ಪ್ರತಿ ಸದಸ್ಯರಿಗೆ ನೇರಳಾದ ಧರ್ಮಸ್ಥಳ ಸಂಘ:ನೀಲಣ್ಣವರ
Dharmasthala Sangha is a green organization for every member: Nilannavara
ಪ್ರತಿ ಸದಸ್ಯರಿಗೆ ನೇರಳಾದ ಧರ್ಮಸ್ಥಳ ಸಂಘ:ನೀಲಣ್ಣವರ
ರನ್ನ ಬೆಳಗಲಿ 11: ಮುಧೋಳ ತಾಲೂಕಿನ ಶೀರೊಳ ವಲಯದ ರನ್ನ ಬೆಳಗಲಿ ನವಶಕ್ತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಬುಧವಾರ ದಂದು ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜರಗಿತು.ಸ್ಥಳೀಯ ಪತ್ರಕರ್ತ ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಪ್ರತಿ ಸದಸ್ಯರಿಗೆ ನೇರಳಾದ ಧರ್ಮಸ್ಥಳ ಸಂಘವು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಆರ್ಥಿಕ,ಸಂಸ್ಕೃತಿಕ, ಸಾಮಾಜಿಕ,ಶೈಕ್ಷಣಿಕ ಹಾಗೂ ಓದ್ಯೋಗಿಕ ಕ್ಷೇತ್ರದಲ್ಲಿ ಸಂಘದ ಸದಸ್ಯರು ಅಭಿವೃದ್ಧಿ ಸಾಧಿಸಲೆಂದು ನಿರಂತರ ಪರಿಶ್ರಮಸುತ್ತಿದೆ. ಆಧುನಿಕತೆಗೆ ಒಳಗಾದ ಕುಟುಂಬದ ತಾಯಂದಿರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅನೇಕ ತೊಂದರೆಗೆ ಬಲಿಯಾಗುತ್ತಿದ್ದಾರೆ. ವಿಶ್ವವೇ ಮೆಚ್ಚುವಂತಹ ಸಂಸ್ಕೃತಿ ನಮ್ಮ ರಾಷ್ಟ್ರದ ಪ್ರತೀಕವಾಗಿದೆ. ಆದ್ದರಿಂದ ಭಾರತೀಯರಾದ ನಾವು ಭಾರತೀಯರಾಗಿರೋಣ ನಮ್ಮ ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿಯನ್ನು ಪಾಲಿಸುತ್ತ ಮುಂದುವರಿಸೋಣ ಎಂದು ತಿಳಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ರೂಪಾ ಹೊಸಟ್ಟಿ ನೆರೆವೇರಿಸಿದರು.ಸುಜಾತಾ ಮುರನಾಳ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ವಲಯದ ಮೇಲ್ವಿಚಾರಕರಾದ ಚಂದ್ರಕಲಾ ರೇಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುವರ್ಣ ನಂದಿಕೋಲಮಠ,ತಾಲೂಕಿನ ಟಿ ಎನ್ ಓ ಉಮೇಶ ಲಮಾಣಿ, ಸೇವಾಪ್ರತಿನಿಧಿ ಸಾವಿತ್ರಿ ಜೈನಾಪುರ,ಸುಧಾ ಜೈನಾಪುರ ಹಾಗೂ ವಿವಿಧ ಸಂಘದ ಸದಸ್ಯರು,ಪಟ್ಟಣದ ಹಿರಿಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 