ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಸ್ತವಾಡದಲ್ಲಿ ?ನಮ್ಮೂರು ನಮ್ಮ ಕೆರೆ' ಹಸ್ತಾಂತರ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಬಸ್ತವಾಡದಲ್ಲಿ ?ನಮ್ಮೂರು ನಮ್ಮ ಕೆರೆ' ಹಸ್ತಾಂತರ ಕಾರ್ಯಕ್ರಮ Dharmasthala Rural Development Project's 'Our Village, Our Lake' handover program in Bastawada

ಲೋಕದರ್ಶನ ವರದಿ 

ಬೆಳಗಾವಿ 27 :  ತಾಲೂಕು ವ್ಯಾಪ್ತಿಯ  ಬಸ್ತವಾಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅನುದಾನದಲ್ಲಿ ಪುನಶ್ಚೇತನಗೊಳಿಸಲಾದ 945 ನೇ ನಮ್ಮೂರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಮನೋಹರ ಮುಚ್ಚಂಡಿ ಅವರು ನಾಮಫಲಕ ಅನಾವರಣ ಮಾಡುವ ಮೂಲಕ ಚಾಲನೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಕಾಂತ ಪಾಟೀಲ ಅವರು ವಹಿಸಿದರು. ಬಸೀರ್ ಅಹ್ಮದ್ ಕಿಲ್ಲೆವಾಲೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. 

ಜಿಲ್ಲಾ ನಿರ್ದೇಶಕರು ಸತೀಶ ನಾಯ್ಕ್‌ ಅವರು ಮಾತನಾಡಿ,  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ.  ಅದರಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವು ಅತೀ ಪ್ರಮುಖವಾಗಿದೆ.  ಗ್ರಾಮೀಣ ಭಾಗದಲ್ಲಿ ಬಿಸಿಲಿನ  ತಾಪ, ಬರಪೀಡಿತ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳು ತುಂಬಾ ಕಷ್ಟ ಪಡುತ್ತಾರೆ. ಜಾನುವಾರುಗಳು,  ಪ್ರಾಣಿ ,  ಪಕ್ಷಿಗಳಿಗೆ ನೀರಿನ ಸೌಲಭ್ಯ ಇಲ್ಲದೆ ಪರಿಸರ  ನಶಿಸಿ ಹೋಗುತ್ತಿದೆ.  ಈ ಸಮಸ್ಯೆಯನ್ನು ಮನಗಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರು ಗ್ರಾಮೀಣ ಭಾಗದ ಈ ಸಮಸ್ಯೆಗೆ ಪರಿಹಾರ ನೀಡುವ ದೃಷ್ಟಿ ಕೋನದಿಂದ ಕೆರೆ ಪುನಃಶ್ಚೇತನ ಗೊಳಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವುದರ ಮೂಲಕ ಇವತ್ತಿನ ದಿನ ಕರ್ನಾಟಕ ರಾಜ್ಯದಾದ್ಯಂತ ಸುಮಾರು 1000 ಕೆರೆಗಳನ್ನು ಪುನಃಶ್ಚೇತನಗೊಳಿಸಿರುತ್ತಾರೆ ಈ ಕಾರ್ಯಕ್ರಮದಿಂದ ಇವತ್ತಿನ ದಿನ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ ಎಂದರು. 

ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಆಗಿದೆ, ಇದರಿಂದಾಗಿ ಸಮಾಜ ಸಂಕುಲಕ್ಕೆ ಒಳಿತು ಆಗಿದೆ. ಆದ್ದರಿಂದ ಜೀವ ಜಲ ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂದು ಮಾಹಿತಿ ನೀಡುವ ಮೂಲಕ ಕಲ್ಮೇಶ್ವರ ಕೆರೆ ಯನ್ನು ಗ್ರಾಮ ಪಂಚಾಯತ್‌/ ಕಲ್ಮೇಶ್ವರ ಕೆರೆ ಸಮೀತಿ ಅವರಿಗೆ ಹಸ್ತಾಂತರ ಮಾಡಿದರು. 

ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳು ಆಶಾ ಅವರು ಮಾತನಾಡಿ, ಕೆರೆ ಪುನಶ್ಚೇತನಗೊಂಡಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.  ಕರ್ನಾಟಕಕ್ಕೆ ಈ ಕೆರೆ ಮಾದರಿ ಆಗುವಂತೆ  ಇನ್ನೂ  ಅಭಿವೃದ್ಧಿ ಪಡಿಸಲಾಗುವುದು ಎಂದರು.  

ಈ ಸಂದರ್ಭದಲ್ಲಿ ಅಕಜಜಾವೇ ನಿಕಟ ಪೂರ್ವ ಅಧ್ಯಕ್ಷರು ಚಾರು ಕೀರ್ತಿ , ಧಾರವಾಡ ಪ್ರಾದೇಶಿಕ ವಿಭಾಗದ ಕೆರೆ ಅಭಿಯಂತರರು ನಿಂಗರಾಜ, ಕ್ಷೇತ್ರ ಯೋಜನಾಧಿಕಾರಿಗಳು ಪಾರ್ವತಿ ಅವರು ಸ್ವಾಗತಿಸಿದರು, ರಾಜೇಂದ್ರ ಪಾಟೀಲ, ರಾಜು ಪಾಟೀಲ,ಬಸೀರ್ ಅಹ್ಮದ್ ಕಿಲ್ಲೆವಾಲೆ, ಮನೋಹರ ಮುಚ್ಚಂಡಿ, ಚಂದ್ರಕಾಂತ ಪಾಟೀಲ, ಭರಮಪ್ಪ , ಗೌಡ ಕೆಂಚಗೊಳ, ಗುಂಡು ಬಡವಣ್ಣವರ,   ಕೃಷಿ ಮೇಲ್ವಿಚಾರಕ ಮಹಾಂತೇಶ ನಿರೂಪಿಸಿದರು , ಮೇಲ್ವಿಚಾರಕಿ ಕಮಲ ವಂದಿಸಿದರು.