ನಾರಾಯಣಪುರ ಶ್ರೀದ್ಯಾಮವ್ವ ದೇವಿಯ ದರ್ಶನಕ್ಕಾಗಿ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತಾಧಿಗಳು
Devotees from various states are coming to Narayanpur for Shri dyamavva Devi
ಶಿಗ್ಗಾವಿ 23: ನವರಾತ್ರಿಯ ಸಂದರ್ಭದಲ್ಲಿ ನಾಡಿನಾಧ್ಯಂತ ದೇವತೆಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನ ನಾರಾಯಣಪುರ ಗ್ರಾಮದ ಉದ್ಭವಮೂರ್ತಿ ಶ್ರೀ ದ್ಯಾಮವ್ವ ದೇವಿಗೆ ವಿವಿಧ ರಾಜ್ಯಗಳ, ಜಿಲ್ಲೆಗಳ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಬಂಕಾಪುರ, ಕೋಣಕೇರಿ ರಸ್ತೆಯ ಬಾಡ ಮತ್ತು ನಾರಾಯಣಪುರ ಗ್ರಾಮಗಳ ಮಧ್ಯ ಈ ದೇವಸ್ಥಾನ ಇದ್ದು, ಸುಮಾರು 6ಅಡಿ ಎತ್ತರ, 12 ಅಡಿ ಅಗಲ, 8 ಅಡಿ ದಪ್ಪದ ವಿಷಾಲ ಉದ್ಭವ ಬಂಡೆಯ ಪೂರ್ವ, ಪಶ್ಚಿಮ, ಉತ್ತರ ಭಾಗಗಳಲ್ಲಿ ದೇವಿಯ 10 ಮೂರ್ತಿಗಳು ಮೂಡಿಬರುತ್ತಿದ್ದು, ಒಂದು ನಾಗಪ್ಪ, ಈಶ್ವರ ಮೂರ್ತಿಗಳು ದಿನ ಕಳೆದಂತೆ ಹೆಚ್ಚು ಪ್ರಕರವಾಗಿ ಮೂಡಿ ಬೆಳೆಯುತ್ತಿವೆ ಎಂದು ಹೇಳಲಾಗುತ್ತಿದೆ. ಬಂಡೆಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ತಲಾ ಎರಡು ಚತುರ್ಭುಜ ದೇವಿಯರಿದ್ದು, ಆಯುಧರೂಢರಾಗಿದ್ದಾರೆ. ಈ ಕೆಲ ವರ್ಷಗಳಿಂದ ನೈಸರ್ಗಿಕವಾಗಿ ಗಿಡಗಳ ಮಧ್ಯದಲ್ಲಿ ಬೆಳೆಯುತ್ತಿರುವ ಈ ಉದ್ಭವ ದ್ಯಾಮವ್ವ ದೇವಿಯ ದೇವಸ್ಥಾನವು ಅಸಂಖ್ಯಾತ ಭಕ್ತರನ್ನು ಸೆಳೆಯುತ್ತಿದ್ದು, ಮನೋಕಾಮನೆಗಳಿಗಾಗಿ ಭಕ್ತರು ದಂಡೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ಶ್ರಾವಣ ಮಾಸ ಮತ್ತು ದಸರಾ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆಗಳು ನಡೆದರೆ, ಪ್ರತಿ ಹುಣ್ಣಿಮೆಗೆ ಪಲ್ಲಕ್ಕಿ ಉತ್ಸವ ಮಾಡಲಾಗುತ್ತಿದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀಗಳು, ಸದಾಶಿವ ಪೇಟೆಯ ಶಿವದೇವ ಶರಣರು, ಹೋತನಹಳ್ಳಿಯ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಬಂದು ದೇವಿ ದರ್ಶನವನ್ನು ಪಡೆಯುತ್ತಿದ್ದಾರೆ.
ತಾಲೂಕಿನ ನಾರಾಯಣಪುರ, ಬಾಡ, ಸದಾಶಿವಪೇಟೆ, ಹಳೆಬಂಕಾಪುರ, ಮೂಕಬಸರಿಕಟ್ಟಿ, ಮುನವಳ್ಳಿ, ಬಂಕಾಪುರ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಶೇಕಪ್ಪ ಹಲ್ಮನಿ ಅವರ ಹೊಲದಲ್ಲಿ ಇರುವ ಈ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ದಿ ಪಡೆಸುಲು ತನು, ಮನ, ಧನದಿಂದ ಸಹಕರಿಸುತ್ತಿದ್ದಾರೆ.
ಭಾರತಹುಣ್ಣೆಮೆಯಂದು ಉದ್ಭವಮೂರ್ತಿ ಶ್ರೀ ದ್ಯಾಮವ್ವ ದೇವಿಯ ಜಾತ್ರೆಯನ್ನು ಮಾಡುವ ಇಂಗಿತವನ್ನು ಎಲ್ಲಾ ಗ್ರಾಮಗಳ ಸದ್ಭಕ್ತರು ಆಶಯ ವ್ಯಕ್ತಪಡೆಸುತ್ತಿದ್ದು, ತಾಲೂಕಿನ ಗಣ್ಯರು ಜಾತ್ರೋತ್ಸವದ ಮೂಲಕ ತಾಯಿಯ ಸೇವೆಯನ್ನು ಮಾಡಲು ಉತ್ಸುಕರಾಗಿದ್ದಾರೆ.
ರಾಜೂ ಹಿಂಡಿ : ನಾರಾಯಣಪುರದ ಭಕ್ತರು.
ವರ್ಷದಿಂದ ವರ್ಷಕ್ಕೆ ದೇವಿಯ ಮೂರ್ತಿಗಳು ಬಂಡೆಗಲ್ಲಿನ ಮೇಲೆ ಸ್ಪಷ್ಟವಾಗಿ ಬೆಳೆಯುತ್ತಿದ್ದು, ಈ ವಿಶೇಷ ಉದ್ಭವಮೂರ್ತಿ ಶ್ರೀ ದ್ಯಾಮವ್ವ ದೇವಿಯಲ್ಲಿ ಭಕ್ತರು ಕಾಯಿ, ತೊಟ್ಟಿಲು ಕಟ್ಟುವ ಮೂಲಕ ಅನೇಕ ಹರಿಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಇಷ್ಟಾರ್ತಗಳು ನೆರವೇರಿದ ಮೇಲೆ ಬಂದು ತಾಯಿಗೆ ವಿಷೇಶ ಪೂಜೆ ಸಲ್ಲಿಸಿ ಕೃತಾರ್ತರಾಗುತ್ತಾರೆ.
ಶೇಕಪ್ಪ ಹುಲ್ಮನಿ : ಶ್ರೀ ದೇವಿ ಆರಾಧಕರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 