ಉತ್ತಮ ವೃತ್ತಿ ಅವಕಾಶ ಪಡೆಯಲು ಡಿಜಿಟಲ್ ವೇದಿಕೆ ಅತ್ಯಗತ್ಯ: ಸುಹಾಸ್ ರಾಜ್ಪೂತ್
Digital platform is essential to get better career opportunities: Suhas Rajput
ಉತ್ತಮ ವೃತ್ತಿ ಅವಕಾಶ ಪಡೆಯಲು ಡಿಜಿಟಲ್ ವೇದಿಕೆ ಅತ್ಯಗತ್ಯ: ಸುಹಾಸ್ ರಾಜ್ಪೂತ್
ಬೆಳಗಾವಿ 05: ಕೆಎಲ್‌ಇ ಫಾರ್ಮಸಿ ಕಾಲೇಜು, ಬೆಳಗಾವಿಯ ವೃತ್ತಿ ಮತ್ತು ನೇಮಕಾತಿ ಘಟಕವು “ದಿ ಅಲ್ಟಿಮೇಟ್ ಕರಿಯರ್ ಟೂಲ್ಕಿಟ್: ಮಾಸ್ಟರ್ ಯುವರ್ ಲಿಂಕ್ಡ್‌ಇನ್, ರೆಸ್ಯೂಮ್ ಬಿಲ್ಡಿಂಗ್ ಮತ್ತು ಸಂದರ್ಶನ ಕೌಶಲ್ಯಗಳು” ಎಂಬ ಕಾರ್ಯಾಗಾರವನ್ನು ಗುರುವಾರ, 04 ಸೆಪ್ಟೆಂಬರ್ 2025 ರಂದು ಆಯೋಜಿಸಿತು. ಕಾರ್ಯಕ್ರಮವನ್ನು ಪ್ರೊಫಿಷಿಯಂಟ್ ಮೈಂಡ್ಸ್, ಬೆಳಗಾವಿ ಸಂಸ್ಥೆಯ ವೃತ್ತಿ ಮತ್ತು ನೇಮಕಾತಿ ತರಬೇತುದಾರರಾದ ಸುಹಾಸ್ ರಾಜ್ಪೂತ್ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿ ಸುಹಾಸ್ ರಾಜ್ಪೂತ್ ಅವರು ವಿದ್ಯಾರ್ಥಿಗಳು ಲಿಂಕ್ಡ್‌ಇನ್ ಮೂಲಕ ಜಾಗತಿಕ ಉದ್ಯೋಗಾವಕಾಶಗಳನ್ನು ಪರಿಣಾಮಕಾರಿಯಾಗಿ ಹೇಗೆ ಅನ್ವೇಷಿಸಬಹುದು ಎಂಬುದನ್ನು ಒತ್ತಿಹೇಳಿದರು. ಅವರು ಈ ವೇದಿಕೆಯ ವೃತ್ತಿಪರ ನೆಟ್ವರ್ಕಿಂಗ್ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ತಮ್ಮ ಪ್ರೊಫೈಲ್ಗಳನ್ನು ಸುಧಾರಿಸಲು ಮಾರ್ಗದರ್ಶನ ನೀಡಿದರು. ಭಾಗವಹಿಸಿದ ವಿದ್ಯಾರ್ಥಿಗಳು ಲಿಂಕ್ಡ್‌ಇನ್ ಖಾತೆಗಳನ್ನು ರಚಿಸುವುದು, ವೃತ್ತಿಪರ ಮಾಹಿತಿಯನ್ನು ಪೂರ್ಣಗೊಳಿಸುವುದು ಹಾಗೂ ಉದ್ಯೋಗಾವಕಾಶಗಳನ್ನು ಹುಡುಕುವಂತಹ ಪ್ರಾಯೋಗಿಕವಾಗಿ ಅಭ್ಯಾಸಗಳಲ್ಲಿ ಭಾಗವಹಿಸಿದರು.
ಪ್ರೊ. (ಡಾ.) ಸುನಿಲ್ ಎಸ್. ಜಲಾಲಪುರೆ, ಅವರು ನೇಮಕಾತಿ ಚಟುವಟಿಕೆಗಳ ಮಹತ್ವವನ್ನು ಮತ್ತು ಉತ್ತಮ ವೃತ್ತಿ ಅವಕಾಶಗಳನ್ನು ಪಡೆಯಲು ಡಿಜಿಟಲ್ ವೇದಿಕೆಗಳ ಬಳಕೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಮಹೇಶ್ ಲಟ್ಟೆ, ಸಹಾಯಕ ಪ್ರಾಧ್ಯಾಪಕರು, ಕೆಎಲ್‌ಇಸಿಇಟಿ, ಚಿಕ್ಕೋಡಿ, ಅವರು ರೆಸ್ಯೂಮ್ ತಯಾರಿಕೆ ಹಾಗೂ ಸಂದರ್ಶನ ಕೌಶಲ್ಯಗಳ ಮಹತ್ವವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವಿ. ಎಸ್. ಮಸ್ತಿಹೋಳಿಮಠ, ಡೀನ್, ಡಾ. ಎಂ. ಬಿ. ಪಾಟೀಲ, ಉಪಪ್ರಾಚಾರ್ಯರು ಹಾಗೂ ಕಾಲೇಜಿನ ಅಧ್ಯಾಪಕರೂ ಹಾಜರಿದ್ದರು.
ಕಾರ್ಯಾಗಾರದಲ್ಲಿ ಸುಮಾರು 65 ಮಂದಿ ಎಂ.ಫಾರ್ಮ, ಫಾರ್ಮ.ಡಿ ಮತ್ತು ಪಿಎಚ್ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ನಿಖಿಲ್ ಗವಾಸ್ ಧನ್ಯವಾದಗಳನ್ನು ಅರ್ಿಸಿದರು. ನಿಶಾ ಶಿರ್ಕೋಳಿ ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಾಗಾರದ ಸಂಕ್ಷಿಪ್ತ ಪರಿಚಯ ನೀಡಿದರು. ರವಿಕಿರಣ ಕಣಬರ್ಗಿ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 