ಜನ್ಮದಿನದ ಪ್ರಯುಕ್ತ ಹೆಲ್ಮೆಟ್ ನೀಡುತ್ತಿರುವದು ಜನೋಪಯೋಗಿ ಕಾರ್ಯ : ಶಾಸಕ ಪಾಟೀಲ

ಜನ್ಮದಿನದ ಪ್ರಯುಕ್ತ ಹೆಲ್ಮೆಟ್ ನೀಡುತ್ತಿರುವದು ಜನೋಪಯೋಗಿ ಕಾರ್ಯ  : ಶಾಸಕ ಪಾಟೀಲ Distributing helmets on the occasion of the birthday is a public-spirited initiative: MLA Patil


ನೇಸರಗಿ 21 : ನನ್ನ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು, ಕಾರ್ಯಕರ್ತರು ಜೀವ ಉಳಿಸುವ ಹೆಲ್ಮೆಟ್ ನೀಡಿಕೆ , ಗಿಡ ಮರ ಕೊಡುವ ಸಸಿ ನೆಡುವ, ಶಿಕ್ಷಣ ಒತ್ತು ಕೊಡಲು ನೋಟ ಬುಕ್, ಪೆನ್ನು, ಕಂಪಾಸ ವಿತರಣೆ, ಜೀವ ಉಳಿಸುವ ರಕ್ತ ದಾನ ಶಿಬಿರಗಳನ್ನು ನಮ್ಮ ಅಭಿಮಾನಿಗಳು, ಕಾರ್ಯಕರ್ತರು  ಆಯೋಜನೆ ಮಾಡಿದ್ದು ನನಗೆ ಖುಷಿ ತಂದಿದ್ದು, ಇವೆಲ್ಲ ಜನೋಪಯೋಗಿ ಕೆಲಸಗಳು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಮಂಗಳವಾರದಂದು ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಅಭಿಮಾನಿಗಳು ಆಯೋಜನೆ ಮಾಡಿದ್ದ ಹೆಲ್ಮೆಟ್ ವಿತರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಣೆ ಮಾಡಿ ಮಾತನಾಡಿದರು.    

ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ಗ್ಯಾರಂಟಿ ಯೋಜನೆಗಳ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಗ್ರಾ ಪಂ ಅಧ್ಯಕ್ಷ ಕಾಶೀಮ ಜಮಾದಾರ, ಬಾಬು ಹೊಸಮನಿ, ಮಂಜುನಾಥ ಹೊಸಮನಿ, ಯಲ್ಲಪ್ಪ ಶಿಗ್ಗಾವಿ, ಕಿಶೋರ ಪಡಸನ್ನವರ, ಅಜ್ಜಪ್ಪ ಸತ್ತೇನ್ನವರ, ಅನ್ವರ ಮನಿಯಾರ, ಬಾಬು ಭಗವಾನ, ಸೋಮನಿಂಗ ಮದನಬಾವಿ, ಬಾಳೇಶ ಪೂಜೇರಿ, ರಾಜು ಹಣ್ಣಿಕೇರಿ, ಸಂತೋಷ ಉಳವಿ ಸೇರಿದಂತೆ ಗ್ರಾಮದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.