ಧರ್ಮಸ್ಥಳ ಪ್ರಕರಣ ನಿಷ್ಪಕ್ಷಪಾತ ತನಿಖೆಗಾಗಿ ಎನ್‌ಐಎಗೆ ಕೊಡಬೇಕು: ವಿರುಪಾಕ್ಷಪ್ಪ

ಧರ್ಮಸ್ಥಳ ಪ್ರಕರಣ ನಿಷ್ಪಕ್ಷಪಾತ ತನಿಖೆಗಾಗಿ ಎನ್‌ಐಎಗೆ ಕೊಡಬೇಕು: ವಿರುಪಾಕ್ಷಪ್ಪ  Dharmasthala case should be handed over to NIA for impartial investigation: Virupakshappa

ಹಾವೇರಿ 26 : ಧರ್ಮಸ್ಥಳ ಪ್ರಕರಣ ಹಿಂದಿರುವ ಸೂತ್ರಧಾರಿಗಳನ್ನು ಹಿಡಿಯಲು ಎನ್‌ಐಎಗೆ ವಹಿಸುವುದರೆ ಮಾತ್ರ ಪೂರ್ವಾಪರ ಸತ್ಯತೆ ಗೊತ್ತಾಗುತ್ತದೆ. ಇದರ ಹಿಂದಿರುವ ಕಾಣದ ಕೈಗಳು ಹೊರಗೆ ಬರಲಿವೆ ಕೂಡಲೇ ಸಿದ್ದರಾಮಯ್ಯನವರು ತಪ್ಪಿಸಿಕೊಳ್ಳಲು ಹೋಗದೇ, ಎನ್‌ಐಎಗೆ ಪ್ರಕರಣ ಕೊಡಬೇಕು ಎಂದು ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ  ಮಂಡಲ ವತಿಯಿಂದ ಇಂದು ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಎಂಬ ಅಭಿಯಾನದ ಮೂಲಕ ಪ್ರತಿಭಟನೆಯನ್ನು ಹಳೆ ಪುರಸಭೆಯಿಂದ  ಪ್ರಾರಂಭಿಸಿ ಮುಖ್ಯ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ನೀಡುವ ಮೂಲಕ ಮಾತನಾಡಿದರು ಧರ್ಮಸ್ಥಳ ಪ್ರಕರಣದಲ್ಲಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಘಾಸಿಯಾಗಿದೆ. ಶ್ರೀ ಕ್ಷೇತ್ರದ ಬಗ್ಗೆ  ಅಪಪ್ರಚಾರ ನಡೆಯುತ್ತಿದೆ. ಇದು ಭಕ್ತರಿಗೆ ನೋವು ಉಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಕೊಡುವುದರಲ್ಲಿ ಎಡವಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ ಆಗಿದೆ. ಹೀಗಾಗಿ ನಾಡಿನ ಜನರ ಪರವಾಗಿ ಮನವಿ ಮಾಡುತ್ತಿದ್ದೇನೆ. ಇದರ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದರೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಹೇಳಿದರು.    

ಈ ಧರ್ಮಸ್ಥಳದ ನಡೆಯುತ್ತಿರುವ ವಿಚಾರವು ಸೌದಿ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದರೇ ಇದರ ಹಿಂದೆ ಬಹುದೊಡ್ಡ ಕೈಗಳಿವೆ ದುಬೈನಲ್ಲಿರುವ ಅಲ್ಜೀರಾ ಟಿವಿ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾರೆ ಇದರಿಂದ ಇದರ ಹಿಂದೆ ಹೊರದೇಶದ ದ್ರೋಹಿಗಳ ಹಿಂದೂದ್ರೋಹಿಗಳ ಕೈಯಿದೆ ಮತ್ತು ಕೇರಳದ ಮುಸ್ಲಿಮರು ಇದರಲ್ಲಿ ಭಾಗಿಯಾಗಿದ್ದಾರೆ ಮತದಾಂದರಿಗೆ ಹಣ ಬಂದು ಸೇರುತ್ತಿದೆ ಒಬ್ಬ ಸೈಕಲ್ನಲ್ಲಿ ಪತ್ರಿಕೆ ಹಾಕುವ ಇಂದು ನೂರಾರು ಕೋಟಿ ಮನೆ ಕಟ್ಟಿಸಿದ್ದಾನೆಂದರೆ ಅದು ಹೇಗೆ ಎಂದು ಪ್ರಶ್ನಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಸಣ್ಣ ಚತ್ರದ. ವಿಜಯ ಭರತ್ ಬಳ್ಳಾರಿ. ಶಿವಬಸಪ್ಪ ಕುಳೇನೂರ್ .ಶಿವಾನಂದ್ ಕಡಗಿ .ಎಂ ಎಸ್ ಪಾಟೀಲ್ .ಶಿವಯೋಗಿ ಶಿರೂರ್‌. ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿ .ಸ್ಥಾಯಿ ಸಮಿತಿಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್‌. ನಾಗರಾಜ ಹವನೂರ್ .ಪ್ರವೀಣ್ ಯಾದವಾಡ. ಸುನಿಲ್ ತೊಗಟವೀರ್ .ಪುರಸಭೆ ಸದಸ್ಯರಾದ ಸರೋಜಮ್ಮ ಉಳ್ಳಾಗಡ್ಡಿ ಗಾಯತ್ರಿ ರಾಯ್ಕರ್ ಕಲಾವತಿ ಬಡಿಗೇರ್ ಮತ್ತು ಶಿವಯೋಗಿ ಗಡಾದ್‌. ಪ್ರದೀಪ್ ಜಾದವ್‌. ವಿಜಯ್ ಮಾಳಗಿ. ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.