ಸಮಾಜ ಸೇವೆಗೆ ಅಭಿನಂದನಾ ಪತ್ರ ವಿತರಣೆ :ಅಬ್ದುಲಖಾದರ ಹಜರೇಸಾಬ
Distribution of congratulatory letters for social service: Abdulkhadar Hazaresaba
ಸಮಾಜ ಸೇವೆಗೆ ಅಭಿನಂದನಾ ಪತ್ರ ವಿತರಣೆ :ಅಬ್ದುಲಖಾದರ ಹಜರೇಸಾಬ
ಹಾವೇರಿ 19 :ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅನಾರೋಗ್ಯ ಪೀಡಿತ ವೃದ್ಧರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಸಂಪೂರ್ಣ ಗುಣಮುಖರಾಗುವವರೆಗೆ ಜೊತೆಯಲ್ಲಿಯೇ ಇದ್ದು ಚಿಕಿತ್ಸೆ ಕೊಡಿಸುವುದು ಹಾಗೂ ಇನ್ನಿತರ ಸಮಾಜ ಸೇವೆ ಮಾಡುವ ಅಬ್ದುಲಖಾದರ ಹಜರೇಸಾಬ ಧಾರವಾಡ ಅವರ ಸಮಾಜ ಸೇವೆಗೆ ಅಭಿನಂದನಾ ಪತ್ರವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ನೀಡಿ ಗೌರವಿಸಿದರು.
ಸಮಾಜ ಸೇವಕ ಅಬ್ದುಲಖಾದರ ಧಾರವಾಡ ಅವರು ನಗರದಲ್ಲಿ ವೆಲ್ಡಿಂಗ್ ವರ್ಕಶಾಫ್ ಕೆಲಸ ನಿರ್ವಹಿಸಿಕೊಂಡು ಜೀವನ ಸಾಗಿಸುತ್ತಾ ಕಳೆದ 10 ವರ್ಷಗಳಿಂದ ರಸ್ತೆ ಅಪಘಾತದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವುದು,ಕೋವಿಡ ಸಮಯದಲ್ಲಿ ಅನಾಥ ಶವಗಳನ್ನು ಅವರವರ ಧರ್ಮದ ಪ್ರಕಾರವೇ ಅಂತ್ಯಸಂಸ್ಕಾರ ನೆರವೇರಿಸಿರುವುದು.ಈ ರೀತಿ ರೋಗಿಗಳ ನೆರವಿಗೆ ನಿಂತು ಅನಾಥ ಶವಗಳಿಗೆ ಮುಕ್ತಿ ಕೊಡುವಂತಹ ಅತ್ಯುತ್ತಮ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವುದು ತುಂಬಾ ಸಂತೋಷಕರ ವಿಷಯ. ಈ ರೀತಿಯ ನಿಮ್ಮ ಸಮಾಜ ಸೇವೆಯು ಅಭಿನಂದನಾರ್ಹವಾಗಿದೆ.ಇನ್ನು ಮುಂದೆಯು ಸಹ ಹೆಚ್ಚು ಇಂತಹ ಸಮಾಜ ಸೇವೆಯ ಸತ್ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ಉತ್ತಮ ಮಾದರಿಯ ವ್ಯಕ್ತಿಯಾಗಿ ಬೆಳೆಯಿರೆಂದು ಆಶಿಸಿ ಅವರ ಸಮಾಜ ಸೇವೆಗೆ ಮೆಚ್ಚುಗೆಯನ್ನು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.ನನಗೆ ನೀಡಿರುವ ಜಿಲ್ಲಾಧಿಕಾರಿಗಳ ಅಭಿನಂದನಾ ಪತ್ರ ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೋತ್ಸಾಹಿಸಿದೆ ಜಿಲ್ಲಾಧಿಕಾರಿಗಳಿಗೆ ಧನ್ಯವಾದಗಳನ್ನು ಅಬ್ದುಲಖಾದರ ಧಾರವಾಡ ಅವರು ಸಲ್ಲಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 