ಕೆಎಚ್‌ಬಿ ನಗರಸಭೆಯ ಮನೆಗಳ ಕಾಮಗಾರಿ ಫ್ರಾರಂಭಕ್ಕೆ ಧರಣಿ ಉಪವಾಸ ಸತ್ಯಾಗ್ರಹ
Dharani, hunger strike to begin work on KHB municipal council houses
ಕೆಎಚ್‌ಬಿ ನಗರಸಭೆಯ ಮನೆಗಳ ಕಾಮಗಾರಿ ಫ್ರಾರಂಭಕ್ಕೆ ಧರಣಿ ಉಪವಾಸ ಸತ್ಯಾಗ್ರಹ
ಕಾರವಾರ 16 : ದಾಂಡೇಲಿಯಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಟ್ಟದೆ ಉಳಿದ 914 ಮನೆಗಳ ಕಾಮಗಾರಿ ಪ್ರಾರಂಭಿಸಲು , ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವ್ರದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ನೇತೃತ್ವದಲ್ಲಿ ಸ್ಥಳೀಯ ನಗರ ಸಭೆ ಕಛೇರಿ ಬಳಿ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಎದುರು ಸರದಿ ಧರಣಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿದೆ. ದಾಂಡೇಲಿಯ ಅಂಬೇವಾಡಿಯಲ್ಲಿ ಕಳೆದ 8 ವರ್ಷಗಳ ಹಿಂದೆ 1106 ಜಿ + 2 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಈ ನಿರ್ಮಾಣ ಕಾಮಗಾರಿ 12 ತಿಂಗಳಲ್ಲಿ ಬೆಂಗಳೂರಿನ ಗುತ್ತಿಗೆದಾರ ಕಂಪನಿ ಮುಗಿಸಿಕೊಡುವ ಭರವಸೆ ನೀಡಿತ್ತು . ಫಲಾನುಭವಿಗಳಿಗೆ ಮನೆಗಳನ್ನು 2020-21 ರಲ್ಲಿ ನೀಡಬೇಕಿತ್ತು. ಆದರೆ ಇದುವರೆಗೆ ಕೇವಲ 100 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ವಿತರಿಸಲಾಗಿದೆ . ನಂತರ 84 ಮನೆಗಳ ಕಾಮಗಾರಿ ಮುಗಿದಿದೆ. ಅದನ್ನು ಫಲಾನುಭವಿಗಳಿಗೆ ತಕ್ಷಣ ವಿತರಿಬೇಕು . ಬಾಕಿ 900 ಮನೆಗಳ ನಿರ್ಮಾಣ ಆಗಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ. ರಾಜ್ಯ ಗೃಹ ಮಂಡಳಿ 1106 ಫಲಾನುಭವಿಗಳಿಗೆ ಮನೆಗಳನ್ನು 2020-21 ವಿತರಿಸುವುದಾಗಿ ಹೇಳಿ ಫಲಾನುಭವಿಗಳಿಂದ 50 ರಿಂದ 70 ಸಾವಿರ ರೂಪಾಯಿ ಹಣ ಪಾವತಿಸಿಕೊಂಡಿತ್ತು. 12 ತಿಂಗಳ ನಂತರ ಮನೆ ಫಲಾನುಭವಿಗಳಿಗೆ ವಿತರಿಸುವ ಭರವಸೆನೀಡಿತ್ತು. ಆದರೆ 8 ವರ್ಷಗಳಾದರೂ ಮನೆ ನೀಡಿಲ್ಲ. ಒಟ್ಟೂ 53 ಕೋಟಿ ರೂಪಾಯಿ ವೆಚ್ಚದ 1106 ಮನೆಗಳ ನಿರ್ಮಾಣ ಕಾಮಗಾರಿಯ ಕೆಲಸ ಅರ್ಧದಷ್ಟು ಆಗದೇ ಇರುವಾಗಲೇ, ಗೃಹ ಮಂಡಳಿ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಗುತ್ತಿಗೆದಾರ ಕಂಪನಿ 38 ಕೋಟಿ ಹಣ ಬಿಲ್ ಪಾವತಿಸಿಕೊಂಡಿದ್ದಾರೆ. ಈಗ ಕೆಲಸ ಮಾಡಲು ಹಣವಿಲ್ಲ. ಯೋಜನಾವೆಚ್ಚ ಹೆಚ್ಚಾಗಿದೆ ಎಂದು ಸಕಾ9ರದ ಅನುದಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆನ್ನಲಾಗಿದೆ. ಅಧಿಕಾರಿಗಳು, ಗುತ್ತಿಗೆದಾರ ಕಂಪನಿಯ ನಡುವೆ ಫಲಾನುಭವಿಗಳು ಸಾಲ ಮಾಡಿ ಸೂರಿಗಾಗಿ ಗೃಹ ಮಂಡಳಿಗೆ ಹಣ ಕಟ್ಟಿ ವಂಚನೆಗೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ನೊಂದ ಫಲಾನುಭವಿಗಳು ಹೋರಾಟಕ್ಕೆ ಇಳಿದಿದ್ದಾರೆ. ಸ್ಥಳೀಯ ಶಾಸಕ ದೇಶಪಾಂಡೆ , ನಗರಸಭೆ, ಗೃಹ ಮಂಡಳಿ ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೆ ಹೋರಾಟ ಮುಂದುವರಿಸಲಾಗುವುದೆಂದು ಹೋರಾಟದ ಮುಖಂಡ ಅಕ್ರಮಖಾನ್ ತಿಳಿಸಿದ್ದಾರೆ.....
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 