ರೋಗಗಳಿಗೆ ಆಹಾರ ಪದ್ಧತಿಯೆ ಬಹುಮುಖ್ಯ ಕಾರಣ: ಗಿರೀಶ

ಬ್ಯಾಡಗಿ: ಇಂದಿನ ಹಲವಾರು ರೋಗಗಳಿಗೆ ಆಹಾರ ಪದ್ಧತಿಯೆ ಬಹು ಮುಖ್ಯಕಾರಣವಾಗಿದ್ದು ದೀರ್ಘಕಾಲದ ರೋಗ ಗಳಿಗೆ ದಾರಿ ಮಾಡಿಕೊಡುತ್ತಿದೆ. ಆಯುವರ್ೇದಲ್ಲಿ ಎಲ್ಲ ರೀತಿಯ ರೋಗಗಳಿಗೆ ಪರಿಹಾರವಿದ್ದು ಆದರೆ ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಇಲ್ಲದಿರುವುದು ಖೇದದ ಸಂಗತಿ ಎಂದು ಆಯುವರ್ೇದ ವೈದ್ಯ ಗಿರೀಶ ಕುಲಕಣರ್ಿ ಹೇಳಿದರು.

 ಸಾರ್ವಜನಿಕರ ಸೇವೆಗೆ ಪಟ್ಟಣದಲ್ಲಿ ಪಂತಂಜಲಿ ಆರೋಗ್ಯಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೋಗ ಬಂದ ಮೇಲೆ ಚಿಕಿತ್ಸೆ ಪಡೆದುಕೊಳ್ಳುವ ಬದಲು ಪುರಾತನ ಆಯುವರ್ೇದ ಮಾಹಿತಿಯಂತೆ ಉತ್ತಮ ಜೀವನ ಶೈಲಿಯಿಂದ ಮತ್ತು ಪೋಷಕಾಂಶದ ಆಹಾರ ಸೇವನೆಯಿಂದ ರೋಗಗಳನ್ನು ದೂರವಿಡಬಹುದಾಗಿದೆ ಎಂದರು.

     ಆಯುವರ್ೇದ ಮಹತ್ವ ಅರಿಯಿರಿ: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಹದಗೆಟ್ಟಿದ್ದು ಜಂಕ್ ಫುಡ್ ಸೇವನೆಯಿಂದಾಗಿ ದೇಹ ರೋಗಗಳ ಬೀಡಾಗುತ್ತಿದೆ.

  ಇದರಿಂದಾಗಿ ಜನರು ಎಲ್ಲದಕ್ಕೂ ವೈದ್ಯರನ್ನು ಅವಲಂಭಿಸುವ ಮತ್ತು ಔಷಧಿಗಳಿಗೆ ಮೋ ರೆ ಹೋಗುತ್ತಿದ್ದಾರೆ ಈ ಮಾತ್ರೆಗಳಿಂದ ಮನುಷ್ಯನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಮತ್ತೊಂದು ರೋಗ ಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದರು.

ಆಯುವರ್ೇದ ಭಾರತದ ಹೆಮ್ಮೆ: ದಿವಾಕರ ಮೂತರ್ಿಮಾತನಾಡಿ, ಭಾರತದ ಆಯುವರ್ೇದ ಜಗತ್ತಿನ ಗಮನ ಸೆಳೆಯುತ್ತಿದ್ದು ತನ್ಮೂಲಕಎಲ್ಲ ರೋಗಳಿಗೆ ರಾಮಬಾಣವಾಗಿ ಪರಿಣಾಮ ಬೀರುತ್ತಿದೆ. 

 ಈದೇ ನಿಟ್ಟಿನಲ್ಲಿ ಜನರರು ಕೂಡಾ ವಿದೇಶಿ ವಸ್ತುಗಳ ಮೋರೆ ಹೋಗದೆ ಸ್ವದೇಶಿ ಬಳಕೆಗೆ ಒತ್ತು ನೀಡುತ್ತಿರುವುದು ಸಂತಸದ ವಿಷಯ ಪೌಷ್ಟಿಕಾಂಶಯುಳ್ಳ ಆಹಾರ, ವ್ಯಾಯಾಮ, ಯೋಗ, ಉತ್ತಮ ಆರೋಗ್ಯದ ತಳಹದಿಯಾಗಿವೆ ಎಂದರು.

ಗುರುನಾಥ ಅಂಕಲಗಿ  ಮಾತನಾಡಿ ದೀರ್ಘಕಾಲದ ರೋಗಗಳನ್ನು ಆಯುವರ್ೇದ ಔಷಧಿಗಳ ಮೂಲಕ ಗುಣಪಡಿಸಬಹುದಾಗಿದ್ದು ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಪತಂಜಲಿ ಆರೋಗ್ಯಕೇಂದ್ರದಲ್ಲಿ ಸಂಜೆ 7 ರಿಂದ 9 ಗಂಟೆ ವರೆಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ ಇದರ ಸದುಪಯೋಗವನ್ನು ತಾಲೂಕಿನ ಎಲ್ಲ ಗ್ರಾಮದ ಜನರು ಪಡೆದುಕೊಳ್ಳುವಂತೆ ಕರೆ ನೀಡಿದರು.ಈ ಸಂದರ್ಬದಲ್ಲಿ ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನನವರ, ಪವಿತ್ರಾ ಸೋರಟಿ, ಮಂಜುನಾಥ ಎಚ್.ಎ.ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.