ಧನಗರ ಗೌಳಿ : ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ಶಾಸಕ ಶಿವರಾಮ ಹೆಬ್ಬಾರ್

ಧನಗರ ಗೌಳಿ :  ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ಶಾಸಕ ಶಿವರಾಮ ಹೆಬ್ಬಾರ್ Dhanagara Gowli: MLA Shivarama Hebbar steps into folk dance

ಮುಂಡಗೋಡ  27:  ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಧನಗರಗೌಳಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ನೃತ್ಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ರವರು ಹೆಜ್ಜೆ ಹಾಕಿದರು.ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಾಳೆಹಳ್ಳಿ ಗ್ರಾಮಕ್ಕೆ ಈ ಹಿಂದೆಯೂ ಕೂಡ ನಾನು ಭೇಟಿ ನೀಡಿದ್ದೇನೆ ಮತ್ತು ಈ ಹಳ್ಳಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿಪಡಿಸುವ ಗ್ರಾಮದ ಮೂಲಭೂತ ಸೌಕರ್ಯವನ್ನು ಉತ್ತಮಪಡಿಸುವುದಾಗಿ ತಿಳಿಸಿದರು. 

ನವರಾತ್ರಿ ಸಮಯದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ತುಂಬಾ ಸಂತೋಷ ತಂದಿದೆ ನವ ದೇವತೆಗಳು ಆಶೀರ್ವಾದ ಈ ಹಳ್ಳಿ ಮೇಲೆ ಇರಲಿ ಎಂದು ತಿಳಿಸಿದರು.ಮಾಜಿ ಶಾಸಕ ವಿ ಎಸ್ ಪಾಟೀಲ ಮಾತನಾಡಿ ಈಗಾಗಲೇ ಈ ಹಳ್ಳಿಯ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಾಧ್ಯಮದಲ್ಲಿ ಸುದ್ದಿಗಳನ್ನು ಕೇಳಿದ್ದೇವೆ ಶಾಸಕರ ಮುಂದಾಳತ್ವದಲ್ಲಿ ಊರಿನ ಸಿಸಿ ರಸ್ತೆಯನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸುತ್ತಿವೆ ಎಂದು ತಿಳಿಸಿದರು.ಧನಗರ ಗೌಳಿ ಸಮುದಾಯದ ಪರಂಪರೆಯ ನೃತ್ಯ, ಸಂಗೀತ ಹಾಗೂ ಕಲಾ ಸಾಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮವು ಸ್ಥಳೀಯರಲ್ಲಿ ಉತ್ಸಾಹ ಮೂಡಿಸಿತು. ಶಾಸಕರ ಪಾಲ್ಗೊಳ್ಳುವಿಕೆ ಕಲಾ ಪರಂಪರೆಯ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸಿತು ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು.  

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತಹ ಶ್ರೀಯುತ ಕೃಷ್ಣ ಹಿರೇಹಳ್ಳಿ ಶ್ರೀಯುತ ದೇವು ಪಾಟೀಲ್ ದನಗರ ಗೌಳಿ ಸಮುದಾಯದ ರಾಜ್ಯಾಧ್ಯಕ್ಷರು ಶ್ರೀಯುತ ರವಿಗೌಡ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಗುಂಜಾವತಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದಂತ ಶ್ರೀಯುತ ಬಸಯ್ಯ ನಡುವಿನಮನಿ. ಅರಣ್ಯ ಇಲಾಖೆಯ ಸಿಬ್ಬಂದಿ ಆದಂತಹ  ಶ್ರೀಯುತ ಬಸವರಾಜ ಯಾದ್ವಾಡ ಬಾಳೆಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಶ್ರೀಯುತ ಎಂ ಬಿ ಭಜಂತ್ರಿ. ಲೊಯೋಲ  ವಿಕಾಸ ಕೇಂದ್ರದ ವಸತಿ ನಿಲಯಗಳ ಮೇಲ್ವಿಚಾರಕರಾದಂತಹ ಬ್ರದರ್ ಕಿರಣ ಗುಂಜಾವತಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದಂತಹ ಲಕ್ಷ್ಮಣ್ ಕೊಕ್ಕರೆ ಕಾರ್ಯಕ್ರಮದ  ಗ್ರಾಮದ ಹಿರಿಯರಾದಂತಹ ಶ್ರೀಯುತ ವಿಠ್ಠು ಎಡೆಗೆ  ಶ್ರೀಯುತ ಬಾಬು ವರಕ  ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದಂತಹ ಬಾಗು ಬೈರು ಕಾತ್ರೋಟ್ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಯುತ ಲಕ್ಷ್ಮಣ್ ಮೊಳೆ ಕಾರ್ಯಕ್ರಮದ ಸ್ವಾಗತವನ್ನು ಧನ್ಯವಾದಗಳು ಶ್ರೀಯುತ ನಾಗರಾಜ ಕಟ್ಟಿಮನಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಬಡ್ಡಿ ಇನ್ನಿತರೆ  ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು.