ಪುರಾತನ ದೇವಾಲಯದಲ್ಲಿ ಭಕ್ತಿಯಿಂದ ಭಜನೆ; ಹೊಸ ಬೆಳಕು ಮೂಡಿಸಲು ಭಕ್ತರ ಸಂಕಲ್ಪ

ಪುರಾತನ ದೇವಾಲಯದಲ್ಲಿ ಭಕ್ತಿಯಿಂದ ಭಜನೆ; ಹೊಸ ಬೆಳಕು ಮೂಡಿಸಲು ಭಕ್ತರ ಸಂಕಲ್ಪ Devotional Bhajan in an ancient temple; Devotees resolve to create a new light

 ಯಮಕನಮರಡಿ 20 : ಪುರಾತನ ಕಾಲದ ದೇವಾಲಯಕ್ಕೆ ಭಕ್ತರಿಂದ ಕಾಯಕಲ್ಪ. ಯಮಕನಮರಡಿ ಗ್ರಾಮದ ಮಧ್ಯಭಾಗದಲ್ಲಿ ಇರುವ ಪುರಾತನ ಕಾಲದ ವಿಠಲ ಮಂದಿರಕ್ಕೆ ಸುಮಾರು ವರ್ಷಗಳಿಂದ ಬೆಳಕನ್ನು ಕಾಲದೆ ಕತ್ತಲೆ ಆವರಿಸಿ ಅಪಾರ ಭಕ್ತರಲ್ಲಿ ನೋವನ್ನುಂಟು ಮಾಡಿತ್ತು ಆದರೆದ ಇತ್ತೀಚಿನ ದಿನಗಳಲ್ಲಿ ಭಕ್ತರಿಂದ ಉಜ್ವಲ ಬೆಳಕು ಮೂಡುತಿರುವುದು ಭಕ್ತರಲ್ಲಿ ಸಂತಶವನ್ನು ಉಂಟು ಮಾಡಿದೆ. ಸದರಿ ದೇವಸ್ಥಾನಕ್ಕೆ ನಾಲ್ಕುನೂರು ವರ್ಷಗಳ ಇತಿಹಾಸವಿದ್ದು ಇದಕ್ಕೆ ಗ್ರಾಮದ ಪುರೋಹಿತರು ಪೂಜಿಸುತ್ತಾ ಬಂದಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನವು ಅವನತಿ ಹೊಂದುವ ಸ್ಥಿತಿಯಲ್ಲಿ ಇರುವದನ್ನು ಗಮನಿಸಿ ಅಪಾರ ಭಕ್ತಾದಿಗಳು ಈ ಪುರಾತನ ಕಾಲದದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವದಾಗಿ ಭಕ್ತಾದಿಗಳು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ. 

 ಈಗಾಗಲೇ ದೇವಸ್ಥಾನದ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದ್ದು ಅಪಾರ ಭಕ್ತಾದಿಗಳು ತನು ಮನ ಧನ ದಿಂದ ದೇಣಿಗೆಯನ್ನು ಸಲ್ಲಿಸಲು ಮುಂದಾಗಿರುವುದು ಒಂದು ಹೆಮ್ಮೆಪಡುವ ಸಂಗತಿಯಾಗಿದೆ ದೇವಸ್ಥಾನವು ಪುರಾತನ ಕಾಲದ ರೂಪದಲ್ಲಿ ಇದ್ದು ಅದನ್ನು ಭಕ್ತಾದಿಗಳು ತಮ್ಮದೇ ಆದ ಒಂದು ಆಡಳಿತ ಮಂಡಳಿಯನ್ನು ಮಾಡಿಕೊಂಡು ದೇವಸ್ಥಾನವನ್ನು ಜಿರ್ನೋ ದಾರ ಮಾಡಲು ಮುಂದಾಗಿದ್ದಾರೆ. ಈಗಾಗಲೇ ದೇವಸ್ಥಾನದ ವಿವಿಧ ಕೆಲಸಗಳು ಪ್ರಾರಂಭವಾಗಿದ್ದು ಬರುವ ಆಶಾಡ ಮಾಸದ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದು ಸದರಿ ದೇವಸ್ಥಾನಕ್ಕೆ ಹೊಸ ಬೆಳಕು ಮೂಡಿಸುವಲ್ಲಿ ಇನ್ನಷ್ಟು ಭಕ್ತಾದಿಗಳು ಕೈಜೋಡಿಸಬೇಕೆಂದು ಭಕ್ತರಲ್ಲಿ ವಿನಂತಿಸಿಕೊಳ್ಳಲಾಗಿದೆ.