ಬೆಂಗಳೂರು, ಏ 12,ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್ ಡೌನ್ ಜಾರಿಗೊಳಿಸಲು ಮುಂಚೂಣಿಯಲ್ಲಿ ಸೈನಿಕರಂತೆ ನಿಂತಿರುವ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ರೈನ್ ಬೋ ಮಕ್ಕಳ ಆಸ್ಪತ್ರೆಯಿಂದ ಮಾಸ್ಕ್ ಗಳನ್ನು ವಿತರಿಸಲಾಯಿತು. ತಮ್ಮ ಜೀವನವನ್ನೇ ಪಣಕ್ಕಿಟ್ಟು ಸಾರ್ವಜನಿಕರ ಕಾಳಜಿಗಾಗಿ ಗಲ್ಲಿ, ಗಲ್ಲಿಗಳಲ್ಲಿ ರಸ್ತೆಗಳಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಈ ಸಮಯದಲ್ಲಿ ಪೊಲೀಸರ ಆರೋಗ್ಯದ ಕಾಳಜಿವಹಿಸುವ ಉದ್ದೇಶದಿಂದ ರೈನ್ ಬೋ ಮಕ್ಕಳ ಆಸ್ಪತ್ರೆ ಕರ್ತವ್ಯ ನಿರತ ಪೊಲೀಸರಿಗೆ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸುತ್ತಿದೆ. ರೈನ್ ಬೋ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಬೆಂಗಳೂರು ವಿಭಾಗದ ಮುಖ್ಯಸ್ಥ ನೀರಜ್ ಲಾಲ್, "ಸಾವಿರಾರು ಪೊಲೀಸರು ಬಿಸಿಲು, ಮಳೆ ಎನ್ನದೆ ಜನರ ರಕ್ಷಣೆಗೆ ತಮ್ಮ ಆರೋಗ್ಯ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನಾವು ಅವರಿಗೆ ಉಚಿತವಾಗಿ ಮಾಸ್ಕ್ ಗಳನ್ನ ನೀಡಲು ನಿರ್ಧರಿಸಿದ್ದೇವೆ. ಹಾಗೆಯೇ ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೊರೊನಾ ವಾರಿಯರ್ಸ್ ಗಳಿಗೂ ಮಾಸ್ಕ್ ಗಳನ್ನ ನೀಡುತ್ತೇವೆ ಎಂದರು. ಆಸ್ಪತ್ರೆಯ ಕಾಳಜಿಯನ್ನು ಶ್ಲಾಘಿಸಿದ ಪೊಲೀಸರು, ರೈನ್ ಬೋ ಮಕ್ಕಳ ಆಸ್ಪತ್ರೆ ನಮ್ಮ ಕಾಳಜಿಗಾಗಿ ಈ ರೀತಿಯ ಕಾರ್ಯವನ್ನ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.