ಜ್ಞಾನಕ್ಕೆ ತೂಕ ಹಾಕಿದ ಶಿಷ್ಯರು: ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ಮಾಡಿದ ಹಳೆ ವಿದ್ಯಾರ್ಥಿಗಳು

ಜ್ಞಾನಕ್ಕೆ ತೂಕ ಹಾಕಿದ ಶಿಷ್ಯರು: ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ಮಾಡಿದ ಹಳೆ ವಿದ್ಯಾರ್ಥಿಗಳು  Disciples who weighed knowledge: Former students who weighed the Guru with scriptures

ಚಿಕ್ಕೋಡಿ 24 : ಜ್ಞಾನ ದಾಸೋಹ ನೀಡಿದ ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ನಡೆಸಿ ಹಳೆ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ ಅಪೂರ್ವ ಘಟನೆ ಪಟ್ಟಣದಲ್ಲಿ ಜರುಗಿತು. ಸಿಟಿಇ ಸಂಸ್ಥೆಯ ಆರ್ಡಿ ಕಾಲೇಜಿನ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ರಾಜ್ಯ ಮಟ್ಟದ ಚುನಾವಣಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದ ಎನ್‌.ವಿ. ಶಿರಗಾಂವಕರ ಅವರ ನಿವೃತ್ತಿ ಹಾಗೂ ಗುರುವಂದನೆ ಕಾರ್ಯಕ್ರಮ ಪದ್ಮಾ ಸಭಾಭವನದಲ್ಲಿ ಭಾವಪೂರ್ಣವಾಗಿ ನಡೆಯಿತು.ಸಾಮಾನ್ಯವಾಗಿ ಸ್ವಾಮೀಜಿಗಳಿಗೆ ನಡೆಯುವ ತುಲಾಭಾರ ಸಂಪ್ರದಾಯವನ್ನು ಇಲ್ಲಿ ಗುರುಗಳಿಗೆ ಅನ್ವಯಿಸಿ, ಅದೂ ಗ್ರಂಥಗಳ ಮೂಲಕ ನಡೆಸಿರುವುದು ವಿಶೇಷತೆ ಪಡೆದಿತು.  

ಶಿಷ್ಯರು ಪುಸ್ತಕಗಳನ್ನು ತಕ್ಕಡಿಯಲ್ಲಿ ಇಟ್ಟು “ಗ್ರಂಥ ತುಲಾಭಾರ” ನೆರವೇರಿಸಿ, “ಗುರುವಿನ ಮೌಲ್ಯ ಜ್ಞಾನದಲ್ಲೇ ಇದೆ” ಎಂಬ ಸಂದೇಶವನ್ನು ಪ್ರತಿಬಿಂಬಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಆಡಳಿತ ಸುಧಾರಣಾ ಕಾರ್ಯದರ್ಶಿ ರಮೇಶ್ ದೇಸಾಯಿ ಅವರು ಮಾತನಾಡಿ, “ಉಪನ್ಯಾಸಕ ವೃತ್ತಿಯ ಜೊತೆಗೆ ಚುನಾವಣಾ ಸಂಪನ್ಮೂಲ ವ್ಯಕ್ತಿಯಾಗಿ ಶಿರಗಾಂವಕರ ಅವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಅಚ್ಚುಕಟ್ಟಾಗಿ ಚುನಾವಣಾ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ ವ್ಯಕ್ತಿ” ಎಂದು ಪ್ರಶಂಸಿಸಿದರು.  

ಹುಬ್ಬಳ್ಳಿ ಕಿಮ್ಸ್‌ ಆಡಳಿತಾಧಿಕಾರಿ ರಮೇಶ್ ಕಳಸದ ಅವರು, “ರಾಜ್ಯ ಮಟ್ಟದಲ್ಲಿ ತರಬೇತಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ ಶಿರಗಾಂವಕರ ಅವರ ಸೇವೆ ಅನನ್ಯ” ಎಂದು ಹೇಳಿದರು. ಸಿಟಿಇ ಸಂಸ್ಥೆಯ ಉಪಾಧ್ಯಕ್ಷ ವಿಜಯ ಮಾಂಜ್ರೆಕರ, ಕನೇರಿ ಸಿದ್ಧಗಂಗಾ ಆಸ್ಪತ್ರೆಯ ನರೋ ಸರ್ಜನ್ ಡಾ. ಶಿವಕುಮಾರ ಮರಜಿಕೆ, ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಮಗದುಮ್ಮ, ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಸೇರಿದಂತೆ ಅನೇಕ ಗಣ್ಯರು ಮಾತನಾಡಿ ಗೌರವ ಸಲ್ಲಿಸಿದರು.ಸತ್ಕಾರ ಸ್ವೀಕರಿಸಿ ಮಾತನಾಡಿದ ಶಿರಗಾಂವಕರ ಅವರು, “ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಧಾನ ಮಾಡಿರುವುದು ನನ್ನ ಜೀವನದ ದೊಡ್ಡ ಸಾಧನೆ.

ಚುನಾವಣಾ ಆಯೋಗದ ತರಬೇತಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ತೃಪ್ತಿ ಇದೆ. 38 ವರ್ಷಗಳ ಸೇವಾ ಅವಧಿಯಲ್ಲಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾನು ಋಣಿ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೆ ಸಂಪಾದನ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಅಬಕಾರಿ ಎಸ್ ಪಿ ವಿಜಯಕುಮಾರ ಹಿರೇಮಠ.ತಹಶೀಲ್ದಾರ್ ರಾಜೇಶ್ ಬುರ್ಲಿ, ನಗರಾಭಿವೃದ್ಧಿ ಆಯುಕ್ತ  ರಾಜಶೇಖರ ಡಂಬಳ, ಸಿಪಿಐ ಶಶಿಕಾಂತ ವರ್ಮಾ. ಕರಗಾಂವದ ರಾಜು ಪಾಟೀಲ ತಹಶಿಲ್ದಾರ ರಾಜೇಶ ಬುರ್ಲಿ. ಬಾಹುಬಲಿ ನಸಲಾಪೂರೆ.   ಗಣ್ಯರಾದ ಶಿವಮೂರ್ತಿ ಪಡಲಾಳೆ. ಸಂಕೇತ ಮಾಂಜ್ರೇಕರ. ಪಿ.ಬಿ.ಹಿರೇಮಠ. ವಿಶ್ವನಾಥ ಕಾಮಗೌಡ. ನಾಗೇಶ ಕಿವಡ. ಪಿ.ಐ.ಕೋರೆ. ಆನಂದ ಕೋಳಿ. ಪಿ.ಐ.ಭಂಡಾರಿ.ಸಾಗರ ಬಿಸ್ಕೋಪ. ಎ.ಬಿ.ಸೊಲ್ಲಾಪೂರೆ. ಪಿಂಟು ಮೆಳವಂಕಿ. ಶಿವಾನಂದ ಶಿರಗಾಂವೆ. ಬಿ.ಎ.ಪೂಜಾರಿ. ಆನಂದ ಆರ್ವಾರೆಮುಂತಾದವರು ಇದ್ದರು. ವಿಜಯಬಾಸ್ಕರ್ ಇಟಗೋನಿ ಸ್ವಾಗತಿಸಿದರು, ಉಪನ್ಯಾಸಕ ರಾಘವೇಂದ್ರ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.