ರಚಿತಾ ರಾಮ್ ಅವರನ್ನು ಸೂಪರ್ ಕುಕ್ ಮಾಡಿದ್ಯಾರು?

ಬೆಂಗಳೂರು, ನ 14 :     ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರಿಗೆ ಅಡುಗೆ ಮಾಡುವಷ್ಟು ಪುರುಸೊತ್ತಿದೆಯೇ?  ಭಾನುವಾರವೂ ರಿಯಾಲಿಟಿ ಶೋ ಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋ ನಟಿ ಅಡುಗೆ ಮಾಡ್ತಾರಾ?  ಆದರೆ ನಿಜವಾಗ್ಲೂ ಅವರ ಕೈಲಿ ಅಡುಗೆ ಮಾಡಿಸಲಾಗಿದೆಯಂತೆ! 

ಇಷ್ಟಕ್ಕೂ ರಚಿತಾರಿಂದ ಅಡುಗೆ ಮಾಡಿಸಿದ್ದು ಯಾರು ಗೊತ್ತಾ . . . ನಟ ರಮೇಶ್ ಅರವಿಂದ್  ಸೈಬರ್ ಕ್ರೈಮ್ ಆಧಾರಿತ '100'  ಚಿತ್ರದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವೆ   ಈ ಚಿತ್ರದಲ್ಲಿ ನಿರ್ದೇಶಕ, ನಟ ರಮೇಶ್ ಅರವಿಂದ್ ನನ್ನ ಕೈಲಿ ನಿಜವಾಗ್ಲೂ ಅಡುಗೆ ಮಾಡಿಸಿದ್ದಾರೆ ಅಂತ ಹೇಳಿದ್ರು ರಂಜಿತಾ 

ರಮೇಶ್ ಅರವಿಂದ್ ಅವರ ಕ್ಯಾಪ್ಟನ್ಶಿಪ್ನಲ್ಲಿ ಅದ್ಭುತವಾದ ಪಾತ್ರ ದೊರಕಿದೆ ಎಂದಿರುವ ರಚಿತಾ, ಚಿತ್ರದಲ್ಲಿ 'ದೋಣಿ ಬಿರಿಯಾನಿ' ಮಾಡಿದ್ದಾರಂತೆ.