕ್ತಿ ಶ್ರೀ ದುರ್ಗಾದೇವಿ ಪೂಜ್ಯ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಆಗಿದೆ ಎಂದರು ನಿರಂತರವಾಗಿ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದರು ಸಮಾಜ ಸೇವಕ ಮಂಜುನಾಥ ಕಲಾಲ್ ಮಾತನಾಡಿ, ಕಳೆದ 7 ವರ್ಷಗಳಿಂದ 13ಲಕ್ಷ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಗಿದೆ. ಶಿಕ್ಷಣದ ಸೇವೆ ಮಾಡಲು, ಅನುವು ಮಾಡಿಕೊಡಬೇಕು ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಆಗಿದೆ ಎಂದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಮಂಜುನಾಥ ಕಲಾಲ್ ಅವರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನ .
ಈ ಸಂದರ್ಭದಲ್ಲಿ ಆನೆಗೊಂದಿಯ ರಾಜವಂಶಸ್ಥರಾದ ಶ್ರೀಮತಿ ರತ್ನ ಶ್ರೀ ಶ್ರೀಕೃಷ್ಣದೇವರಾಯಲು ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಉಪಾಧ್ಯಕ್ಷೆ ಪೂರ್ಣಿಮಾ, ಪತ್ರಕರ್ತರಾದ ನಿಂಗಜ್ಜ, ದೇಸಾಯಿ, ಮುಖಂಡರಾದ ಮನೋಹರ ಗೌಡ ಹೇರೂರು, ಡಿ ಕೆ ಅಗೋಲಿ, ಯಮನೂರು ಚೌಡ್ಕಿ, ಟಿ.ಜಿ ಬಾಬು, ಜಿಲಾನ್ ಪಾಷಾ, ಪಂಪಣ್ಣ ನಾಯಕ್, ದುರ್ಗಪ್ಪ ದಳಪತಿ, ಬಾಬು ರೆಡ್ಡಿ, ಬಾಲಪ್ಪ, ಶಿವಪ್ರಸಾದ್ ರೆಡ್ಡಿ, ಕಾಶಿನಾಥ, ಪ್ರಸಾದ್, ಲೋಕೇಶ್ ವೆಂಕಟೇಶ್, ರಾಜಶೇಖರ, ಶ್ರೀ ಕೃಷ್ಣ ಪಾಟೀಲ್, ಬಸವರಾಜ್ ಹನುಮೇಶ್ ನುವೇಶ ಮಲ್ಲಾಪುರ, ಯಮನಪ್ಪ, ದೇವರಾಜ ಪರಶುರಾಮ್ ಸೇರಿದಂತೆ ಮುಖಂಡರು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 