ದವನದ ಹುಣ್ಣಿಮೆಯಂದು ದಿಗಂಬರೇಶ್ವರ ರಥೋತ್ಸವ
Digambareshwara Chariot Festival on the full moon day of Davan
ಕೊಲ್ಹಾರ 03 : ಪ್ರತಿ ವರ್ಷ ದವನದ ಹುಣ್ಣಿಮೆಯಿಂದ ಐದು ದಿನಗಳವರೆಗೆ ನಡೆಯುವ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರೆ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿರುವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರ್ಷೋದ್ಘಾರಗಳ ಮಧ್ಯೆ ಗುರುವಾರ ವಿಜೃಂಭಣೆಯಿಂದ ರಥೋತ್ಸವ ತಡರಾತ್ರಿ ಜರುಗಿತು. ಮಠಕ್ಕೆ ಬೆಳಿಗ್ಗೆ ಯಿಂದಲೆ ಭಕ್ತರು ತಮ್ಮ ಇಷ್ಟಾರ್ಥ ಹರಕೆಯನ್ನು ತೀರಿಸಲು ಧೀರ್ಘ ದಂಡ ಪ್ರಣಾಮ ಸೇವೆಯನ್ನು ಸಲ್ಲಿಸಿದರು. ನಂತರ ಮಠದ ರಥದ ಕಳಸಾರೋಹಣ ನಡೆದ ಬಳಿಕ ಸಾಯಂಕಾಲ ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ ಭಕ್ತರು ತಂದ ತೇರಿನ ಹಗ್ಗದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿದ ಬಳಿಕ ಮಠದ ಪರಮ ಪೂಜ್ಯ ಶ್ರೀ ಕಲ್ಲಿನಾಥ ಸ್ವಾಮೀಜಿ ಮೂರ್ತಿಯೊಂದಿಗೆ ರಥದಲ್ಲಿ ಕುಳಿತುಕೊಂಡ ಬಳಿಕ ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯಲಾಯಿತು ಭಕ್ತರು ರಥೋತ್ಸವಕ್ಕೆ ಉತ್ತತ್ತಿ ಹಾಗೂ ಬಾಳೆ ಹಣ್ಣುಗಳನ್ನು ಹಾರಿಸುವ ಮೂಲಕ ತಮ್ಮ ಭಕ್ತಿ ಸೇವೆಯನ್ನು ಸಲ್ಲಿಸಿದರು ರಥೋತ್ಸವ ವೇಳೆಯಲ್ಲಿ ಕೊಲ್ಹಾರ ಠಾಣೆಯ ಪಿಎಸ್‌ಐ ಅಶೋಕ ನಾಯಕ ಸೂಕ್ತ ಪೋಲಿಸ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಮಠಾಧೀಶರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಲು ದೇಸಾಯಿ, ಬಿಜೆಪಿ ಯುವ ಮುಖಂಡ ವೀನೀತಕುಮಾರ ದೇಸಾಯಿ, ರಫೀಕ್ ಪಕಾಲಿ, ಹಣಮಂತ ಬೆಳ್ಳುಬ್ಬಿ, ಶ್ರೀಶೈಲ ಪತಂಗಿ , ಟಿ.ಟಿ.ಹಗೇದಾಳ, ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ದುರೀಣರು, ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 