ಲೋಕದರ್ಶನ ವರದಿ
ಹುಕ್ಕೇರಿ 31: ಆತ್ಮವಿಶ್ವಾಸದ ಕೊರತೆಯಿಂದ ಬಹಳಷ್ಟು ವಿಕಲಚೇತನರಿಗೆ ಅಂದುಕೊಂಡದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಅನುಕಂಪಕ್ಕಿಂತ ಅವಕಾಶಗಳನ್ನು ಒದಗಿಸಿಕೋಟ್ಟು ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ ಎಂದು ಸಮಾಕಕಾರ್ಯ ಪದವಿ ಮಹಾವಿದ್ಯಾಲಯದ ಪ್ರಾಚಾಯರ್ೆ ಸುರೇಖಾ ಪಾಟೀಲ ಅಭಿಪ್ರಾಯಪಟ್ಟರು.
ಬೆಂಗಳೂರಿನ ದಿ ಅಸೋಸಿಯೇಷನ ಆಪ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ, ಇವರ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂದಲ್ಲಿ ವಿಕಲಚೇತರಿಗೆ ಉದ್ಯೋಗ ದೊರಕಿಸಿಕೊಡುವದಕ್ಕಾಗಿ ಆಯೋಜಿಸಿದ್ದ ಒಂದು ತಿಂಗಳ ಜೀವನ ಕೌಶಲತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇನ್ನೊರ್ವ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಪ್ರಕಾಶ ಹೊಸಮನಿ ಮಾತನಾಡಿ ಆಥರ್ಿಕ ಪ್ರಗತಿ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿಸಬಲ್ಲದು, ವಿಕಲಚೇತನರಲ್ಲಿಯೂ ವಿಶಿಷ್ಟ ಪ್ರತಿಭೆ ಹಾಗೂ ಸಾಮಥ್ರ್ಯಗಳಿವೆ ಅವುಗಳನ್ನು ಗುರುತಿಸಿ ಪ್ರೊತ್ಸಾಹಿಸುವ ಅಗತ್ಯತೆ ಇದೆ ಎಂದರು. ಯರಗಟ್ಟಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕಿರಣ ಚೌಗಲಾ ಮಾತನಾಡಿ ವಿಕಲಚೇತನ ಮಗುವಿನ ಲಾಲನೆ ಪಾಲನೆ ಪಾಲಕರಿಗೆ ಹೊರೆಯಾಗುವದಿಲ್ಲ ಆದರೆ ಮುಂದಿನ ದಿನಗಳಲ್ಲಿ ಎಲ್ಲರೂ ಸ್ವಾವಲಂಬಿಗಳಾಗಿ ಅವರ ಬದುಕಿನ ದಾರಿಯನ್ನು ಕಂಡುಕೋಳ್ಳುವ ಅನಿವಾರ್ಯತೆ ಇದೆ, ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಂಡು ಮುನ್ನಡೆಯಬೇಕೆಂದರು.
ಸಂಯೋಜಕರಾದ ಬಾಬು ಹೊನೋಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ತರಬೇತಿದಾರರಾದ ಕುಮಾರಿ ಚೈತ್ರಾ,ಲಕ್ಷ್ಮಣ ಥರಕಾರ ಉಪಸ್ಥಿತರಿದ್ದರು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.