ಲೋಕದರ್ಶನವರದಿ
ಮಹಾಲಿಂಗಪುರ : ಮಿಂಟೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತದ ನಂತರ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಸಸ್ಯಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಉತ್ತಮ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿ, ಯೋಗ, ವ್ಯಾಯಾಮಗಳಿಂದ ಮಧುಮೇಹ (ಸಕ್ಕರೆ ಖಾಯಿಲೆ ) ವನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ವೈದ್ಯ ಡಾ. ಮಾರುತಿ ಮೇದಾರ ಹೇಳಿದರು.
ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಮಧುಮೇಹ ತಪಾಸಣೆ ಮತ್ತು ಸೂಕ್ತ ಸಲಹೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳು ಅತೀ ಅನಿವಾರ್ಯ ಏಕೆಂದರೆ ಇಂದು ಜನರಿಗೆ ಮಧುಮೇಹದಂತಹ ಮಾರಣಾಂತಿಕ ಖಾಯಿಲೆ ಬಗ್ಗೆ ಜನರಿಗೆ ತಿಳುವಳಿಕೆಯ ಕೊರತೆ ಇದೆ.
ತಿಳುವಳಿಕೆ ನೀಡುವುದರೊಂದಿಗೆ ಉಚಿತ ತಪಾಸಣೆ ಮತ್ತು ಸೂಕ್ತ ಸಲಹೆ ನೀಡಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದ ಅವರು ಇಂದು 30 ರಿಂದ 35 ವಯೋಮಾನದವರಿಗೂ ಮಧುಮೇಹ ಖಾಯಿಲೆ ಬರುತ್ತಿರುವುದು ತುಂಬಾ ಕಳವಳಕಾರಿ. ಗಾಯವಾದಾಗ ನಂಜಾಗುವುದು, ಕಣ್ಣು ಮಂಜಾಗುವುದು, ಕಿಡ್ನಿ ಸಮಸ್ಯೆ, ಹೃದಯ ತೊಂದರೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಿ ನಂತರ ಮರಣಕ್ಕೆ ಕಾರಣವಾಗುತ್ತದೆ.
ಪರಿಹಾರ : ಮಧುಮೇಹವನ್ನು ಸೈಲೆಂಟ್ ಕಿಲ್ಲರ್ ಎನ್ನಲಾಗುತ್ತದೆ. ಹಾಗಾಗಿ ಈ ಖಾಯಿಲೆ ಬಗ್ಗೆ ಸೂಕ್ತ ತಿಳುವಳಿಕೆ, ಆಹಾರ ಪದ್ಧತಿ, ಜೀವನ ಶೈಲಿ, ಕಾಲ್ನಡಿಗೆ , ಸೈಕಲ್ ಸವಾರಿ , ವ್ಯಾಯಾಮ, ಹೆಚ್ಚು ಪ್ರೋಟೀನ್ ಯುಕ್ತ ತರಕಾರಿ, ಹಣ್ಣುಗಳ ಸೇವನೆ ಖಾಯಿಲೆಗೆ ಪರಿಹಾರ ಎಂದರು .
ಸೂಕ್ತ ಸಮಯದಲ್ಲಿ ಖಾಯಿಲೆಯನ್ನು ಗುರುತಿಸಿ ಸಲಹೆ, ಮಾರ್ಗದರ್ಶನ ನೀಡುವ ಇಂತಹ ಕಾರ್ಯಕ್ರಮವನ್ನು ನಾಗರೀಕರು ಸದ್ಬಳಕೆ ಮಾಡಿಕೊಂಡು ಸದೃಢ ಸಮಾಜ ಕಟ್ಟಲು ಕರೆಕೊಟ್ಟರು.
ಸನ್ಮಾನ : ಸಾಮಾಜಿಕ ಕಳಕಳಿ ಮತ್ತು ಸೇವೆಗಾಗಿ ಸಮಾಜ ಸೇವಕ ಬಸವರಾಜ ಗಿರಿಸಾಗರ್ ಅವರನ್ನು ಸನ್ಮಾನಿಸಲಾಯಿತು.
ಡಾ. ಸೋಮಶೇಖರ ಸಂಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಮೇಶ ಪತ್ತಾರ, ಶ್ರೀಶೈಲ ಬಾಡನವರ, ಈರಪ್ಪ ಕಡಕೋಳ, ಶಶಿಧರ ಉಳ್ಳಾಗಡ್ಡಿ, ಪತ್ರಕರ್ತರಾದ ಮೀರಾ ತಟಗಾರ್, ಲಕ್ಷ್ಮಣ ಕಿಶೋರಿ ಇತರರು ಇದ್ದರು.
ಕು.ತೇಜಸ್ವಿನಿ ಶಿರೋಳ ಪ್ರಾಥರ್ಿಸಿ, ಸಂಸ್ಥೆಯ ಕಾರ್ಯದಶರ್ಿ ರಾಜು ತಾಳಿಕೋಟಿ ಸ್ವಾಗತಿಸಿ, ವಕೀಲ ಸಿದ್ದು ನಕಾತಿ ವಂದಸಿ, .ಶಿಕ್ಷಕ ಸಿದ್ಧಾರೂಢ ಮುಗಳಖೋಡ ನಿರೂಪಿಸಿದರು.ನಂತರ ನಡೆದ ತಪಾಸಣೆ ಮತ್ತು ಸಲಹೆ ಶಿಬಿರದಲ್ಲಿ ನೂರಾರು ನಾಗರೀಕರು ತಪಾಸಣೆ ಮತ್ತು ಸಲಹೆ ಪಡೆದರು.