ಪ್ರಜಾಸೌಧ ಸ್ಥಳ ವಿರೋಧಿಸಿ 19ನೇ ದಿನಕ್ಕೆ ಮುಂದುವೆರೆದ ಧರಣಿ ಸತ್ಯಾಗ್ರಹ

ಪ್ರಜಾಸೌಧ ಸ್ಥಳ ವಿರೋಧಿಸಿ 19ನೇ ದಿನಕ್ಕೆ ಮುಂದುವೆರೆದ ಧರಣಿ ಸತ್ಯಾಗ್ರಹ  Dharani Satyagraha continued for 19th day against Prajasaudha place

ತಾಳಿಕೋಟಿ 15: ಪಟ್ಟಣದ ವಿವಿಧ ಸಮಾಜದ ಸಂಘ ಸಂಸ್ಥೆಗಳಿಂದ ಬೆಂಬಲ. ತಾಳಿಕೋಟೆ : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 18 ನೇ ದಿನದ ಸತ್ಯಾಗ್ರಹವು ತಾಳಿಕೋಟಿ ಹೋರಾಟ ಸಮಿತಿ ಹಾಗೂ ತಾಳಿಕೋಟಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಿಂದ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ 18 ನೇ ದಿನದ ಸತ್ಯಾಗ್ರಹ ನಡೆಸಿದರು.

ಪಟ್ಟಣದ ಹಿರಿಯರಾದ ಸಿರಸಕುಮಾರ ಹಜೇರಿ ಮಾತನಾಡಿ ಈಗಾಗಲೇ ಪ್ರಜಾಸೌಧಕ್ಕೆ ನಿಗದಿ ಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ಐದಾರು ಕೀ ಮೀ ದೂರವಿದ್ದು ಕಾರಣ ವೃದ್ಧರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ರೈತಾಪಿ ಜನರಿಗೆ ತುಂಬಾ ಈ ಸ್ಥಳ ಬಹಳ ದೂರ ವಾಗುವುದರಿಂದ ತಾಳಿಕೋಟಿ ಪಟ್ಟಣದಲ್ಲಿಯೇ ಇರುವ ಸರ್ಕಾರಿ ಸ್ಥಳಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಹಾಗೂ ಈಗ ನಿಗದಿ ಪಡಿಸಿರುವ ಸ್ಥಳ ಕೂಡಲೇ ರದ್ದು ಪಡಿಸಬೇಕು, ತಾಳಿಕೋಟಿ ಪಟ್ಟದಲ್ಲಿ ಪ್ರಜಾಸೌಧ ನಿರ್ಮಾಣ ಆಗುವವರೆಗೂ ತಾಳಿಕೋಟಿ ಪಟ್ಟಣದ ಎಲ್ಲಾ ಸಂಘದಿಂದ ಹಿರಿಯರೆಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಮೆಹೆಬೂಬ ಚೋರಗಸ್ತಿ , ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, , ವಿಜಯಸಿಂಗ್ ಹಜೇರಿ , ಕಳಕೂಸಾ ರಂಗರೇಜ್, ಬಸವರಾಜ ಕಶೆಟ್ಟಿ, ಸಿದ್ದನಗೌಡ ಪಾಟೀಲ, ಮಯೂರ ಪಾಟೀಲ, ನಾಗೇಶ ಕಟ್ಟಿಮನಿ, ರಮೇಶ ಹಜೇರಿ, ರಾಗು ಮಾನೆ, ನೀಲಕಂಠ ಕೊಣ್ಣೂರ, ಸುಭಾಸ ಕಟ್ಟಿಮನಿ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ,, ಅಮಿತ್ ಮನಗೂಳಿ, ಅಶೋಕ ಚಿನಗುಡಿ, ನಿಂಗನಗೌಡ ದೇಸಾಯಿ, ಸಿದ್ದು ಕಟ್ಟಿಮನಿ, ಶಂಕರ ಪಡಸಾಲಿ, ಮಹೇಶ ಚಲವಾದಿ , ರವಿ ಕಟ್ಟಿಮನಿ, ಮಂಜು.