ಭೌತಶಾಸ್ತ್ರದಲ್ಲಿ ತಂತ್ರಜ್ಞಾನದ ವಿಭಿನ್ನ ರೀತಿ ಬಳಕೆ: ಡಾ. ಸುಧೀಂದ್ರ ಕುಲಕರ್ಣಿ
Different uses of technology in physics: Dr. Sudheendra Kulkarni
ಬೆಳಗಾವಿ 30: ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ.30ರಂದು ಭೌತಶಾಸ್ತ್ರ ವಿಷಯದ ಕುರಿತು ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ(ಎಫ್.ಡಿ.ಪಿ)ವನ್ನು ಬೇಸಿಕ್ ಸೈನ್ಸ್ ಮತ್ತು ಹ್ಯೂಮ್ಯಾನಿಟಿಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಅತಿಥಿಗಳಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಡಾ. ಸುಧೀಂದ್ರ ಕುಲಕರ್ಣಿ ಹಿ ಬಿಒಎಸ್ ಮೆಂಬರ್, ವಿಟಿಯು ಬೆಳಗಾವಿ ಹಾಗೂ ಡಾ. ವಿಜಯ ಕುಲಕರ್ಣಿ ಎ.ಆಯ್.ಟಿ.ಎಮ್ ಬೆಳಗಾವಿ ಇವರು ಹೊಸ ಪಠ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿದರು. 5 ವಿಭಿನ್ನ ಸಿ.ಎಸ್, ಇ.ಸಿ, ಇ.ಇ, ಸಿವಿಲ್ ಮತ್ತು ಮೆಕ್ಯಾನಿಕಲ್ ನಂತಹ ಸ್ಟ್ರೀಮ್ ಪಠ್ಯಕ್ರಮಗಳನ್ನು ರೂಪಿಸಲಾಗಿದ್ದು ಪ್ರತಿಯೊಂದು ಸ್ಟ್ರೀಮ್ ಪಠ್ಯಕ್ರಮವು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸೆನ್ಸರ್ಗಳಂತಹ ಮುಂದುವರೆದ ವಿಷಯಗಳನ್ನು ಒಳಗೊಂಡಿದೆ ಮತ್ತು ಭೌತಶಾಸ್ತ್ರವು ಸಮೀಕರಣವಲ್ಲ, ಅದು ಪ್ರಕೃತಿಯ ಭಾಷೆಯಾಗಿದೆ ಎಂದು ಹೇಳಿದರು.
ಶಿಕ್ಷಕರಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಮಕಾಲಿನ ಪ್ರಗತಿಗೆ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕಾದ ಜವಾಬ್ದಾರಿಗಳಾಗಿವೆ.
ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್‌ಮನ್ ಎಫ್.ವಿ.ಮಾನ್ವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಸ್ವಾಗತ ನುಡಿಗಳನ್ನಾಡಿದ ಅವರು ಎಫ್.ಡಿ.ಪಿ ಎಂಬುದು ಶಿಕ್ಷಕರ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಇದಾಗಿದ್ದು ಹೊಸ ಪಠ್ಯಕ್ರಮ ವಿಭಿನ್ನವಾಗಿದ್ದು ಅದರ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದ ವ್ಯವಸ್ಥಾಪಕ ಡಾ. ಅಶೋಕ ಹುಲಗಬಳಿ, ಬೇಸಿಕ್ ಸೈನ್ಸ್ ಮತ್ತು ಹ್ಯೂಮ್ಯಾನಿಟಿಸ್ ವಿಭಾಗದ ಮುಖ್ಯಸ್ಥರು ಹಾಗೂ ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರು ಹಾಜರಿದ್ದರು. ಸಂಯೋಜಕ ಡಾ. ಶೈಲಜಾ ಮಾಳಿ ಹಾಗೂ ಅವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 