ಧಾರವಾಡದ 34 ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಅದ್ದೂರಿ ತೆರೆ

ಧಾರವಾಡದ 34 ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಅದ್ದೂರಿ ತೆರೆ Dharwad's 34th Inter-College Youth Festival kicks off with grand opening

ಧಾರವಾಡ 24: ಕೃಷಿ ವಿಶ್ವವಿದ್ಯಾಲಯ, ಧಾರವಾಡದ 34ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವವು ದಿನಾಂಕ 24.11.2025 ರಂದು ತೆರೆಕಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಷಽಽ ಬ್ರಽಽ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ಹುಕ್ಕೇರಿ, ರಾಷ್ಟ್ರೀಯ ಉಪಾಧ್ಯಕ್ಷರು, ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ, ಬೆಂಗಳೂರು ದಿವ್ಯ ಸಾನಿಧ್ಯ ವಹಿಸಿದ್ದರು. ತಮ್ಮ ಆಶೀರ್ವಚನದಲ್ಲಿ ಅವರು ನುಡಿಗಿಂತ ನಡೆ ಉತ್ತಮ ಎಂಬ ತತ್ವದ ಜೊತೆಗೆ  ರೈತರಿಗೆ ಬೆನ್ನೆಲುಬಾಗಿ ನಿಲ್ಲಿ ಎಂದು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಅಭಿರುಚಿ ಬೆಳೆಸಲು, ಬಾಂಧವ್ಯ ಬೆಸೆಯಲು ಇಂತಹ ಉತ್ಸವಗಳು ಮುಖ್ಯ ಎಂದು ಹೇಳಿದರು. ಮಣ್ಣಿನ ಸತ್ವ ಕಳೆದು ಹೋಗುತ್ತಿದೆ, ಈ ಸತ್ವ ಉಳಿಸಲು ದೇಸಿ ಅಭಿರುಚಿ ಬೆಳೆಸುವುದು, ಪ್ಲಾಸ್ಟಿಕ್ ಬಳಕೆಯ ಬಿಟ್ಟು, ದೇಶವನ್ನು ಪ್ರೀತಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಪಿ. ಎಲ್‌. ಪಾಟೀಲರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯುವಜನೋತ್ಸವದ ಸುಮಾರು 20ಕ್ಕೂ ಹೆಚ್ಚು ಸ್ಪರ್ಧೆಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕಾಗಿ ಎಲ್ಲ ಆಯೋಜಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ, ಯುವಶಕ್ತಿಯ ಮಹತ್ವ ಸಾರಿ, ವಿವಿಧ ತಂಡಗಳ ಪ್ರದರ್ಶನವನ್ನು ಕೊಂಡಾಡಿದರು. ಬಹುಮಾನ ಮುಖ್ಯವಲ್ಲ, ಸ್ಪರ್ಧಾ ಮನೋಭಾವನೆ ಮುಖ್ಯ.  ಕಲೆಯ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಹೇಳಿದರು.  

ಡಾ. ಬಿ.ಡಿ.ಬಿರಾದಾರ, ಶಿಕ್ಷ ನಿರ್ದೇಶಕರು ಇವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಗಣ್ಯ ಮಾನ್ಯರನ್ನು ಸ್ವಾಗತಿಸಿದರು. ಹಾಗೂ ಡಾ. ಶ್ರೀಪಾದ ಕುಲಕರ್ಣಿ, ಡೀನ್ (ವಿದ್ಯಾರ್ಥಿ ಕಲ್ಯಾಣ), ಕೃವಿವಿ, ಧಾರವಾಡ ಇವರು ಯುವಜನೋತ್ಸವ ಕಾರ್ಯಕ್ರಮದ ವರದಿ ವಾಚನ ಮಾಡಿದರು.  

ಗೌರವಾನ್ವಿತ ಆಹ್ವಾನಿತರಾಗಿ ಕೃವಿವಿ, ಧಾರವಾಡದ ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀಮತಿ. ಪಾರ್ವತಿ ಕುರ್ಲೆ, ಶ್ರೀ. ವಿ.ಪಿ.ಪೊಲೀಸಗೌಡರ್, ಶ್ರೀ. ಬಸವರಾಜ ಕುಂದಗೋಳಮಠ, ಶ್ರೀ ರವಿ ಮಾಳಗೇರ, ಮತ್ತು ಡಾ.ವಾಸುದೇವ ಆರ್‌., ಉಪಸ್ಥಿತರಿದ್ದರು. ಡಾ. ಎಂ.ವಿ.ಮಂಜುನಾಥ, ವಿಸ್ತರಣಾ ನಿರ್ದೇಶಕರು,  ಡಾ. ಅಶೋಕ ಎಸ್ ಸಜ್ಜನ ಡೀನ್ (ಸ್ನಾತಕೋತ್ತರ), ಕೃವಿವಿ.,ಧಾರವಾಡ, ಡಾ. ಎಸ್‌. ಎಸ್‌. ಜಗ್ಗಿನವರ, ವಿದ್ಯಾಧಿಕಾರಿಗಳು (ಕೃಷಿ), ಕೃ.ಮ., ವಿಜಯಪುರ, ಡಾ. ಕೆ.ವಿ.ಬಸವಕುಮಾರ, ವಿದ್ಯಾಧಿಕಾರಿಗಳು (ಕೃಷಿ), ಕೃ.ಮ.,ಹನುಮನಮಟ್ಟಿ ಹಾಗೂ ಡಾ. ಪಿ.ಎಸ್‌. ಹೂಗಾರ, ಡೀನ್ (ಕೃಷಿ), ಕೆ.ಎಲ್‌.ಇ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ತೆನಿಕೊಳ್ಳ, ಬೆಳಗಾವಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

 ಈ ಯುವಜನೋತ್ಸವ ಕಾರ್ಯಕ್ರಮದಲ್ಲಿ ಒಟ್ಟು 8 ತಂಡಗಳು 20ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಯುವಜನೋತ್ಸವದ ಸಮಗ್ರ ಚಾಂಪಿಯನ್ಗಳಾಗಿ ಕೃಷಿ ಮಹಾವಿದ್ಯಾಲಯ, ಧಾರವಾಡ, ರನ್ನರ್‌ಅಪ್‌ಗಳಾಗಿ  ಕೃಷಿ ಮಹಾವಿದ್ಯಾಲಯ, ವಿಜಯಪುರ ಹಾಗೂ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಚಾಂಪಿಯನ್ಗಳಾಗಿ ಹೊರಹೊಮ್ಮಿದರು. ಈ ಕಾರ್ಯಕ್ರಮವನ್ನು ಡಾ. ಎಂ.ಡಿ.ಪಾಟೀಲ ಹಾಗೂ ಡಾ. ಬಿ.ಎನ್‌. ಅರವಿಂದಕುಮಾರ ಅವರು ನಿರೂಪಿಸಿದರು ಮತ್ತು ಡಾ. ವಿ. ಬಿ. ಕುಲಿಗೋಡ, ವಿದ್ಯಾಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಧಾರವಾಡ ಇವರು ವಂದನಾರೆ​‍್ಣ ಸಲ್ಲಿಸಿದರು. 

ಯುವಜನೋತ್ಸವದ ಅಂಗವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದ ನೋಟ ಕೃ.ವಿ.ವಿ.,ಯ 34 ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸದ ಸಮಗ್ರ ಚಾಂಪಿಯನ್ ಮಹಾವಿದ್ಯಾಲಯ, ಧಾರವಾಡದ ತಂಡ   

ಷಽಽ ಬ್ರಽಽ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ಹುಕ್ಕೇರಿ, ರಾಷ್ಟ್ರೀಯ ಉಪಾಧ್ಯಕ್ಷರು, ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ, ಬೆಂಗಳೂರು ಆಶೀರ್ವಚನ ನೀಡಿದರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಪಿ. ಎಲ್‌. ಪಾಟೀಲರವರು ಯುವಜನೋತ್ಸವದ ಅಧ್ಯಕ್ಷೀಯ ಭಾಷಣ ಮಾಡಿದರು.