ಶಾಲಾ ವಿದ್ಯಾರ್ಥಿಗಳಿಗೆ ಅವಶ್ಯ ಸಾಮಗ್ರಿಗಳ ವಿತರಣೆ
Distribution of essential supplies to school students
ಶಾಲಾ ವಿದ್ಯಾರ್ಥಿಗಳಿಗೆ ಅವಶ್ಯ ಸಾಮಗ್ರಿಗಳ ವಿತರಣೆ
ಯರಗಟ್ಟಿ, 04 : ಸಮೀಪದ ಮುನವಳ್ಳಿ ಪಟ್ಟಣದ ಸಮಾಜ ಸೇವಾ ಸಂಸ್ಥೆಯಾದ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹ್ಯಾಪಿ ಸ್ಕೂಲ್ ಪ್ರೊಜೆಕ್ಟ್ ಹಮ್ಮಿಕೊಳ್ಳಲಾಗಿತ್ತು. ಶಾಲೆಗೆ ಹಾಗೂ ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಗೌರಿ ವೆಂಕಟೇಶ ನಾಯ್ಕ ಅವರಿಂದ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ಮತ್ತು ಶುಚಿತ್ವದ ಕುರಿತು ಮಾರ್ಗದರ್ಶನ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶಾರದಾ ದ್ಯಾಮನಗೌಡರ, ಸುಷ್ಮಾ ಗೋಮಾಡಿ, ಅಶ್ವಿನಿ ದಶಮನಿ, ವಿಜಯಲಕ್ಷ್ಮೀ ಮುರಂಕರ, ಅನುರಾಧಾ ಬೆಟಗೇರಿ, ಗೌರಿ ಜಾವೂರ, ಸುಮಾ ಯಲಿಗಾರ, ಶೀಲಾ ಕರೀಕಟ್ಟಿ, ಸಹನಾ ನಲವಡೆ, ಉಮಾ ಹಂಪಣ್ಣವರ, ಗೀತಾ ಜಿಡ್ಡಿಮನಿ, ಮುಕ್ತಾ ಪಶುಪತಿಮಠ, ಸುಜಾತಾ ಕೋರಿ, ಲಲಿತಾ ಕಾಮಶೆಟ್ಟಿ, ಪೂಜಾ ಗೋಪಶೆಟ್ಟಿ, ಸುಜಾತಾ ಪಾಟೀಲ, ವೈಷ್ಣವಿ ಶೆಟ್ಟರ, ಶೀತಲ ಗೋಮಾಡಿ, ಪ್ರಗು ಎಸ್.ಎಂ.ಜೋಶಿ, ಶಂಕರ ಹಾವೇರಿ, ಸುಧಾ ಶಾನಭೋಗ, ಶಿಕ್ಷಕರು ಸೇರಿದಂತೆ ಇನ್ನರ್‌ವ್ಹೀಲ್ ಕ್ಲಬ್‌ದ ಸದಸ್ಯೆಯರು ಇದ್ದರು. ಇದೇ ಸಂದರ್ಭದಲ್ಲಿ ಡಾ.ಗೌರಿ ವೆಂಕಟೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 