ಜುಗೂಳ, ಅಫಘಾತ ವಿಮೆ ಚಕ್ ವಿತರಣೆ
Distribution of Jugoola, Accident Insurance Check
ಕಾಗವಾಡ, 12 ; ಸಹಕಾರ ಸಂಘಗಳಲ್ಲಿ ಯಾರು ಸದಸ್ಯತ್ವವನ್ನು ಪಡೆದಿರುತ್ತಾರೋ ಅಂಥವರು ಆಕಸ್ಮಿಕವಾಗಿ ಅಥವಾ ಅಫಘಾತದಲ್ಲಿ ಸಾವನ್ನಪ್ಪಿದರೆ ಆ ಕುಟುಂಬದ ವಾರಸುದಾರರಿಗೆ ಮರನೋತ್ತರ 1 ಲಕ್ಷ ರೂ. ಅಫಘಾತ ವಿಮೆ ಯೋಜನೆಯಡಿಯಲ್ಲಿ ನಿಧಿ ನೀಡಲಾಗುತ್ತಿದೆ ಎಂದು ವಿವಿದ್ದೋದ್ಧೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅಣ್ಣಾಸಾಬ ಪಾಟೀಲ ತಿಳಿಸಿದ್ದಾರೆ.
ಅವರು, ಶುಕ್ರವಾರ ದಿ. 11ರಂದು ತಾಲೂಕಿನ ಜುಗೂಳ ಗ್ರಾಮದ ವಿವಿದ್ದೋದ್ಧೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಬೆಳೆ ಸಾಲಗಾರಾದ ರಾವಸಾಬ ಅಣ್ಣಪ್ಪಾ ಅಂಬಿ ಇವರು ಇತ್ತಿಚಿಗೆ ರಸ್ತೆ ಅಫಘಾತದಲ್ಲಿ ನಿಧನರಾಗಿದ್ದು, ಅಫಘಾತ ವಿಮೆ ಯೋಜನೆಯಡಿ ಮಂಜೂರಾದ 1 ಲಕ್ಷ ರೂ. ಪರಿಹಾರದ ಚೆಕ್‌ನ್ನು ಮೃತನ ಪತ್ನಿ ಮಹಾದೇವಿ ರಾವಸಾಬ ಅಂಬಿ ಇವರಿಗೆ ವಿತರಿಸಿ, ಮಾತನಾಡುತ್ತಿದ್ದರು. ಸಹಕಾರ ತತ್ವದ ಆಧಾರದ ಮೇಲೆ ರಚನೆಗೊಂಡ ಈ ಸಂಘವು ಯಾವತ್ತು ರೈತರ ಹಾಗೂ ಶೇರುದಾರ ಸದಸ್ಯರ ಪರವಾಗಿ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಅಫಘಾತದಲ್ಲಿ ಸಾವನ್ನಪ್ಪಿದರೇ ಅವರ ವಾರಸುದಾರರಿಗೆ ವಿಮಾ ಯೋಜನೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಉಪಾಧ್ಯಕ್ಷ ಶಿವಗೌಡ ಪಾಟೀಲ, ನಿರ್ದೇಶಕರಾದ ಸುರೇಶ ಪಾಟೀಲ, ಬಾಬಗೌಡ ಪಾಟೀಲ, ಚಿದಾನಂದ ಮಿನಚೆ, ಮಚ್ಚೇಂದ್ರ ಗಸ್ತೆ, ಮಹಮ್ಮದ ರಫೀಕ ಮುಜಾವರ, ಸಚೀನ ಯಮಕನಮರಡಿ, ಆದಿನಾಥ ಮಗದುಮ್ಮ, ದೀಪಕ ಪಾಟೀಲ, ಈರಗೌಡ ಪಾಟೀಲ, ಮುಖ್ಯಕಾರ್ಯನಿರ್ವಾಹಕ ರಾಜಕುಮಾರ ಹುನ್ನರಗೆ ಸೇರಿದಂತೆ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 